Animal Husbandry

#WorldJellyfishDay: ಇಂದು ವಿಶ್ವ ಜೆಲ್ಲಿ ಮೀನು ದಿನ: ಅತ್ಯಂತ ಕುತೂಹಲ ಸೃಷ್ಟಿಸಿದ ಈ ಮೀನಿನ ಬಗ್ಗೆ ಇಲ್ಲಿದೆ ಮಾಹಿತಿ…

03 November, 2022 10:39 AM IST By: Kalmesh T
Today is World Jellyfish Day: Here is information about this fish…

World Jellyfish Day: ಜೆಲ್ಲಿ ಮೀನು ಎಂದರೆ ಏನು? ಜೆಲ್ಲಿ ಮೀನನ್ನು ಎಷ್ಟು ಜನ ನೋಡಿದ್ದಾರೆ? ಜೆಲ್ಲಿ ಮೀನಿನ ಕುರಿತು ಎಷ್ಟು ಜನರಿಗೆ ಮಾಹಿತಿ ಇದೆ?

World Snake Day: “ವಿಶ್ವ ಹಾವುಗಳ ದಿನ”ದ ಕುರಿತು ನಾಗರಾಜ್ ಬೆಳ್ಳೂರು ಅವರು ಬರೆದ ಕುತೂಹಲಕಾರಿ ಲೇಖನ!

ಜಗತ್ತಿನಲ್ಲಿ ನಮ್ಮ ನೋಟಕ್ಕೆ ಸಿಲುಕದ, ನಮ್ಮ ತರ್ಕಕ್ಕೆ ನಿಲುಕದ ಸಾಕಷ್ಟು ಸಂಗತಿಗಳು ಇವೆ. ಕೆಲವೊಂದಿಷ್ಟು ಎಷ್ಟೆ ಪ್ರಯತ್ನಪಟ್ಟರೂ ಬಗೆಹರಿಸಲಾಗಿಲ್ಲ. ಇನ್ನೂ ಕೆಲವು ವಿಜ್ಞಾನಿಗಳ ಸಂಶೋಧನೆಯಿಂದ ತಿಳಿದು ಬಂದಿವೆ.

ಅಂತಹ ಕೆಲವು ಜೀವಿಗಳಲ್ಲಿ ಈ ಜೆಲ್ಲಿ ಮೀನು (Jelly Fish) ಕೂಡ ಒಂದು. ಜೆಲ್ಲಿ ಮೀನು ಎಂದರೆ ಏನು? ಜೆಲ್ಲಿ ಮೀನನ್ನು ಎಷ್ಟು ಜನ ನೋಡಿದ್ದಾರೆ? ಜೆಲ್ಲಿ ಮೀನಿನ ಕುರಿತು ಎಷ್ಟು ಜನರಿಗೆ ಮಾಹಿತಿ ಇದೆ?

ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಮ್ಮಲ್ಲಿವೆ. ಅಂತ ಪ್ರಶ್ನೆಗಳಿಗೆ ಒಂದಷ್ಟಾದರೂ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು! ಇಲ್ಲಿದೆ “ಮೇ 20 - ವಿಶ್ವ ಜೇನು ದಿನ”ದ ನಿಮಿತ್ತ ಕುತೂಹಲಕಾರಿ ಲೇಖನ

World Jellyfish Day: ಇಂತಹ ನಿಗೂಢ ಜೀವಿಗಳ ಕುರಿತು ಕೂಡ ದಿನಗಳನ್ನ ಆಚರಿಸಲು ಮತ್ತು ಪ್ರಪಂಚದಾದ್ಯಂತ ಅವುಗಳನ್ನು ಸುರಕ್ಷಿತವಾಗಿರಿಸಲು ಒಂದಷ್ಟು ಮಾರ್ಗಗಳ ಕುರಿತು ಯೋಚಿಸಲು ಇದು ವಿಶೇಷ ದಿನವಾಗಿದೆ.

"ಲಂಡನ್ ಸೀ ಲೈಫ್ ಅಕ್ವೇರಿಯಂ"ನಲ್ಲಿ ಬ್ಯಾರೆಲ್ ಜೆಲ್ಲಿ ಮೀನುಗಳಿಗಾಗಿ ವಿಶೇಷ ಪ್ರದರ್ಶನವಿದೆ.

ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಜೆಲ್ಲಿ ಮೀನುಗಳನ್ನು ಬೆಳೆಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ. ಇದು ವಿಶ್ವದಲ್ಲೇ ಮೊದಲನೆಯದು!

ವಿಚಿತ್ರ ಜೀವಿಗಳು ಹೆಚ್ಚಾಗಿ ನೀರಿನಿಂದ ಮಾಡಲ್ಪಟ್ಟಿದೆ ಮತ್ತು ಮೆದುಳು, ರಕ್ತ ಅಥವಾ ಮೂಳೆಗಳಿಲ್ಲ ಎಂದು ತಿಳಿದು ಬಂದಿದೆ.

ಜೂನ್‌ 1 "ವಿಶ್ವ ಹಾಲು ದಿನ": ಹಾಲಿನ ಪ್ರಾಮುಖ್ಯತೆ ಮತ್ತು ಅದರ ವಿಶಿಷ್ಟ ಪ್ರಯೋಜನಗಳೇನು ಗೊತ್ತಾ?

ನೂರಾರು ಮಿಲಿಯನ್ ವರ್ಷಗಳಷ್ಟು ಹಳೆಯವು ಈ ಜೆಲ್ಲಿ ಮೀನುಗಳು

World Jellyfish Day: ಡೈನೋಸಾರ್‌ಗಳಿಗಿಂತ ಮೊದಲು ಜೆಲ್ಲಿ ಮೀನುಗಳು ಇದ್ದವು ಎಂದರೆ ನಿಜಕ್ಕೂ ಇದು ಅಚ್ಚರಿಯ ಸಂಗತಿ ಅಲ್ಲವೇ!

ಅವು 500 ಮಿಲಿಯನ್ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದಲೂ ಸೃಷ್ಟಿಯಲ್ಲಿವೆ. ವಿಜ್ಞಾನಿಗಳು 2005 ರಲ್ಲಿ 505 ಮಿಲಿಯನ್-ವರ್ಷ-ಹಳೆಯ ಜೆಲ್ಲಿಫಿಶ್ ಪಳೆಯುಳಿಕೆಯನ್ನು ಕಂಡುಕೊಂಡಾಗ ಇದನ್ನು ಕಂಡುಹಿಡಿದರು.

ಜೆಲ್ಲಿ ಮೀನುಗಳು ಪ್ರಮುಖವಾಗಿ ಯಾವುದೇ ಮೂಳೆಗಳನ್ನು ಹೊಂದಿಲ್ಲ. ಆದ್ದರಿಂದ ಪಳೆಯುಳಿಕೆ ಖಂಡಿತವಾಗಿಯೂ ಆ ಸಮಯದಲ್ಲಿ ವಿಜ್ಞಾನಿಗಳನ್ನು ಆಘಾತಗೊಳಿಸಿತು ಗೊತ್ತಾ!

National Unity Day: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ

ಬಾಹ್ಯಾಕಾಶದಲ್ಲಿ ಜೆಲ್ಲಿ ಮೀನು?

1991 ರಲ್ಲಿ ನಾಸಾ 2,000 ಕ್ಕೂ ಹೆಚ್ಚು ಜೆಲ್ಲಿ ಮೀನುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು.

ಅಲ್ಲಿಯೂ ಕೂಡ ಅವು ಸಂತಾನೋತ್ಪತ್ತಿ ಮಾಡಿದ್ದವು ಮತ್ತು ಈ ಪ್ರಯೋಗದ ಅಂತ್ಯದ ವೇಳೆಗೆ ಸುಮಾರು 60,000 ಜೆಲ್ಲಿ ಮೀನುಗಳು ಆಗಿದ್ದವು.

ಚಾರ್ಲ್ಸ್ ಡಾರ್ವಿನ್ ಈ ಜೆಲ್ಲಿ ಮೀನುಗಳ ಸೂಪರ್ ಫ್ಯಾನ್!

World Jellyfish Day: ಚಾರ್ಲ್ಸ್ ಡಾರ್ವಿನ್ ಅವರ ನೈಸರ್ಗಿಕ ಆಯ್ಕೆಯ ಸಿದ್ಧಾಂತದಿಂದಾಗಿ ಜೆಲ್ಲಿ ಮೀನುಗಳನ್ನು ವಿಜ್ಞಾನಿಗಳು ನೋಡಲಾರಂಭಿಸಿದರು.

ಡಾರ್ವಿನ್ನನ ಕೃತಿಯನ್ನು ಓದಿದ ಮತ್ತೊಬ್ಬ ವಿಜ್ಞಾನಿ ಜೆಲ್ಲಿ ಮೀನುಗಳ ವಿಕಾಸ ಮತ್ತು ಅವು ಹೇಗೆ ವಿಶಿಷ್ಟ ಜೀವಿಗಳಾಗಿ ಬಂದವು ಎಂಬುದನ್ನು ಅಧ್ಯಯನ ಮಾಡಿದರು.

ಲಕ್ಷಾಂತರ ವರ್ಷಗಳ ಹಿಂದೆ ಸಾಗರದಲ್ಲಿ ಜೀವಿಗಳು ಅಭಿವೃದ್ಧಿ ಹೊಂದುತ್ತಿರುವಾಗ, ಜೆಲ್ಲಿ ಮೀನುಗಳು ಇತರ ಸಮುದ್ರ ಜೀವಿ ಗುಂಪುಗಳಿಂದ ಬೇರ್ಪಟ್ಟವು ಎಂದು ಅವರು ಕಂಡುಕೊಂಡರು.

ಜೆಲ್ಲಿ ಮೀನು ನಿಜಕ್ಕೂ ಮೀನುಗಳೇ?

ಜೆಲ್ಲಿ ಮೀನುಗಳು ಅಕಶೇರುಕಗಳು. ಅಂದರೆ ಅವುಗಳಿಗೆ ಬೆನ್ನೆಲುಬು ಇಲ್ಲ. ಸಾಮಾನ್ಯವಾಗಿ ಮೀನುಗಳು ತಮ್ಮ ಬೆನ್ನೆಲುಬುಗಳ ಸುತ್ತಲೂ ಕೇಂದ್ರೀಕೃತವಾಗಿರುತ್ತವೆ. ಆದ್ದರಿಂದ ತಾಂತ್ರಿಕವಾಗಿ ಬೆನ್ನೆಲುಬು ಇಲ್ಲದ ಈ ಜೆಲ್ಲಿ ಮೀನುಗಳು ತಮ್ಮ ಹೆಸರಿನಲ್ಲಿ "ಮೀನು" ಹೊಂದಿದ್ದರೂ ನಿಜವಾಗಿಯೂ ಇವು ಮೀನುಗಳಲ್ಲ.

ವಿಜ್ಞಾನಿಗಳು ವಿಶ್ವದ ಅತ್ಯಂತ ಚಿಕ್ಕ ಜೆಲ್ಲಿ ಮೀನುಗಳನ್ನು ಕಂಡುಕೊಂಡಿದ್ದಾರೆ. ಅದು ಇರುಕಂಡ್ಜಿ ಜೆಲ್ಲಿ ಮೀನು. ಅದರ ಗಾತ್ರದ ಹೊರತಾಗಿಯೂ - ಇದು ವಿಶ್ವದ ಅತ್ಯಂತ ವಿಷಕಾರಿ ಜೆಲ್ಲಿ ಮೀನುಗಳಲ್ಲಿ ಒಂದಾಗಿದೆ.