ಹೋಟೆಲ್‌ಗಳಲ್ಲಿ ಪ್ರಸಿದ್ಧವಾಗಿರುವ ಹಾಗೂ ಬಾಯಲ್ಲಿ ನೀರೂರಿಸುವ ಆಹಾರ ಪದಾರ್ಥಗಳಲ್ಲಿ ಬಟರ್ ಚಿಕನ್ ಮಸಾಲ ಸಹ ಒಂದು.
ಸಾಮಾನ್ಯ ಹೋಟೆಲ್‌ನಿಂದ ಪ್ರಾರಂಭವಾಗಿ 5 ಸ್ಟಾರ್ ಹೋಟೆಲ್‌ನ ವರೆಗೆ ಈ ಬಟರ್ ಚಿಕನ್ ಎನ್ನುವುದು ಫೇಮಸ್.
ಇದನ್ನು ನೀವು ಸುಲಭವಾಗಿ ಮನೆಯಲ್ಲಿಯೂ ಮಾಡಬಹುದು. ಸಾಮಾನ್ಯವಾಗಿ ಮಾಡುವ ಚಿಕನ್ ಫ್ರೈ ಅಥವಾ ಸಾಂಬಾರಿನಂತೆ ಬಟರ್ ಚಿಕನ್ ಸಹ ಮಾಡಬಹುದು.
ಆಗಿದ್ದರೆ. ಅದನ್ನು ಮಾಡುವ ವಿಧಾನ ಏನು, ಯಾವೆಲ್ಲ ಪದಾರ್ಥ ಬೇಕು ಎನ್ನುವುದನ್ನು ನೋಡೋಣ ಬನ್ನಿ!
ಬಟರ್ ಚಿಕನ್‌ಗೆ ಬೇಕಾಗುವ ವಸ್ತುಗಳು
- ಕೋಳಿಯ ಮಾಂಸ
- ಬೆಣ್ಣೆ ಅಂದಾಜು 25 ಗ್ರಾಂ
- ಉಪ್ಪು (ರುಚಿಗೆ ಅನುಗುಣವಾಗಿ)
- ಸೋಯಾ ಸಾಸ್ (ಒಂದು ಚಮಚ)
- ವಿನೆಗರ್ (ಚಿಟಿಕೆಯಷ್ಟು)
- ಎಣ್ಣೆ (ಒಂದು ಚಮಚ)
- ಮೊಟ್ಟೆ (ಒಂದು)
- ಹಸಿಮೆಣಸಿನಕಾಯಿ (ಎರಡು)
- ಕಾರ್ನ್ ಫ್ಲೋರ್ (ಎರಡು ಚಮಚ)
- ಕಾಳುಮೆಣಸಿನ ಪುಡಿ ಮತ್ತು ಕಾರದ ಪುಡಿ (ಒಂದು ಚಮಚ)
- ಬೆಳ್ಳುಳ್ಳಿ (ಐದರಿಂದ ಆರು)
- ಶುಂಠಿ, ಬೆಳ್ಳುಳ್ಳಿ ಮಿಶ್ರಣ (ಎರಡು ಚಮಚ)
- ಕೊತ್ತಂಬರಿ (ಒಂದು ಎಳೆ)
- ಈರುಳ್ಳಿ (ಸ್ವಲ್ಪ)
- ಮೊಸರು
ಬ್ಯಾಚುಲರ್‌ಗಳಿಗಾಗಿ ಫಟಾಫಟ್ ಚಿಕನ್ ಪೆಪ್ಪರ್ ಡ್ರೈ ಮಾಡುವ ಸರಳ ವಿಧಾನ ಇಲ್ಲಿದೆ
ಇವು ಬಟರ್ ಚಿಕನ್‌ಗೆ ಬೇಕಾಗುವ ಸಾಮಾಗ್ರಿಗಳು ಇನ್ನು ಈ ಬಟರ್ ಚಿಕನ್ ಮಾಡುವ ವಿಧಾನ ಹೇಗೆ ಎನ್ನುವುದನ್ನು ನೋಡುವುದಾದರೆ,
ಮೊದಲಿಗೆ ಎರಡು ಬಾರಿ ಚಿಕನ್ ಅನ್ನು ಸ್ವಚ್ಚವಾಗಿ ತೊಳೆದುಕೊಳ್ಳಿ. ಚಿಕನ್ ಸ್ವಚ್ಚ ಮಾಡುವ ಸಂದರ್ಭದಲ್ಲಿ ಚಿಟಿಕೆಯಷ್ಟು
ಉಪ್ಪು ಹಾಗೂ ಅರಿಶಿನ ಪುಡಿಯನ್ನು ಬೆರೆಸಿ ಸ್ವಚ್ಚ ಮಾಡಿಕೊಳ್ಳಿ ಇದರಿಂದ ಚಿಕನ್ ಸ್ವಚ್ಚವಾಗುವುದರೊಂದಿಗೆ, ಚಿಕನ್ ವಾಸನೆ ಕಡಿಮೆ ಆಗಲಿದೆ.
ಇನ್ನು ಮೊದಲು ಚಿಕನ್ಗೆ ಅಲ್ಪ ಪ್ರಮಾಣದಲ್ಲಿ ಉಪ್ಪು, ಮೊಟ್ಟೆಯ ಬಿಳಿಯ ಭಾಗ, ಸೋಯಾ, ವಿನಿಗರ್, ಕಾಳು ಮೆಣಸಿನಪುಡಿ ಮತ್ತು
ಶುಂಠಿ-ಬೆಳ್ಳುಳ್ಳಿ ಮಿಶ್ರಣವನ್ನು ಸೇರಿಸಿ, ಚಂದವಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಒಂದರ್ಧರತಾಸು ಮುಚ್ಚಿಡಿಬೇಕು.
Chicken And Fish: ಚಿಕನ್ & ಮೀನು ಯಾವುದು ಬೆಸ್ಟ್..!
ಪಾತ್ರೆಯೊಂದರಲ್ಲಿ ಅಲ್ಪ ಪ್ರಮಾಣದಲ್ಲಿ ಎಣ್ಣೆ ಹಾಕಿ ಈಗಾಗಲೇ ಮಿಶ್ರಣ ಮಾಡಿಕೊಂಡ ಪದಾರ್ಥಗಳನ್ನು ತಳ ಹಿಡಿಯದ ರೀತಿಯಲ್ಲಿ ಲಘುವಾಗಿ ಬೇಯಿಸಿಕೊಳ್ಳಿ,
ಎಣ್ಣೆ ಉಗುರು ಬೆಚ್ಚಗೆ ಆಗುತ್ತಿದ್ದಂತೆಯೇ ಚಿಕನ್ ತುಂಡುಗಳನ್ನು ನಿಧಾನವಾಗಿ ಅದಕ್ಕೆ ಹಾಕಿ.
ನಂತರ ಬೋಂಡ ಸುಡುವ ರೀತಿಯಲ್ಲಿ ಎಣ್ಣೆಯಲ್ಲಿ ಕಾಯಿಸಿಕೊಳ್ಳಿರಿ. ಈ ಹಂತದಲ್ಲಿಯೇ ಕಾರ್ನ್ ಫ್ಲೋರ್ ಮಿಶ್ರಣ ಮಾಡಿಟ್ಟುಕೊಂಡರೆ ಉತ್ತಮ.
ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಬೆಣ್ಣೆ, ಬೆಳ್ಳುಳ್ಳಿ ಹಾಕಿ ಹುರಿದುಕೊಳ್ಳಿ.
ಇದಾದ ನಂತರದಲ್ಲಿ ಹಸಿ ಮೆಣಸಿನಕಾಯಿ ಹಾಗೂ ಈರುಳ್ಳಿ ಸೇರಿಸಿ.
ಒಂದೈದು ಸೆಕೆಂಡುಗಳ ಕಾಲ ಕಾಳುಮೆಣಸಿನ ಪುಡಿ, ಉಪ್ಪು, ಮಿಶ್ರಣ ಮಾಡಿಟ್ಟ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
ಹದಕ್ಕೆ ಬಂದ ಮೇಲೆ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ. ಈಗಾಗಲೇ ಹುರಿದಿರಿಸಿಕೊಂಡ ಚಿಕನ್ ಪೀಸ್‌ಗಳನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿ ಒಂದೆರಡು ನಿಮಿಷ ಬಿಡಿ.
ನಂತರ ಬಟರ್ ಚಿಕನ್ ಮೇಲೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಹಾಕಿ.
ಈಗ ಬಿಸಿ ಬಿಸಿ ಸವಿಯಲು ಬಟರ್ ಚಿಕನ್ ರೆಡಿ!