Food and Others

ಅವರೆಕಾಳಿನಲ್ಲಿದೆ ಹಲವು ವಿಟಮಿನ್‌, ಸೇವನೆಯಿಂದ ಆಗುವ ಲಾಭ ಗೊತ್ತಾ!

23 October, 2022 2:58 PM IST By: KJ Staff
Hyacinth bean

ಅವರೆಕಾಳು ಬಹುತೇಕರಿಗೆ ಅಚ್ಚುಮೆಚ್ಚು. ಅವರೆಕಾಳು ಸೇವನೆಯಿಂದ ಹಲವು ಲಾಭಗಳಿವೆ. ಅವರೆಕಾಳಿನ ಹಲವು ಉಪಯೋಗಗಳು ಬಗ್ಗೆ ತಿಳಿಯಿರಿ...

ಉದ್ಯೋಗ ಮೇಳ; 75 ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಣೆ !

Hyacinth bean ಅವರೆಕಾಳು ಮೂಲ ದಕ್ಷಿಣ ಅಮೆರಿಕಾ ಆದರೆ, ನಮ್ಮ ದೇಶದ ಆಹಾರ ಬೆಳೆಯಂತೆ ನಮ್ಮಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತದೆ.

ಅವರೆಕಾಳಿನಲ್ಲಿ ಹಲವು ವಿಟಮಿನ್‌ಗಳಿವೆ. ಅಲ್ಲದೇ ಖನಿಜಾಂಶಗಳು, ಪ್ರೋಟೀನ್ ಮತ್ತು ನಾರಿನಾಂಶವು ಇದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.  

ಅವರೆಕಾಳಿನಿಂದ ಸಿಗುವ ಪ್ರಮುಖ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ…. 

PM Kisan Samman Sammelan 2022: ರೈತರ ಖಾತೆಗೆ ಬರಲಿದೆ ನೇರವಾಗಿ 16,000 ಕೋಟಿ!

ಅವರೆಕಾಳು ವಿಟಮಿನ್ ಬಿಯಿಂದ ಸಮೃದ್ಧವಾಗಿದ್ದು, ಇದು ದೇಹದ ಅಂಗಾಂಶಗಳಿಗೆ ಬೇಕಾಗಿರುವಂತಹ ಶಕ್ತಿ ನೀಡುತ್ತದೆ.

ಅವರೆ ಕಾಳು ದೇಹಕ್ಕೆ ಅಗತ್ಯವಿರುವಂತಹ ಶಕ್ತಿ ಒದಗಿಸುವುದರೊಂದಿಗೆ ಮೆದುಳು ಮತ್ತು ನರಕೋಶಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿ ಆಗಿವೆ.

ಅವರೆಕಾಳನ್ನು ಬಳಸಿಕೊಂಡರೆ ಅದರಿಂದ ಮೆದುಳಿನ ಕ್ರಿಯೆಯು ಉತ್ತಮವಾಗುತ್ತದೆ.

ಇದರಲ್ಲಿ ಇರುವಂತಹ ತಾಮ್ರದ ಅಂಶವು ಮಾನಸಿಕ ನಿಶ್ಯಕ್ತಿ ಕಡಿಮೆ ಮಾಡುವುದು ಮತ್ತು ಏಕಾಗ್ರತೆ ವೃದ್ಧಿಸುವುದಕ್ಕೆ ಅತ್ಯಂತ ಸಹಕಾರಿ ಆಗಿದೆ. 

ತಾಮ್ರದ ಅಂಶವು ಮನಸ್ಥಿತಿ ಸುಧಾರಣೆ ಮಾಡುತ್ತದೆ. ಇನ್ನು ಅವರೆ ಕಾಳುನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಮೆದುಳಿನ ಅಂಗಾಂಶಗಳ ಸುರಕ್ಷತೆಗೆ ನೆರವಾಗುತ್ತದೆ.

ಇನ್ನಷ್ಟು ಓದಿರಿ: ಗುಡ್‌ನ್ಯೂಸ್‌: ಪ್ರಧಾನಿ ಮೋದಿಯಿಂದ ಯುವಕರಿಗೆ ಭರ್ಜರಿ ಉಡುಗೊರೆ, 10 ಲಕ್ಷ ಸಿಬ್ಬಂದಿ ನೇಮಕಾತಿ!

ನಿದ್ರಾಹೀನತೆ ತಗ್ಗಿಸಲು ಸಹಕಾರಿ

ಅವರೆಕಾಳನ್ನು ಸೇವಿಸುವುದರಿಂದ ಅಥವಾ ಆಹಾರದಲ್ಲಿ ಬಳಸುವುದರಿಂದ ಹಲವು ಉಪಯೋಗಗಳಿವೆ. ಅವುಗಳಲ್ಲಿ ನಿದ್ರಾಹೀನತೆ ತಗ್ಗಿಸುವುದು ಸಹ ಒಂದಾಗಿದೆ.

ಅವರೆಕಾಳನ್ನು ಸೇವನೆ ಮಾಡುವುದರಿಂದಾಗಿ ಇದರಲ್ಲಿ ಇರುವ ಪೋಷಕಾಂಶಗಳು ಮೆದುಳಿಗೆ ಒಳ್ಳೆಯದು.

ಅವರೆಕಾಳಿನಲ್ಲಿರುವ ಮೆಗ್ನಿಶಿಯಂ ಅಂಶವು ಮನಸ್ಥಿತಿ ಸುಧಾರಣೆ ಮಾಡುವುದು. ಮೆಗ್ನಿಶಿಯಂ ನಿದ್ರಾಹೀನತೆಯನ್ನು ತಗ್ಗಿಸುವುದು.

ಇದನ್ನು ಸೇವನೆ ಮಾಡಿದರೆ ಅದರಿಂದ ರಾತ್ರಿ ವೇಳೆ ಒಳ್ಳೆಯ ನಿದ್ರೆ ಬರುತ್ತದೆ ಎನ್ನುವುದು ವರದಿಗಳಲ್ಲಿ ಸಾಬೀತಾಗಿದೆ. 

ರಕ್ತದೊತ್ತಡ ತಗ್ಗಿಸಲು ಅನುಕೂಲಕರ 

ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಅವರೆ ಕಾಳು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.

ಇದರಲ್ಲಿ ಉತ್ತಮ ಪ್ರಮಾಣದ ಪೊಟಾಶಿಯಂ ಅಂಶವಿದ್ದು, ಆರೋಗ್ಯಕ್ಕೆ ಲಾಭಕಾರಿಯಾಗಿದೆ. 

ಪೊಟಾಶಿಯಂ ರಕ್ತನಾಳಗಳನ್ನು ಅಗಲವಾಗಿಸುವುದು ಮತ್ತು ಇದರಿಂದ ರಕ್ತವು ಸರಾಗವಾಗಿ ಹರಿದುಹೋಗಲು ಸಹಕಾರಿ. ಇದರಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ.

ಕ್ಯಾನ್ಸರ್ ಅಪಾಯ ದೂರ

ಅವರೆ ಕಾಳನ್ನು ಸೇವನೆ ಮಾಡುವುದರಿಂದ ಇರುವ ಉಪಯೋಗಗಳಲ್ಲಿ ಕ್ಯಾನ್ಸರ್‌ ತಡೆಗೆ ಸಹಕಾರಿ ಆಗುವುದು ಸಹ ಒಂದು ಪ್ರಮುಖ ಅಂಶವಾಗಿದೆ. 

Hyacinth bean ಅವರೆಕಾಳಿನಲ್ಲಿ ಸತುವಿನ ಅಂಶವು ಉತ್ತಮ ಪ್ರಮಾಣದಲ್ಲಿದೆ. ಸತು ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುವುದರೊಂದಿಗೆ ಹಲವಾರು ರೀತಿಯ ಅನಾರೋಗ್ಯಗಳನ್ನು ಕಡಿಮೆ ಮಾಡಲು ಇದು ಸಹಕಾರಿ.

ಪಿಎಂ ಉಜ್ವಲ ಯೋಜನೆಯಡಿ ಸರ್ಕಾರದಿಂದ ದೊರೆಯಲಿವೆ 2 ಉಚಿತ ಸಿಲೆಂಡರ್! ಯಾರು ಅರ್ಹರು ಗೊತ್ತೆ?

ಜೀರ್ಣಕ್ರಿಯೆ ವೃದ್ಧಿ

ಅವರೆ ಕಾಳಿನಲ್ಲಿ ಉತ್ತಮ ಪ್ರಮಾಣದ ನಾರಿನಾಂಶವು ಇದೆ. ಇದನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿಕೊಳ್ಳುವುದರಿಂದ ಜೀರ್ಣಕ್ರಿಯೆಯು ಸುಧಾರಣೆ ಆಗುವುದು.

ಅವರೆಕಾಳಿನಲ್ಲಿ ಇರುವ ನಾರಿನಾಂಶವು ಕರುಳಿನ ಕ್ರಿಯೆ ಸುಧಾರಣೆ ಮಾಡುವುದು. ನಾರಿನಾಂಶವು ಕರುಳಿನ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡಲು ಉಪಯೋಗಕಾರಿ ಆಗಿದೆ.

ತೂಕ ಇಳಿಸುವುದಕ್ಕೆ ಸಹಕಾರಿ

ತೂಕ ಹೆಚ್ಚಾಗಿ ಇರುವವರು ಅವರೆಕಾಳನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ. ಇದು ತೂಕ ಇಳಿಸಲು ಸಹಕಾರಿ. ಅಷ್ಟೇ ಅಲ್ಲದೇ ಸ್ನಾಯುಗಳನ್ನು ಬಲಪಡಿಸುವುದು ಜೊತೆಗೆ ಚಯಾಪಚಯವನ್ನು ವೃದ್ಧಿಸಲು ನೆರವಾಗುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ

ಅವರೆಕಾಳಿನಲ್ಲಿ ಕ್ಯಾಲ್ಸಿಯಂ calcium ಉತ್ತಮ ಪ್ರಮಾಣದಲ್ಲಿದೆ ಮತ್ತು ಇದು ಅಸ್ಥಿರಂಧ್ರತೆ ಸಮಸ್ಯೆಯ ವಿರುದ್ಧ ಹೋರಾಡಲು ತುಂಬಾ ಪರಿಣಾಮಕಾರಿ ಆಗಿದೆ.

ಅದೇ ರೀತಿಯಾಗಿ ಇದರಲ್ಲಿ ಇರುವ ಪೋಸ್ಪರಸ್ ಅಂಶ ಕೂಡ ಮೂಳೆಗಳಿಗೆ ಒಳ್ಳೆಯದು. ಪೋಸ್ಪರಸ್ ಕೂಡ ಮೂಳೆಗಳನ್ನು ಬಲಿಷ್ಠವಾಗಿಡುವುದಕ್ಕೆ ಬಳಸಬಹುದಾಗಿದೆ.

ಶ್ವಾಸಕೋಶದ ಕಾರ್ಯ ಸುಧಾರಣೆ

ಬ್ರಾಂಕೈಟಿಸ್ ಮತ್ತು ಇತರ ಕೆಲವೊಂದು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಇರುವವರು ಅವರೆ ಕಾಳನ್ನು ಸೇವನೆ ಮಾಡುವುದರಿಂದ ಲಾಭವಾಗಲಿದೆ.

ಇದು ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ವಾಯುನಾಳವನ್ನು ತಡೆಯುತ್ತದೆ. ಇದರಿಂದ ಸಮರ್ಪಕವಾಗಿ ಉಸಿರಾಡಲು ಸಹಕಾರಿ ಆಗುತ್ತದೆ.