ಈ ರೆಸಿಪಿಯಲ್ಲಿ ಕಡಿಮೆ ಸಮಯದಲ್ಲಿ ಶುಚಿರುಚಿ ಚಿಕನ್ ಪೆಪ್ಪರ್ ಡ್ರೈ ಫಟಾಫಟ್ ಎಂದು ಹೇಗೆ ಮಾಡುವುದು ಎನ್ನುವುದನ್ನು ನೋಡೋಣ…
ಬ್ಯಾಚುಲರ್‌ಗಳಿಗೆ ಮಾಂಸಾಹಾರ ಸೇವನೆ ಮಾಡುವುದಕ್ಕೆ ವಾರಒಪ್ಪೊತ್ತಿನ ಜಂಜಾಟವಿಲ್ಲ. ಸಮಯದ್ದೇ ಸವಾಲು ಹೀಗಾಗಿ, ಸರಳ ವಿಧಾನವನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ.
ಮೊದಲು ಚಿಕನ್ ಅನ್ನು ಶುಚಿಯಾಗಿ ತೊಳೆದುಕೊಳ್ಳಿ, ಸ್ವಲ್ಪ ಅರಿಶಿನಪುಡಿ ಹಾಗೂ ಒಂದು ಟೇಬಲ್ ಸ್ಪೂನ್ನಷ್ಟು ಉಪ್ಪು ಹಾಕಿಕೊಳ್ಳಿ ನಂತರ ಮತ್ತೊಮ್ಮೆ ತೊಳೆಯಿರಿ. ಈ ರೀತಿ ಮಾಡುವುದರಿಂದ ಚಿಕನ್‌ಗೆ ಮೆತ್ತಿಕೊಂಡಿರುವ ರಕ್ತದ ವಾಸನೆ ಹೋಗುತ್ತದೆ.
ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದ ಉದ್ಯಮಿ ಗೌತಮ್ ಅದಾನಿ ಔಟ್!
ನಂತರ ಈರುಳ್ಳಿ ಮತ್ತು ಟೊಮ್ಯಾಟೊವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ, ಹೆಚ್ಚು ಗ್ರೇವಿ ಅವಶ್ಯವಿದ್ದರೆ ಒಂದೆರಡು ಈರುಳ್ಳಿಯನ್ನು ಸ್ವಲ್ಪ ಹೆಚ್ಚಾಗಿ ಕತ್ತರಿಸಿಕೊಳ್ಳಿ. ಹಸಿಮೆಣಸಿನಕಾಯಿ ಹಚ್ಚಿಕೊಳ್ಳಿ. ಈಗೆಲ್ಲ ಚಿಕನ್ ಅಂಗಡಿಗಳಲ್ಲೇ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಗೂ ಚಿಕನ್ ಮಸಾಲೆ ಚಿಕನ್ ಅಂಗಡಿಗಳಲ್ಲೇ ಸಿಗುತ್ತದೆ.
ಚಿಕನ್ ತೆಗೆದುಕೊಳ್ಳುವಾಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಗೂ ಚಿಕನ್ ಮಸಾಲೆ ತೆಗೆದುಕೊಳ್ಳಿ.
ಚಿಕನ್ ಪೆಪ್ಪರ್ ಡ್ರೈ ಮಾಡುವುದಕ್ಕೆ ಏನೆಲ್ಲ ಬೇಕು
ಚಿಕನ್ ಪೆಪ್ಪರ್ ಡ್ರೈ ನಾಲ್ಕೈದು ಸಮಾಗ್ರಿಗಳಲ್ಲಿ ಮಾಡಬಹುದು. ಮೊದಲನೆಯದಾಗಿ ಅರ್ಧ ಕೆ.ಜಿ ಕೋಳಿ ಮಾಂಸ (ಸಣ್ಣ ಗಾತ್ರದಲ್ಲಿ ತುಂಡು ಮಾಡಿಸಿಕೊಳ್ಳಿ) ಈರುಳ್ಳಿ ಮೂರರಿಂದ ನಾಲ್ಕು, ಹಸಿಮೆಣಸಿನಕಾಯಿ ಎರಡರಿಂದ ಮೂರು, ಟೊಮ್ಯಾಟೋ ಒಂದು,
ಕಾಳು ಮೆಣಸಿನ ಪುಡಿ ಶುಂಠಿ, ಬೆಳ್ಳುಳ್ಳಿ ಪೆಸ್ಟ್ ಕೊತ್ತಂಬರಿ ಸೊಪ್ಪು ಅರಿಶಿನ ಪುಡಿ ಖಾರದ ಪುಡಿ ನಿಂಬೆಹಣ್ಣು ಉಪ್ಪು ಇವಿಷ್ಟಿದ್ದರೆ ರುಚಿರುಚಿ ಚಿಕನ್ ಪೆಪ್ಪರ್ ಫ್ರೈ ಮಾಡಬಹುದು.
ಸಾವಿನ ನಂತರವೂ ಆತ್ಮೀಯರೊಂದಿಗೆ ಗೊಬ್ಬರ ರೂಪದಲ್ಲೂಳಿವ ಪರಿಕಲ್ಪನೆ!
ಚಿಕನ್ ಪೆಪ್ಪರ್ ಪ್ರೈ ಮಾಡುವ ಹಂತ
ಮೊದಲು ಈರಳ್ಳಿ, ಟೊಮ್ಯಾಟೋ ಸಣ್ಣದಾಗಿ ಕತ್ತರಿಸಿಕೊಳ್ಳಿ. ಹಸಿಮೆಣಸಿನಕಾಯಿ ಒಂದರಲ್ಲಿ ನಾಲ್ಕು ತುಂಡು ಮಾಡಿ ಕತ್ತರಿಸಿ ಇಟ್ಟುಕೊಳ್ಳಿ.
ಇವಿಷ್ಟು ಆದ ಮೇಲೆ ಒಂದು ಪಾತ್ರೆಯಲ್ಲಿ (ಬಾಣಲೆ)ಇದ್ದರೆ ಉತ್ತಮ.
ಸ್ವಲ್ಪ ಎಣ್ಣೆ ಹಾಕಿ ನಂತರ ಎಣ್ಣೆ ಹದವಾಗಿ ಕಾದ ಮೇಲೆ ಈರುಳ್ಳಿ ಕೆಂಪಾಗಿ ಗರಿಗರಿ ಆಗುವ ವರೆಗೆ ಫ್ರೈ ಮಾಡಿಕೊಳ್ಳಿ ನಂತರ ಹಸಿಮೆಣಸಿನಕಾಯಿ ಸೇರಿಸಿ.
ಈರುಳ್ಳಿ ಫ್ರೈ ಆದ ಮೇಲೆ ಟೊಮ್ಯಾಟೋ ಹಾಕಿ ಫ್ರೈ ಮಾಡಿಕೊಳ್ಳಿ, ನಂತರದಲ್ಲಿ ಕೋಳಿ ಮಾಂಸವನ್ನು ಅದಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹದವಾಗಿ ಬೇಯಿಸಿ. ಮೂರರಿಂದ ನಾಲ್ಕು ಚಮಚ ಕಾಳು ಮೆಣಸಿನ ಪುಡಿ, ಖಾರಪ್ರಿಯರಾಗಿದ್ದರೆ, ಇನ್ನೊಂದು ಚಮಚ ಜಾಸ್ತಿ ಹಾಕಿಕೊಳ್ಳಬಹುದು.
ಒಂದು ಚಮಚ ಖಾರದ ಪುಡಿ ಹಾಗೂ ಚಿಕನ್ ಮಸಾಲ ಪೌಡರ್ ಎರಡು ಚಮಚ ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಬೇಯಿಸಿಕೊಳ್ಳಿ. ನಿಂಬೆಹಣ್ಣಿನ ರಸ ಸಿಂಪಡಿಸಿ, ಎಲ್ಲ ಮುಗಿದು ಉಳಿಸುವ ಮುನ್ನ ಸಣ್ಣದಾಗಿ ಕೊತ್ತಂಬರಿಯನ್ನು ಕತ್ತರಿಸಿ ಹಾಕಿ.
ಫಟಾಫಟ್ ಚಿಕನ್ ಪೆಪ್ಪರ್ ಫ್ರೈ ರೆಡಿ! ಇದನ್ನು ನೀವು ಚಪಾತಿ, ರೊಟ್ಟಿ ಇಲ್ಲ ಅನ್ನದೊಂದಿಗೂ ಕಲಸಿಕೊಂಡು ಸೇವಿಸಬಹುದು.
Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು, ಯಾರೆಲ್ಲ ಇದಕ್ಕೆ ಅರ್ಹರು ಇಲ್ಲಿದೆ ಸಂಪೂರ್ಣ ಮಾಹಿತಿ!