Animal Husbandry

10 ಕೋಟಿ ರೂ ಕೋಣ! AC ರೂಮಲ್ಲಿ ಮಲಗುವ ಕೋಣದ ಹುಬ್ಬೇರಿಸುವ ಸಂಗತಿಗಳಿವು!

25 December, 2023 11:56 AM IST By: Maltesh

ಇತ್ತೀಚಿಗೆ ಬಿಹಾರದ ಪಾಟ್ನಾದಲ್ಲಿ ನಡೆದ ಎಕ್ಸ್ಪೋದಲ್ಲಿ ಹರಿಯಾಣದಿಂದ ಕರೆ ತರಲಾಗಿದ್ದ ಕೋಣವೊಂದು ಸಾಕಷ್ಟು ಸದ್ದು ಮಾಡುತ್ತಿದೆ.

ಹೌದು ಕೋಣದ ಬೆಲೆ, ಅದರ ಖರ್ಚು ಹಾಗೂ ಅದರ ತೂಕ ಸೇರಿದಂತೆ ಹಲವಾರು ಅಚ್ಚರಿಯ ಅಂಶಗಳಿಗೆ ಕಾರಣವಾಗಿದ್ದ ಕೋಣ ಎಕ್ಸ್ಪೋನ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಎಂದರೆ ತಪ್ಪಾಗಲಾರದು.

ಕೋಣ ಬರೋಬ್ಬರಿ 10 ಕೋಟಿ ರೂಪಾಯಿಯ ಮೌಲ್ಯ ಹೊಂದಿದ್ದು ಸೋಷಿಯಲ್‌ ಮೀಡಿಯಾ ಮಂದಿಯ ಹುಬ್ಬೇರುವಂತೆ ಮಾಡಿದೆ.

ನಾವು ಹೇಳುತ್ತಿದ್ದರುವುದು ನೂರಕ್ಕೆ ನೂರರಷ್ಟು ಸತ್ಯ ನಂಬಲು ತುಸು ಕಷ್ಟವಾದರೂ ನಂಬಲೇ ಬೇಕು. ಬಿಹಾರ್‌ನ ಪಾಟ್ನಾದಲ್ಲಿ ಇತ್ತೀಚಿಗೆ ನಡೆದ ಡೈರಿ ಮತ್ತು ಕ್ಯಾಟಲ್‌ ಎಕ್ಸ್ಪೋದಲ್ಲಿ ಭಾಗವಹಿಸಿದ ಹರಿಯಾಣದ ಮುರ್ರಾ ತಳಿಯ ಕೋಣ Expo ದಲ್ಲಿ ಆಕರ್ಷಣೀಯ ಕೇಂದ್ರ ಬಿಂದುವಾಗಿತ್ತು. ಹರಿಯಾಣದ ಪಾಣಿಪತ್‌ನ ಈ ಕೋಣ ತನ್ನ ಆಕರ್ಷಕ ದೇಹ ಹಾಗೂ ಮನವಿರೇಳಿಸುವ ತೂಕದಿಂದ ಭಾರೀ ಸದ್ದು ಮಾಡುತ್ತಿದೆ.

ನಿತ್ಯ ಖರ್ಚು 35 ಸಾವಿರ ರೂ
ಪಾಣಿಪತ್‌ನ ರೈತ ನರೇಂದ್ರ ಸಿಂಗ್‌ ಅವರಿಗೆ ಸೇರಿದ ಈ ಕೋಣ ಅದರ ತೂಕಕ್ಕೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಈ ಕೋಣ ದಿನಕ್ಕೆ 10 ಲೀಟರ್‌ ಹಾಲನ್ನು ಸೇವಿಸುತ್ತದೆ. ಜೊತೆಗೆ 30 ಕೆಜಿ ಹಸಿರು ಹುಲ್ಲು, 8 ಕಿಲೋ ಬೆಲ್ಲ, ಹಣ್ಣುಗಳನ್ನು ಇದು ಆಹಾರವಾಗಿ ಸೇವಿಸುತ್ತದೆ. ಇದರ ದೈನದಿಂದ ಖರ್ಚು 30 ರಿಂದ 35 ಸಾವಿರ ರೂಪಾಯಿಯಿದ್ದು ಮಾಸಿಕ 5ಲಕ್ಷ ರೂಪಾಯಿಗಳವರೆಗೆ ಆದಾಯವನ್ನ ತಂದು ಕೊಡುತ್ತದೆ ಎಂದು ಇದರ ಮಾಲೀಕರು ಹೇಳುತ್ತಾರೆ.

ಮಾಲೀಕನಿಗೆ ಪದ್ಮಶ್ರೀ!
ಕೋಣದ ಬ್ರೀಡಿಂಗ್‌ನಿಂದ ಸುಮಾರು ಮಾಸಿಕ 5 ಲಕ್ಷ ರೂಪಾಯಗಳವರೆಗೆ ಗಳಿಸುತ್ತಿದ್ದೇನೆ ಎಂದು ಮಾಲೀಕ ನರೇಂದ್ರ ಸಿಂಗ್‌ ಹೇಳುತ್ತಾರೆ. ಹೀಗೆ ಉತ್ತಮ ರೀತಿಯ ಕೋಣಗಳನ್ನು ಬ್ರೀಡಿಂಗ್‌ ಮಾಡಿ ಮಾರಾಟ ಮಾಡುತ್ತೇನೆ ನನ್ನ ಈ ಕಾರ್ಯವನ್ನು ಗುರುತಿಸಿ ಕೇಂದ್ರ ಸರ್ಕಾರ 2020 ರಲ್ಲಿ ಪದ್ಮಶ್ರೀ ನೀಡಿ ಗೌರವಿಸಿದೆ ಎಂದು ಹೇಳುತ್ತಾರೆ.

ನಿತ್ಯ ಸಾಸಿವೆ ಎಣ್ಣೆ ಮಸಾಜ್‌!
ಈ ಕೋಣದ ತೂಕ 3 ಅಡಿ ಅಗಲವನ್ನು ಹೊಂದಿದ್ದು ಬರೋಬ್ಬರಿ 15 ಕ್ವಿಂಟಾಲ್‌ ತೂಕವನ್ನು ಹೊಂದಿದೆ. ಪ್ರತಿದಿನ ಸಾಸಿವೆ ಎಣ್ಣೆಯ ಮಸಾಜ್‌, ಕೊಟ್ಟಿಗೆಯಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ, ನಿತ್ಯ 5 ಕಿಮಿ ನಡಿಗೆ ಇವೆಲ್ಲ ಕಾರಣಗಳಿಂದ ಇದರ ಬೆಲೆ 10 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇನ್ನು ಇದರ ವೀರ್ಯಕ್ಕೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆಯಿದ್ದು ಫುಲ್‌ ಡಿಮ್ಯಾಂಡ್‌ ಹೊಂದಿರುವ ಕೋಣ ಇದಾಗಿದೆ.