ಕೋಳಿ ಸಾಕಾಣಿಕೆ ಮತ್ತದರ ಸವಾಲುಗಳನ್ನು ನಿರ್ವಹಿಸುವವರಿಗೆ ವಿಜಯಪುರದ ಇಂಡಿಯ ಐ. ಸಿ. ಎ. ಆರ್ - ಕೃಷಿ ವಿಜ್ಞಾನ ಕೇಂದ್ರದ ಸಂತೋಷ ಶಿಂಧೆ, ಮಹೇಶ ಕಡಗಿ, ಸವಿತಾ ಬಿ, ಮತ್ತು ಅರ್ಜುನ್ ಆರ್ ಎಸ್ ಸೇರಿ ಒಂದಷ್ಟು ಉಪಯುಕ್ತ ಮಾಹಿತಿಯಗಳನ್ನು ಈ ಲೇಖನದಲ್ಲಿ ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿರಿ: ಹೈನುಗಾರಿಕೆಯಲ್ಲಿ ಯಶಸ್ಸು ಪಡೆದ ವಿಜಯಪುರದ ಯುವ ರೈತ! ಸಾಕಾಣಿಕೆ, ಸಂಪಾದನೆ ಎಲ್ಲದರ ಕುರಿತು ಇಲ್ಲಿದೆ ವಿವರ
ಸ್ಥಳೀಯ ಹಾಗೂ ಸಂವರ್ಧನೆ ಕೋಳಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಹೊಂದಿದ್ದರೂ ಅವುಗಳ ಆರೋಗ್ಯ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಆದರೂ, ಸ್ಥಳೀಯ ಹಾಗೂ ಸಂವರ್ಧನೆ ಕೋಳಿಗಳನ್ನು ಹಿತ್ತಲಲ್ಲಿ ಸಾಕುವುದರಿಂದ ಅವುಗಳಲ್ಲಿ ಆಗುವ ಅಪಾಯವನ್ನು ತಡೆಯಲು ಸರಿಯಾದ ಜೈವಿಕ ಸುರಕ್ಷತಾ ಕ್ರಮಗಳನ್ನು ಹೊಂದಿರುವುದು ಬಹಳ ಮುಖ್ಯ.
ಏಕೆಂದರೆ ಕಸ, ಆಹಾರ, ನೀರು, ಕಾಡು ಪಕ್ಷಿಗಳು, ಕೀಟಗಳು, ನಾಯಿ, ಬೆಕ್ಕುಗಳು, ಉಪಕರಣಗಳು ಮತ್ತು ಮುಂತಾದ ಮೂಲಗಳಿಂದ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಮೇಲಾಗಿ, ಹೊರಗಿನಿಂದ ಖರೀದಿಸಿದ ಪಕ್ಷಿಗಳಿಂದ ರೋಗ ಹರಡುವಿಕೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ರೋಗಗಳು ಪ್ರವೇಶಿಸದಂತೆ ಅಥವಾ ಹರಡದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.
ಹಾಗೆ, ಕೋಳಿ ಸಾಕಾಣಿಕೆ ಮಾಡುವ ರೈತರು ರೋಗ ಬಂದ ತಕ್ಷಣವೇ ಸರಿಯಾದ ಕ್ರಮಗಳನ್ನು ಅಥವಾ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾದರೆ ಯಾವ ಕೋಳಿಗಳು ಆರೋಗ್ಯಕರ ಹಾಗೂ ಯಾವ ಕೋಳಿಗಳು ಅನಾರೋಗ್ಯಕರವೆಂಬುದು ಕಂಡು ಹಿಡಿಯುವುದು ಬಹಳ ಮುಖ್ಯ.
ಆರೋಗ್ಯಕರ ಕೋಳಿಗಳಿಂದ ಅನಾರೋಗ್ಯಕರ ಕೋಳಿಗಳನ್ನು ಗುರುತಿಸುವ ಸಲಹೆಗಳನ್ನು ಅಥವಾ ಲಕ್ಷಣಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ
ಕ್ರ. ಸಂ. ಆರೋಗ್ಯಕರ ಕೋಳಿಗಳು ಅನಾರೋಗ್ಯಕರ ಕೋಳಿಗಳು
- ಎಚ್ಚರಿಕೆ ಮತ್ತು ಕಾವಲು ದಣಿದ ಮತ್ತು ನೀರಾಶಕ್ತಿ
- ಪ್ರಕಾಶಮಾನವಾದ ಕಣ್ಣುಗಳು ಮಂದ ಕಣ್ಣುಗಳು
- ನಿರಂತರವಾಗಿ ನಡೆಯುವುದು, ಓಡುವುದು ನಿಂತಿಕೊಳ್ಳುವುದು, ಮೈ ಉಜ್ಜುವುದು, ಮಲಗುವುದು
- ಸರಿಯಾದ ಆಹಾರ ಮತ್ತು ನೀರಿನ ಸೇವನೆ ಕಡಿಮೆ ಆಹಾರ ಮತ್ತು ನೀರಿನ ಸೇವನೆ
- ಸರಾಸರಿ ಮೊಟ್ಟೆ ಪ್ರಮಾಣ ಮೊಟ್ಟೆ ಪ್ರಮಾಣ ಕಡಿಮೆ
- ಮೃದುವಾದ ಮತ್ತು ವಾಸನೆ ರಹಿತ ಹಿಕ್ಕೆ ನೀರ ಬೇಧಿ, ರಕ್ತ ಮಿಶ್ರಿತ ಬೇಧಿ, ಜಂತುಗಳು ಮತ್ತು ಕೆಟ್ಟ ವಾಸನೆ ಹಿಕ್ಕೆ
- ಸದ್ದಿಲ್ಲದ ಉಸಿರಾಡುವಿಕೆ ಕೆಮ್ಮು, ಸೀನು ಮತ್ತು ಜೋರಾಗಿ ಉಸಿರಾಡುವುದು ಮತ್ತು ಮೂಗಿನಿಂದ ನೀರು ಬರುವುದು.
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ಸರಿಯಾದ ನಿರ್ವಹಣೆಯನ್ನು ಅನುಸರಿಸಿದರೆ ಕೋಳಿಗಳಲ್ಲಿ ಬರುವ ರೋಗ ಸಂಭವಿಸುವುದನ್ನು ಕಡಿಮೆ ಮಾಡಬಹುದು. ಕೆಳಗೆ ತಿಳಿಸಿದಂತೆ ನಿರ್ವಹಣೆಯನ್ನು ಮಾಡಿದರೆ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
- ಶುದ್ಧ ಪಾತ್ರೆಯಲ್ಲಿ ಯಾವಾಗಲೂ ಕೋಳಿಗಳಿಗೆ ಶುದ್ಧ ನೀರನ್ನು ಒದಗಿಸಬೇಕು.
- ಕೋಳಿ ಆಹಾರವನ್ನು ಒಣಗಿದ ಹಾಗೂ ಸ್ವಚ್ಛ ಸ್ಥಳದಲ್ಲಿ ಇಡಬೇಕು.
- ಮೇವಿಣಿಕೆಗಳನ್ನು ಮತ್ತು ನೀರುಣಿಕೆಗಳನ್ನು ಪ್ರತಿದಿನ ಶುದ್ಧ ನೀರಿನಿಂದ ತೊಳೆದು ಒಣಗಿಸಿದ ನಂತರ ಆಹಾರವನ್ನು ನೀಡಬೇಕು.
- ಕೋಳಿ ಮನೆಯನ್ನು ಪ್ರತಿದಿನ ಸ್ವಚ್ಛವಾಗಿ ಇಡಬೇಕು.
- ನೆಲ ಮತ್ತು ಗೋಡೆಯ ಸುತ್ತಮುತ್ತ ಸುಣ್ಣವನ್ನು ಹಾಕಬೇಕು.
- ಯಾವ ಕೋಳಿಗಳು ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಅಂತಹ ಕೋಳಿಗಳನ್ನು ಬೇರ್ಪಡಿಸಬೇಕು.
- ಕೋಳಿಗಳ ಜೊತೆಯಲ್ಲಿ ಬೇರೆ ಪ್ರಾಣಿಗಳನ್ನು ಸಾಕಬಾರದು.
- ಜಂತುನಾಶಕ ಔಷಧಿಯನ್ನು ಲಸಿಕೆ ಹಾಕುವ 12 ರಿಂದ15 ದಿನಗಳ ಮುಂಚೆ ನೀಡಬೇಕು.
- ಲಸಿಕೆಯನ್ನು ವೇಳಾ ಪಟ್ಟಿಯಂತೆ ಹಾಕಿಸಬೇಕು.
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ
ಕೋಳಿಗಳಲ್ಲಿ ಪ್ರಮುಖವಾಗಿ ಕಂಡು ಬರುವ ರೋಗಗಳು ಮತ್ತು ಅವುಗಳ ನಿರ್ವಹಣೆ:
ಕೋಳಿಗಳಲ್ಲಿ ಬರುವ ಮುಖ್ಯ ರೋಗಗಳೆಂದರೆ, ರಾಣಿಖೇತ, ಸಿಡುಬು ರೋಗ, ಲಿಂಪಾಯ್ಡ್ ಲ್ಯುಕೋಸಿಸ್, ರಕ್ತಬೇಧಿ. ರೋಗ ಬಂದ ಕೋಳಿಗಳು ತೋರುವ ಸಾಮಾನ್ಯ ಲಕ್ಷಣಗಳೆಂದರೆ ಆಹಾರ ತಿನ್ನದೆ ಚುರುಕಾಗಿರದೆ ನಿಧಾನವಾಗಿ ಅಡ್ಡಾಡುವುದು, ತೂಕದಲ್ಲಿ ಇಳಿಕೆ, ತೂಕಡಿಸುವುದು ಮತ್ತು ಮೊಟ್ಟೆ ಉತ್ಪಾದನೆಯಲ್ಲಿ ಕುಸಿತ ಕಂಡುಬರುವದು. ಈ ರೋಗಗಳ ಹತೋಟಿಗೆ ಸಾಕುವ ಮನೆಯ ನೈರ್ಮಲ್ಯತೆಯ ಜೊತೆಗೆ ಸೂಕ್ತ ಕಾಲದಲ್ಲಿ ಲಸಿಕೆಗಳನ್ನು ಹಾಕಬೇಕು.
- ಮರೇಕ್ಸ ರೋಗ (ಹರ್ಪಿಸ್ ವೈರಸ್)
ಗಾಳಿಯ ಮೂಲಕ ಹರಡುವ ಈ ರೋಗ ಬಾಧಿತ ಕೋಳಿಗಳಿಂದ ಉಸಿರಾಟದ ತೊಂದರೆ, ಕಾಲಿಗೆ ಲಕ್ವ ಹೊಡೆಯುವುದು, ಪುಕ್ಕಗಳು ಜೋತು ಬಿದ್ದಿರುತ್ತವೆ, ಒಂದು ಕಾಲು ಮುಂದೆ ಇನ್ನೊಂದು ಕಾಲು ಹಿಂದೆ ಇರುವ ಲಕ್ಷಣ ಕಂಡುಬರುತ್ತದೆ, ಕುರುಡುತನ, ಪುಕ್ಕಗಳ ಗ್ರಂಥಿಗಳ ಊತ, ಹಸೀರು ಬಣ್ಣದ ಬೇಧಿ.
ಕಾಯಿಲೆ ಬಂದ ಮೇಲೆ ಚಿಕಿತ್ಸೆ ಮಾಡುವುದು ಕಷ್ಟ. ಎಚ್.ವಿ.ಟಿ ಮರೇಕ್ಸ ಲಸಿಕೆ 0.2 ಮಿ.ಲಿ ಸಿದ್ದಪಡಿಸಿದ ಲಸಿಕೆಯನ್ನು ಕುತ್ತಿಗೆಯ ಹತ್ತಿರ ಚರ್ಮದೊಳಗೆ ಹಾಕಬೇಕು. ಮರಿಗಳಿಗೆ ಹುಟ್ಟಿದ 24 ಗಂಟೆಗಳೊಳಗಾಗಿ ಹಾಕಬೇಕು
- ಕೊಕ್ಕರೆ/ ರಾನಿಖೇತ ಕಾಯಿಲೆ (ಪ್ಯಾರಾಮಿಕ್ಸೋ ವೈರಸ್)
ಈ ರೋಗ ಗಾಳಿಯ ಮೂಲಕ ಕಲುಷಿತ ಆಹಾರ/ನೀರಿನ ಮೂಲಕ ಹರಡುತ್ತದೆ. ಉಸಿರಾಟದ ತೊಂದರೆ, ಕೆಮ್ಮುವುದು, ಮೊಟ್ಟೆ ಉತ್ಪಾದನೆಯಲ್ಲಿ ಕುಂಠಿತವಾಗುವುದು, ಹಸಿರು ಬಣ್ಣದ ಬೇಧಿ, ತಲೆ ಹೊರಳುವುದು ಕಾಯಿಲೆಯ ಲಕ್ಷಣಗಳು.ಕಾಯಿಲೆ ಬಂದ ಮೇಲೆ ಚಿಕಿತ್ಸೆ ಮಾಡುವುದು ಕಷ್ಟ. ಉತ್ತಮ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದರಿಂದ ರೋಗವನ್ನು ತಡೆಯಬಹುದು. 7-10 ದಿನಗಳಲ್ಲಿ (ಎಫ್1/ಲಾಸೋಟ, 1 ಹನಿ ಕಣ್ಣಿನೊಳಗೆ) 4-5 ನೇ ವಾರಕ್ಕೆ (ಲಾಸೋಟ, ಕುಡಿಯುವ ನೀರಿನಲ್ಲಿ) 10-12 ನೇ ವಾರಕ್ಕೆ (ರಾನಿಖೇತ- ಆರ್2ಬಿ, 0.5 ಮಿ.ಲಿ. ಚರ್ಮದ ಕೆಳಗೆ) ನೀಡಬೇಕು.
ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಮಹತ್ವ..! ನೀವು ಇದರ ಬಗ್ಗೆ ತಿಳಿದಿರಲೇಬೇಕು..
- ಕೋಳಿ ಸಿಡುಬು
(ಪಾಕ್ಸ್ ವೈರಸ್) ಗಾಯಗಳ ಮೂಲಕ ಹರಡುತ್ತದೆ, ಸೊಳ್ಳೆಗಳು ವಾಹಕಗಳಾಗಿರುತ್ತವೆ. ಚರ್ಮ, ಬಾಯಿ ಮತ್ತು ತಲೆಯ ಮೇಲೆ ಗುಳ್ಳೆಗಳು ಸೋಫ್ರಾಮೈಸಿನ್ ಅಥವಾ ಟರ‍್ರಾಮೈಸಿನ ನಂಜುನಿರೋಧಕ ಮುಲಾಮ ಉಪಯೊಗದಿಂದ, 7-8 ನೇ ವಾರಕ್ಕೆ (0.5 ಮಿ.ಲಿ. ಚರ್ಮದ ಕೆಳಗೆ)
- ಗುಂಬರೋ ರೋಗ
(ಐ.ಬಿ.ಡಿ) ಕಲುಷಿತ ಆಹಾರ/ನೀರಿನ ಮೂಲಕ. ಸೊಳ್ಳೆಗಳು ಮತ್ತು ಜಂತುಗಳು ವಾಹಕಗಳಾಗಿರುತ್ತವೆ. ಬಿಳಿ ನೀರಿನ ಬೇಧಿ, ಹಸಿವಾಗದಿರುವಿಕೆ, ಮಂಕಾಗಿರುವುದು, ಮುದುಡಿದ ಪುಕ್ಕಗಳು, ಮಲವಿಸರ್ಜನೆ ಮಾಡುವಾಗ ವಿಚಿತ್ರ ಕೂಗು. ಈ ಕಾಯಿಲೆಯನ್ನು ಲಸಿಕೆ ಹಾಕಿಸುವುದರಿಂದ ತಡೆಗಟ್ಟಬಹುದು. 14-15 ನೇ ದಿನಕ್ಕೆ (ಐ.ಬಿ.ಡಿ ಲಸಿಕೆ, 1 ಹನಿ ಕಣ್ಣಿನೊಳಗೆ)
- ಕೋಳಿ ಟೈಫಾಯ್ಡ್
(ಸಾಲ್ಮೋನೆಲಲ್ಲಾ ಬ್ಯಾಕ್ಟೀರಿಯಾ) ಮೊಟ್ಟೆಗಳ ಮೂಲಕ, ಕಲುಷಿತ ಆಹಾರ/ನೀರಿನ/ ವಸ್ತುಗಳು/ ಮನುಷ್ಯ ಮೂಲಕ, ಇಲಿಗಳ ಮೂಲಕ ಮರಿಗಳಲ್ಲಿ: ರೋಗಬಾಧಿತ ಮರಿಗಳು ಮಂಕಾಗಿ ಅಶಕ್ತವಾಗಿರುತ್ತವೆ, ಗುದದ್ವಾರದ ಬಳಿ ಬಿಳಿ ವಸ್ತು ಅಂಟಿಕೊಂಡಿರುವುದು.
ಸುಬಾಬುಲ್ ಕೃಷಿ ಮಾಡಿದರೆ ರೈತರ ಭವಿಷ್ಯ ಭದ್ರ!
ದೊಡ್ಡ ಕೋಳಿಗಳಲ್ಲಿ: ಆಹಾರ ಸೇವನೆಯಲ್ಲಿ ತಕ್ಷಣ ಇಳಿಕೆ, ಇಳಿಬಿದ್ದ ರೆಕ್ಕೆಗಳು, ಮುದುಡಿದ ತುರಾಯಿ, ಹಳದಿ ಬೇದಿ. ಆಂಟಿಬಯೋಟಿಕ್ಸ: ಟೆಟ್ರಾಸೈಕ್ಲಿನ್/ ಅಮೋಕ್ಸಿಲ್ಲಿನ್
- ಶುದ್ಧ ಪಾತ್ರೆಯಲ್ಲಿ ಯಾವಾಗಲೂ ಕೋಳಿಗಳಿಗೆ ಶುದ್ಧ ನೀರನ್ನು ಒದಗಿಸಬೇಕು.
- ಕೋಳಿ ಆಹಾರವನ್ನು ಒಣಗಿದ ಹಾಗೂ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು
- ಕೋಳಿ ಮನೆಯನ್ನು ಪ್ರತಿದಿನ ಸ್ವಚ್ಛವಾಗಿ ಇಡಬೇಕು
- ಕೋಳಿಗಳ ಕಾಲರಾ
(ಪಾಸ್ಚೂರೆಲ್ಲಾ ಮಲ್ಟೊಸಿಡಾ) ಕಲುಷಿತ ಆಹಾರ/ನೀರಿನ/ ವಸ್ತುಗಳು/ ಮನುಷ್ಯ ಮೂಲಕ, ಹೊಸದಾಗಿ ತರಿಸಿದ ಪಕ್ಷಿಗಳಿಂದ. ಜುಟ್ಟು, ಸೈನಸಗಳು, ಕಾಲಿನ ಕೀಲುಗಳು, ಪಾದಗಳಲ್ಲಿ ಬಾವು, ಉಸಿರಾಟದ ತೊಂದರೆ, ಕಣ್ಣು ಕೆಂಪಾಗುವುದು, ಜ್ವರ, ಮುದುಡಿದ ಪುಕ್ಕಗಳು, ಬಾಯಿಯಿಂದ ಶ್ಲೇಷ ಸ್ರವಣ, ಹಸಿರು ಬೇಧಿ, ತುರಾಯಿ, ಜುಟ್ಟು ನೀಲಿಯಾಗುವುದು.
ಆಂಟಿಬಯೋಟಿಕ್ಸ: ಟೆಟ್ರಾಸೈಕ್ಲಿನ್/ ಅಮೋಕ್ಸಿಲ್ಲಿನ
ಮುಂಜಾಗ್ರುತ ಕ್ರಮವಾಗಿ: ವಿವಿಧ ಜೀವನಿರೋಧಕಗಳನ್ನು ನೀಡುವುದು. ಕೋಳಿ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು, ಬಾಧಿತ ಕೋಳಿಗಳನ್ನು ಹಿಂಡಿನಿಂದ ತೆಗೆದು ಬೆರೆಡೆ ಇಡುವುದು.
- ಕಾಕ್ಸೀಡಿಯಾ ಕಾಯಿಲೆ
(ಕಾಕ್ಸೀಡಿಯಾ ಏಮೀರಿಯಾ) ಕಲುಷಿತ ಆಹಾರ/ನೀರಿನ/ ವಸ್ತುಗಳು ಮೂಲಕ, ಕೋಳಿಗಳು ಮಂಕಾಗಿ ಒಂದು ಮೂಲೆಯಲ್ಲಿ ಕೂತಿರುವುದು, ನಿಂತಾಗ ನಿದ್ರಿಸುವುದು, ಮುದುಡಿದ ಪುಕ್ಕಗಳು, ರಕ್ತ ಬೇಧಿ, ಗುದದ್ವಾರದ ಬಳಿ ರಕ್ತ್ತ ಅಂಟಿಕೊಂಡಿರುವುದು. ಆಂಪ್ರೋಲಿಯಮ್, ಸಲ್ಫಾನಾಮೈಡ್ ಔಷಧಿ ಬಳಕೆಯಿಂದ ಕೋಳಿ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು, ಬಾಧಿತ ಕೋಳಿಗಳನ್ನು ಹಿಂಡಿನಿಂದ ತೆಗೆದು ಹಾಕುವುದು, ಮುಂಜಾಗ್ರತವಾಗಿ ಆಹಾರದಲ್ಲಿ ಆಂಪ್ರೋಲಿಯಮ್, ಸಲ್ಫಾನಾಮೈಡ್ ಔಷಧಿಯನ್ನು ಹಾಕುವುದರಿಂದ ರೋಗವನ್ನು ತಡೆಗಟ್ಟಬಹುದು.
ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ
ರೋಗಗಳು ಮತ್ತು ಅವುಗಳ ನಿರ್ವಹಣೆ:
ಮರೇಕ್ಸ ರೋಗ :
0.2 ಮಿ.ಲಿ ಸಿದ್ದಪಡಿಸಿದ ಲಸಿಕೆಯನ್ನು ಕುತ್ತಿಗೆಯ ಹತ್ತಿರ ಚರ್ಮದೊಳಗೆ ಹಾಕಬೇಕು.
ಕೊಕ್ಕರೆ/ ರಾನಿಖೇತ ಕಾಯಿಲೆ :
ಉಸಿರಾಟದ ತೊಂದರೆ, ಕೆಮ್ಮುವುದು, ಮೊಟ್ಟೆ ಉತ್ಪಾದನೆಯಲ್ಲಿ ಕುಂಠಿತವಾಗುವುದು, ಹಸಿರು ಬಣ್ಣದ ಬೇಧಿ, ತಲೆ ಹೊರಳುವುದು. 7-10 ದಿನಗಳಲ್ಲಿ (ಎಫ್1/ಲಾಸೋಟ, 1 ಹನಿ ಕಣ್ಣಿನೊಳಗೆ) 4-5 ನೇ ವಾರಕ್ಕೆ (ಲಾಸೋಟ, ಕುಡಿಯುವ ನೀರಿನಲ್ಲಿ) 10-12 ನೇ ವಾರಕ್ಕೆ (ರಾನಿಖೇತ- ಆರ್2ಬಿ, 0.5 ಮಿ.ಲಿ. ಚರ್ಮದ ಕೆಳಗೆ)
ಗುಂಬರೋ ರೋಗ (ಐ.ಬಿ.ಡಿ):
ಬಿಳಿ ನೀರಿನ ಬೇಧಿ, ಮಂಕಾಗಿರುವುದು, ಮುದುಡಿದ ಪುಕ್ಕಗಳು, ಮಲವಿಸರ್ಜನೆ ಮಾಡುವಾಗ ವಿಚಿತ್ರ ಕೂಗು. 14-15 ನೇ ದಿನಕ್ಕೆ (ಐ.ಬಿ.ಡಿ ಲಸಿಕೆ, 1 ಹನಿ ಕಣ್ಣಿನೊಳಗೆ)
ಮೊಟ್ಟೆ ಕೋಳಿಗಳಿಗೆ ಹಾಕುವ ರೋಗನಿರೋಧಕ ಲಸಿಕೆಗಳು:
ಕ್ರ. ಸಂ. ಕಾಯಿಲೆ ವಯಸ್ಸು/ದಿನಗಳಲ್ಲಿ ಲಸಿಕೆ ಹೆಸರು ಕೊಡುವ ಕ್ರಮ
1 ಮರೆಕ್ಸ ರೋಗ 1 ನೇ ದಿನ ಎಚ್.ವಿ.ಟಿ ಮರೆಕ್ಸ ಲಸಿಕೆ 0.2 ಮಿ.ಲಿ ಸಿದ್ದಪಡಿಸಿದ ಲಸಿಕೆಯನ್ನು ಕುತ್ತಿಗೆಯ ಹತ್ತಿರ ಚರ್ಮದೊಳಗೆ ಹಾಕಬೇಕು. (ಮರಿಗಳಿಗೆ ಹುಟ್ಟಿದ 24 ಗಂಟೆಗಳೊಳಗಾಗಿ ಹಾಕಬೇಕು)
2 ಕೊಕ್ಕರೆರೋಗ 7-10 ನೇ ದಿನಗಳಲ್ಲಿ ಎಫ್1/ಲಾಸೋಟ 1 ಹನಿ ಕಣ್ಣಿನೊಳಗೆ
3 ಗುಂಬರೋ ರೋಗ (ಐ.ಬಿ.ಡಿ) 18-21 ನೇ ದಿನಗಳಲ್ಲಿ ಐ.ಬಿ.ಡಿ ಲಸಿಕೆ 1 ಹನಿ ಕಣ್ಣಿನೊಳಗೆ
4 ಧ್ವನಿನಾಳ ಸೋಂಕು 28-30 ನೇ ದಿನಗಳಲ್ಲಿ ಏ.ಬಿ. ಲಸಿಕೆ 1 ಹನಿ ಕಣ್ಣಿನೊಳಗೆ
5 ಕೊಕ್ಕರೆ ರೋಗ 5- 6 ನೇ ವಾರದಲ್ಲಿ ಲಾಸೋಟ ಲಸಿಕೆ ಕುಡಿಯುವ ನೀರಿನಲ್ಲಿ
6 ಕೋಳಿ ಸಿಡುಬು 7-8 ನೇ ವಾರದಲ್ಲಿ ಕೋಳಿ ಸಿಡುಬಿನ ಲಸಿಕೆ 0.5 ಮಿ.ಲಿ. ಚರ್ಮದ ಕೆಳಗೆ
7 ಕೊಕ್ಕರೆ ರೋಗ 10-12 ನೇ ವಾರದಲ್ಲಿ ರಾನಿಖೇತ- ಆರ್2ಬಿ 0.5 ಮಿ.ಲಿ. ಚರ್ಮದ ಕೆಳಗೆ
8 ಕೊಕ್ಕರೆ ರೋಗ 16-18 ನೇ ವಾರದಲ್ಲಿ ರಾನಿಖೇತ- ಲಾಸೋಟ 0.5 ಮಿ.ಲಿ. ಚರ್ಮದ ಕೆಳಗೆ
9 ಕೊಕ್ಕರೆ ರೋಗ 40 ನೇ ವಾರದಲ್ಲಿ ಲಾಸೋಟ ಲಸಿಕೆ ಕುಡಿಯುವ ನೀರಿನಲ್ಲಿ
ಸಂತೋಷ ಶಿಂಧೆ (8791107090), ಮಹೇಶ ಕಡಗಿ, ಸವಿತಾ ಬಿ, ಮತ್ತು ಅರ್ಜುನ್ ಆರ್ ಎಸ್
ಐ. ಸಿ. ಎ. ಆರ್ - ಕೃಷಿ ವಿಜ್ಞಾನ ಕೇಂದ್ರ, ವಿಜಯಪುರ (II), ಇಂಡಿ-586209