ದೇಸಿ ಹಸುಗಳನ್ನು ಸಾಕಾಣಿಕೆ ಮಾಡುವ ರೈತರಿಗೆ ಮಧ್ಯಪ್ರದೇಶ ಸರ್ಕಾರ ಭಾರೀ ಪ್ರೋತ್ಸಾಹ ನೀಡುತ್ತಿದ್ದು, ದೇಸಿ ಹಸು ಸಾಕಾಣಿಕೆದಾರರಿಗೆ ಸರ್ಕಾರದ ವತಿಯಿಂದ ಬಂಪರ್ ಪ್ರೋತ್ಸಾಹ ಧನ ನೀಡುವುದಾಗಿ ಗುಡ್‌ನ್ಯೂಸ್ ಘೋಷಿಸಿದೆ.
ಹೌದು ರಾಜ್ಯದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು, ಸ್ಥಳೀಯ ಹಸುಗಳನ್ನು ಸಾಕಲು ಮಧ್ಯಪ್ರದೇಶ ಸರ್ಕಾರವು ರೈತರಿಗೆ ತಿಂಗಳಿಗೆ ₹ 900 ನೀಡಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಹೇಳಿದ್ದಾರೆ.
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
“ನೈಸರ್ಗಿಕ ಕೃಷಿಗೆ ದೇಸಿ ಹಸು ಅತ್ಯಗತ್ಯ. ದೇಸಿ ಹಸು ಇದ್ದರೆ ರೈತ ಸಾವಯವ ಗೊಬ್ಬರ ನಿರ್ವಹಣೆ ಮಾಡಲು ಹಾಗೂ ಉತ್ತಮ ಕೃಷಿ ಭೂಮಿ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ರೈತರಿಗೆ ದೇಸಿ ಹಸು ಸಾಕಣೆಗೆ ತಿಂಗಳಿಗೆ ₹ 900 ನೀಡಲು ನಿರ್ಧರಿಸಿದ್ದೇವೆ. ಈ ಮೂಲಕ ಒಂದು ವರ್ಷದಲ್ಲಿದೇಸಿ ಹಸು ಸಾಕುವ ರೈತನಿಗೆ ಒಟ್ಟು ₹ 10,800 ಸಿಗಲಿದೆ’ ಎಂದು ಸಿಎಂ ಹೇಳಿದರು.
20ನೇ ಜಾನುವಾರು ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದದಲ್ಲಿ ಸುಮಾರು 8.5 ಲಕ್ಷ ಬಿಡಾಡಿ ದನಗಳಿವೆ.
ನೆರೆಯ ಉತ್ತರ ಪ್ರದೇಶದ ಚುನಾವಣೆಯ ಸಮಯದಲ್ಲಿ ಪ್ರಮುಖ ರಾಜಕೀಯ ವಿಷಯವಾಗಿ ಮಾರ್ಪಟ್ಟಿರುವ, ಬಿಡಾಡಿ ದನಗಳ ಸಮಸ್ಯೆಯನ್ನು ನಿಭಾಯಿಸುವುದು ಯೋಜನೆಯ ಮತ್ತೊಂದು ಉದ್ದೇಶವಾಗಿದೆ. ಎಂದು ಮುಖ್ಯಮಂತ್ರಿ ಹೇಳಿದರು.
ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ
ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟವು ಈ ವಲಯಕ್ಕೆ ಉಪಕ್ರಮಗಳನ್ನು ತೆಗೆದುಕೊಳ್ಳಲು ನೈಸರ್ಗಿಕ ಕೃಷಿ ಅಭಿವೃದ್ಧಿ ಮಂಡಳಿಯನ್ನು ಅನುಮೋದಿಸಿತು. ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ನೀತಿ ವಿಷಯಗಳ ಬಗ್ಗೆ ನಿರ್ಧರಿಸಲು ಸಿಎಂ ನೇತೃತ್ವದಲ್ಲಿ ಸಮಿತಿಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದರು.
ನೈಸರ್ಗಿಕ ಕೃಷಿಯನ್ನು ಬೆಂಬಲಿಸಲು ಪ್ರತಿ ಬ್ಲಾಕ್‌ಗೆ ಐವರು ಕಾರ್ಮಿಕರನ್ನು ನೇಮಿಸಲಾಗುವುದು ಎಂದು ಸಿಎಂ ಹೇಳಿದರು. ಅವರು ನೈಸರ್ಗಿಕ ಕೃಷಿ ಮಾಡಲು ರೈತರನ್ನು ಪ್ರೇರೇಪಿಸುತ್ತಾರೆ. ಇದಕ್ಕಾಗಿ ನಾವು ಈ ಕಾರ್ಮಿಕರಿಗೆ ಗೌರವಧನವನ್ನೂ ನೀಡುತ್ತೇವೆ ಎಂದು ಸಿಎಂ ಹೇಳಿದರು.
ಕುರಿ, ಮೇಕೆ ಸಾಕಾಣಿಕೆದಾರರಿಗೆ ಭೀತಿ ಹುಟ್ಟಿಸಿದ ಹಿರೇಬೇನೆ..ಈ ರೋಗದ ತಡೆಗಟ್ಟುವಿಕೆ ಹೇಗೆ..?
ಹೈನುಗಾರಿಕೆಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಗೆ ಹೀಗೆ ಮಾಡಿ…
ದೇಸಿ ಗೋವುಗಳ ಸಾಕಾಣಿಕೆಯನ್ನು ಉತ್ತೇಜಿಸಲು, ಮುಖ್ಯಮಂತ್ರಿ ಚೌಹಾಣ್ ಅವರು ಹಸುಗಳ ಕಲ್ಯಾಣಕ್ಕಾಗಿ ವ್ಯವಹರಿಸಲು ಕೌ ಕ್ಯಾಬಿನೆಟ್ ಎಂಬ ಕ್ಯಾಬಿನೆಟ್ ಉಪಸಮಿತಿಯನ್ನು ರಚಿಸಲು ಈ ಹಿಂದೆ ನಿರ್ಧರಿಸಿದ್ದರು. ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಗೋಮೂತ್ರದಿಂದ ತಯಾರಿಸಿದ ಫಿನೈಲ್ ಅನ್ನು ಬಳಸಬೇಕು ಮತ್ತು ಸಾವಯವ ಗೊಬ್ಬರವನ್ನು ತಯಾರಿಸಲು ಗೋಮೂತ್ರವನ್ನು ಖರೀದಿಸಬೇಕು ಎಂದು ಸರ್ಕಾರ ಎಲ್ಲಾ ಇಲಾಖೆಗಳಿಗೆ ತಿಳಿಸಿತ್ತು.