ಬಾಳೆಹಣ್ಣು ಯಾವುದೇ ಋತುವಿನಲ್ಲಿ ಲಭ್ಯವಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದಕ್ಕೇ ವೈದ್ಯರು ಹೇಳುವುದು ಸಕ್ಕರೆ ಖಾಯಿಲೆ ಇಲ್ಲದಿದ್ದರೆ ಪ್ರತಿದಿನ ಒಂದು ಬಾಳೆಹಣ್ಣನ್ನಾದರೂ ಸೇವಿಸಿ. ಬಾಳೆಹಣ್ಣುಗಳು ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿವೆ.
ಸುಲಭವಾಗಿ ಜೀರ್ಣವಾಗುತ್ತದೆ. ಮಲಬದ್ಧತೆ ಇರುವವರಿಗೆ ತುಂಬಾ ಒಳ್ಳೆಯದು. ಅಜೀರ್ಣವನ್ನು ನಿವಾರಿಸುತ್ತದೆ. ಆದ್ದರಿಂದಲೇ ಯಾವುದೇ ಶುಭ ಕಾರ್ಯಗಳಿಗೆ ಬಾಳೆ ಹಣ್ಣನ್ನು ಹೆಚ್ಚಾಗಿ ಬಳಸುತ್ತಾರೆ. ಈ ವಿಶೇಷ ಬಾಳೆಹಣ್ಣಿನ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣವೇ..?
ಚಳಿಗಾಲದಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಉತ್ತಮವೇ..? ತಜ್ಞರು ಹೇಳೊದೇನು..?
ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ಅಸ್ತಮಾ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಕಿಡ್ನಿ ಆರೋಗ್ಯಕ್ಕೂ ಬಾಳೆಹಣ್ಣು ಸಹಕಾರಿ. ವಾರದಲ್ಲಿ ಎರಡು ಅಥವಾ ಮೂರು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಕಿಡ್ನಿ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ಇದರಲ್ಲಿ ನಾರಿನಂಶ ಅಧಿಕವಾಗಿದೆ. ಆದ್ದರಿಂದ ಮಲಬದ್ಧತೆಗೆ ಉತ್ತಮ ಪರಿಹಾರ.
ಬಾಳೆಹಣ್ಣಿನಲ್ಲಿ ಕೊಬ್ಬು ಕಡಿಮೆ. ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ತಿನ್ನಬಹುದು. ಇದರಲ್ಲಿರುವ ಪಿಷ್ಟದ ಅಂಶವು ಪೂರ್ಣತೆಯ ಭಾವನೆಯನ್ನು ನೀಡುತ್ತದೆ ಮತ್ತು ಹಸಿವನ್ನು ನಿಗ್ರಹಿಸುತ್ತದೆ.
Top News |ಆಫೀಸ್ ಮುಂದೆ ಎತ್ತು ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ರೈತನಿಗೆ ಬಿತ್ತು ಭಾರೀ ದಂಡ
ಬಾಳೆಹಣ್ಣು ಕರುಳನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಬಾಳೆ ಹಣ್ಣಿನಲ್ಲಿರುವ 'ಬಾನ್ಲೆಕ್' ರಾಸಾಯನಿಕವು ಏಡ್ಸ್ ವೈರಸ್ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಲೆಕ್ಟಿನ್ ಎಂಬ ರಾಸಾಯನಿಕವು ವೈರಸ್ ಅನ್ನು ದೇಹಕ್ಕೆ ಪ್ರವೇಶಿಸದಂತೆ ತಡೆಯುತ್ತದೆ ಮತ್ತು ಸೋಂಕನ್ನು ತಡೆಯುತ್ತದೆ.
ಬಾಳೆಹಣ್ಣಿನಲ್ಲಿರುವ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವು ದೇಹವನ್ನು ಪ್ರವೇಶಿಸಿದಾಗ ಸಿರೊಟೋನಿನ್ ಆಗಿ ಪರಿವರ್ತನೆಯಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೆ ನೆಮ್ಮದಿ ತರುತ್ತದೆ. ರಾತ್ರಿ ಹಾಲಿನೊಂದಿಗೆ ಸೇವಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ.