Government Schemes

ಡೇರಿ ಉದ್ಯಮಕ್ಕೆ ಇಲ್ಲಿದೆ 25 ಲಕ್ಷ ಸಾಲ ಸೌಲಭ್ಯ!

20 April, 2022 12:00 PM IST By: Kalmesh T
25 lakh loan facility for Dairy Industry

ಕೃಷಿಗೆ ಸಂಬಂಧಿಸಿದ ಸಾಲಗಳನ್ನು ನೀಡುವ ಉತ್ತಮ ಬ್ಯಾಂಕ್‌ಗಳಲ್ಲಿ ನಬಾರ್ಡ್‌ (NABARD) ಬಹುಮುಖ್ಯವಾದ ಬ್ಯಾಂಕ್‌ ಆಗಿದೆ. ನಬಾರ್ಡ್‌ನಿಂದ ಪ್ರತಿವರ್ಷವೂ ಸರಾಸರಿ 90 ಸಾವಿರ ಕೋಟಿ ರುಪಾಯಿ ಬೆಳೆ ಸಾಲವನ್ನು ವಿನಾಯಿತಿ ಬಡ್ಡಿ ದರದಲ್ಲಿ ವಿತರಿಸಲಾಗುತ್ತದೆ. ಆದರೆ, ಪ್ರಸ್ತುತ ಹಣಕಾಸು ವರ್ಷದಲ್ಲಿ ಸಾಲದ ಪ್ರಮಾಣವನ್ನು 1.20 ಲಕ್ಷ ಕೋಟಿ ರುಪಾಯಿಗೆ ವಿಸ್ತರಿಸಲಾಗಿದೆ.

ವಾಸ್ತವವಾಗಿ ಕೇಂದ್ರ ಸರ್ಕಾರವು ಆರಂಭಿಸಿರುವ ಡೈರಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ ಡೇರಿ ಉದ್ಯಮ ಆರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ. ಡೇರಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ನಬಾರ್ಡ್‌ ಯೋಜನೆಯಡಿ ಹಣಕಾಸು ಒದಗಿಸಲಾಗುತ್ತಿದೆ.

ಇದನ್ನೂ ಓದಿರಿ:

ಹರಧೇನು ತಳಿಯ ಹಸು 50 ರಿಂದ 55 ಲೀಟರ್ ಹಾಲು ನೀಡುತ್ತದೆ!

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

NABARD ಯೋಜನೆ ಎಂದರೇನು?

ನಬಾರ್ಡ್ ಸಾಲ ಯೋಜನೆಯನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡುತ್ತಿದೆ. ಇದು ದೇಶದಲ್ಲಿ ವಾಸಿಸುವ ರೈತರಿಗೆ ಹೈನುಗಾರಿಕೆ (Dairy Farming) ಪ್ರಾರಂಭಿಸಲು ಅಥವಾ ಕೇಂದ್ರ ಸರ್ಕಾರದ ನೆರವಿನೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಸಾಲ ಒದಗಿಸುವ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಅನುಷ್ಠಾನ ಮಾಡುತ್ತಿರುವ 'ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ'ಯ ಮಾದರಿಯಲ್ಲಿ ಇದು ಕೃಷಿ ಕ್ಷೇತ್ರದ ಸಾಲ ಯೋಜನೆಯಾಗಿದೆ. ಆದರೆ, ಈ ಯೋಜನೆಯನ್ನು ಕೇವಲ ಹಾಲು ಉತ್ಪಾದನೆ ಹೆಚ್ಚಿಸಲು ಆರಂಭಿಸಲಾಗಿದೆ. ಈ ಯೋಜನೆಯ ಮೂಲಕ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಡೇರಿ ಉದ್ಯಮದಲ್ಲಿ ತೊಡಗಲು ಉತ್ತೇಜನ ನೀಡಲಾಗುತ್ತಿದೆ.

ಈ ಯೋಜನೆಯಡಿ, ಬ್ಯಾಂಕಿನಿಂದ ಡೈರಿ ವ್ಯವಹಾರಕ್ಕಾಗಿ (Dairy Industry) ಸಾಲ ತೆಗೆದುಕೊಳ್ಳುತ್ತೀರಿ ಎಂದಾದರೆ, ಈ ಸಾಲದ ಮೇಲೆ ಸಬ್ಸಿಡಿ (Subsidy) ಪಡೆಯುತ್ತೀರಿ. ಈ ಯೋಜನೆಯಡಿ ಸಾಲದ ಮೇಲೆ SC/ST ಫಲಾನುಭವಿಗಳಿಗೆ ಸುಮಾರು ಶೇ.33ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಶೇ.25ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಗರಿಷ್ಠ 25 ಲಕ್ಷ ರೂಪಾಯಿವರೆಗೆ ಸಾಲ ಪಡೆಯಲು ಅವಕಾಶವಿದೆ. ಇದರಿಂದ ಹೊಸದಾಗಿ ಡೇರಿ ಉದ್ಯಮ ಆರಂಭಿಸುವ ಪ್ರಾರಂಭಿಸುವರು ಸಾಲದ ಒತ್ತಡವಿಲ್ಲದೆ ಉದ್ಯಮ ಆರಂಭಿಸಬಹುದು.

Pig Farming:ಹಂದಿ ಸಾಕಾಣಿಕೆದಾರರಿಗೆ ಬಂಪರ್.. ಶೇ 98 ರಷ್ಟು ಸಬ್ಸಿಡಿ ಸಿಗುತ್ತೆ!

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ!

NABARD ಯೋಜನೆಗೆ ಅರ್ಹತೆಗಳು

ದೇಶದ ಯಾವುದೇ ರಾಜ್ಯದಲ್ಲಿ ವಾಸಿಸುವ ರೈತರು, ವೈಯಕ್ತಿಕ ಉದ್ಯಮಿಗಳು, ಎನ್‌ಜಿಒಗಳು, ಕಂಪನಿಗಳು, ಅಸಂಘಟಿತ ಮತ್ತು ಸಂಘಟಿತ ವಲಯದ ಗುಂಪುಗಳು ಇತ್ಯಾದಿಗಳು ಈ ಯೋಜನೆಯ ಲಾಭ ಪಡೆಯಲು ಅರ್ಹರು.

ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ವಾಣಿಜ್ಯೋದ್ಯಮಿ ಎಲ್ಲ ಘಟಕಗಳಿಗೆ ಈ ಯೋಜನೆಯಡಿ ಸಹಾಯ ಪಡೆಯಬಹುದು.

ಒಂದು ಕುಟುಂಬದ ಇಬ್ಬರು ಸದಸ್ಯರು ಸಹ ಈ ಯೋಜನೆಯ ಲಾಭ ಪಡೆಯಬಹುದು. ಆದರೆ, ಇದಕ್ಕಾಗಿ ಕೆಲವು ಷರತ್ತುಗಳನ್ನು ಹಾಕಲಾಗಿದೆ, ಅವರು ಕನಿಷ್ಠ 500 ಮೀಟರ್ ಅಂತರದಲ್ಲಿ ವಿವಿಧ ಸ್ಥಳಗಳು ಮತ್ತು ರಚನೆಗಳೊಂದಿಗೆ ಪ್ರಾರಂಭಿಸಬೇಕು.

ಯಾವುದೇ ಅರ್ಜಿದಾರರು ಈ ಯೋಜನೆಯಡಿ ಒಮ್ಮೆ ಮಾತ್ರ ಪ್ರಯೋಜನ ಪಡೆಯಬಹುದು.

ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 65 ವರ್ಷ.

ಅರ್ಜಿದಾರರು ಪ್ರಾಣಿಗಳನ್ನು ಸಾಕಲು ಮತ್ತು ಪೋಷಿಸಲು ಸೂಕ್ತ ಭೂಮಿ ಹೊಂದಿರಬೇಕು.

ಅರ್ಜಿ ಸಲ್ಲಿಕೆ ಹೇಗೆ?

ನೀವು NABARD ಯೋಜನೆಯ ಲಾಭವನ್ನು ಪಡೆಯಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಮೊದಲಿಗೆ ಯೋಜನೆಯ ಅಧಿಕೃತ ವೆಬ್‌ಸೈಟ್ (https://www.nabard.org/) ಗೆ ಭೇಟಿ ನೀಡಿ.

ನಂತರ ಮುಖಪುಟದಲ್ಲಿ ಕಾಣಿಸುವ ಮಾಹಿತಿ ಕೇಂದ್ರದ ಆಯ್ಕೆಯನ್ನು ಕ್ಲಿಕ್ ಮಾಡಿ.

ಇದರ ನಂತರ ನೀವು ಆನ್‌ಲೈನ್ ನಬಾರ್ಡ್ ಯೋಜನೆಗೆ ಅರ್ಜಿ ಸಲ್ಲಿಕೆ (ಅಪ್ಲೈ) ಬಟನ್‌ ಮೇಲೆ ಕ್ಲಿಕ್ ಮಾಡಿ.

ಇಲ್ಲಿ ನಿಮಗೆ ಡೇರಿ ಫಾರ್ಮಿಂಗ್ (Dairy Farming) ಸ್ಕೀಮ್ ಆನ್‌ಲೈನ್ ಅಪ್ಲಿಕೇಶನ್ ಪಿಡಿಎಫ್ ಆಯ್ಕೆ ನೀಡಲಾಗುವುದು, ಅದರ ಮೇಲೆ ಕ್ಲಿಕ್ ಮಾಡಿ.

ನಂತರ ಯೋಜನೆಯ ಫಾರ್ಮ್ (ಅರ್ಜಿ ನಮೂನೆ) ತೆರೆದುಕೊಳ್ಳುತ್ತದೆ. ನೀವು ಈ ಫಾರ್ಮ್ ಅನ್ನು ಭರ್ತಿ ಮಾಡಬಹುದು ಮತ್ತು ಅದರಲ್ಲಿ ಎಲ್ಲ ದಾಖಲೆಗಳನ್ನು ಲಗತ್ತಿಸಬಹುದು ಮತ್ತು ನೀವು ಯೋಜನೆಯ ಲಾಭವನ್ನು ಪಡೆಯಲು ಬಯಸುವ ನಿಮ್ಮ ಹತ್ತಿರದ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬಹುದು. ಹೀಗೆ ಸುಲಭವಾಗಿ ನಬಾರ್ಡ್ ಯೋಜನೆಯ ಲಾಭ ಪಡೆಯಬಹುದು.

TOMATO FARMING AT HOME! ಮನೆಯಲ್ಲಿ ಟೊಮೇಟೊ ಬೆಳೆಯುವುದು?

GOAT FARMING IN KARNATAKA 2022! ಮೇಕೆ ಸಾಕಾಣಿಕೆ! ಹೇಗೆ?