Agripedia

ಮಾವಿನ ಹಣ್ಣಿನ ಉಪಯೋಗ ಹಾಗೂ ಮೌಲ್ಯವರ್ಧಿತ ಉತ್ಪಾದನೆಗಳು

20 May, 2022 4:10 PM IST By: Maltesh
Mango

ಮಾವಿನ ಹಣ್ಣು ಯಾರಿಗೆ ಬೇಡ?  ರುಚಿಯಲ್ಲಿ ಅತ್ಯಂತ ರುಚಿಯೆಂದು ಹೆಸರು ಪಡೆದಿರುವ ಮಾವಿನ ಹಣ್ಣು ಕಿರಿಯರಿಂದ  ಹಿಡಿದು ಹಿರಿಯರವರೆಗೂ ಅಚ್ಚುಮೆಚ್ಚು. ಮಾವು ಹಣ್ಣುಗಳ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಭಾರತೀಯರೆಲ್ಲರ ಅಚ್ಚುಮೆಚ್ಚಿನ ಹಣ್ಣಾಗಿದೆ. ಸಂಸ್ಕೃತದಲ್ಲಿ ಇದನ್ನು ʼಆಮ್ರಫಲ್ʼ ಎಂದು ಕರೆಯುತ್ತಾರೆ. ಇದರ ಮೂಲಸ್ಥಾನ ಭಾರತ ಹಾಗೂ ಬರ್ಮಾ ಎಂದು ತಿಳಿದು ಬರುತ್ತದೆ. ಇದು ಅನಕಾರ್ಡಿಯೆಸಿ ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು ಮ್ಯಾಂಜಿಫೆರಾ ಇಂಡಿಕಾ.

100 ಗ್ರಾಂ ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳು

  • ತೇವಾಂಶ - 8 1 .0 ಗ್ರಾಂ
  • ಸಸಾರಜನಕ - 0.6 ಗ್ರಾಂ
  • ಕೊಬ್ಬು- 0.4 ಗ್ರಾಂ
  • ಶರ್ಕರಪಿಷ್ಟ - 16.9 ಗ್ರಾಂ
  • ರಂಜಕ - 16 ಮಿ.ಗ್ರಾಂ
  • ಕಬ್ಬಿಣ -14 ಮಿ.ಗ್ರಾಂ
  • ಮೆಗ್ನೆಶಿಯಂ - 27 ಮಿ.ಗ್ರಾಂ
  • ಎ – ಜೀವಸತ್ವ - 2743 ಐಯು
  • ಥಯಮಿನ್ - 0.08 ಮಿ.ಗ್ರಾಂ
  • ರೈಬೋಫ್ಳವಿನ್ - 0.09 ಮಿ.ಗ್ರಾಂ
  • ನಯಾಸಿನ್ - 0.9 ಮಿ.ಗ್ರಾಂ
  • ಸಿ – ಜೀವಸತ್ವ - 16 ಮಿ.ಗ್ರಾಂ  

ದಾಸವಾಳದ ಹೂವಿನಲ್ಲಿದೆ ಅದ್ಬುತ ರಹಸ್ಯ! ನೀವು ಇದನ್ನೂ ತಿಳಿಯಲೆಬೇಕು!

ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ಮಾವಿನ ಹಣ್ಣಿನ ಸೇವನೆಯಿಂದಾಗುವ ಆರೋಗ್ಯದಾಯಕ ಲಾಭಗಳು

ಮಾವಿನ ಹಣ್ಣಿನಲ್ಲಿ ಎ ಜೀವಸತ್ವ ಹೇರಳವಾಗಿರುವುದರಿಂದ ಕಣ್ಣಿಗೆ ಸಂಬಧಿಸಿದ ತೊಂದರೆಗಳನ್ನುಕಡಿಮೆ ಮಾಡಬಹುದು

ರಕ್ತದಲ್ಲಿ ಹಿಮೊಗ್ಲೋಬಿನ್ ಅಂಶ ಹೆಚ್ಚುವುದಲ್ಲದೇ ಶರೀರದಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆಯುತ್ತದೆ.

ಹೃದಯ ದೌರ್ಬಲ್ಯ ಕಡಿಮೆಯಾಗುವುದಲ್ಲದೇ ಶ್ರವಣ ಶಕ್ತಿ ಮಂದವಾಗಿದ್ದರೆ ಚುರುಕುಗೊಳ್ಳುವುದು.

ಮಾವಿನ ಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು.

ಮಾವಿನ ಮೌಲ್ಯವರ್ಧನೆಗಳು

ಮಾವಿನ ಹಣ್ಣು ಸಾಧಾರಣವಾಗಿ  ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹೇರಳವಾಗಿ ಉಪಲಬ್ಧವಿರುತ್ತವೆ. ಮಾವಿನ ಹಣ್ಣಿನಲ್ಲಿ ಹೆಚ್ಚಿನ ತೆವಾಂಶ ಹೊಂದಿರುವುದರಿಂದ ಅವು ಬೇಗನೆ ಕೆಟ್ಟು ಹೋಗುತ್ತವೆ. ಅದ್ದರಿಂದ ಇವುಗಳನ್ನು ಸಮರ್ಪಕವಾಗಿ ಶೇಖರಣೆ ಮಾಡುವುದು ಅತ್ಯವಶ್ಯಕವಾಗಿದೆ. ಇಂತಹ ಕಾಲದಲ್ಲಿ ಮಾವಿನ ಹಣ್ಣಿನ ರಸವನ್ನು ಶೇಖರಿಸಿಟ್ಟುಕೊಂಡರೆ ಇದರ ಉಪಯೋಗ ಬರೀ ಸುಗ್ಗಿಯಲ್ಲಿಯೇ ಮಾತ್ರವಲ್ಲದೇ ವರ್ಷದ ಯಾವುದೇ ಕಾಲದಲ್ಲಿಯೂ   ಬಳಸಲು ಸಾಧ್ಯವಿದೆ.

ಶೇಖರಿಸಿಟ್ಟ ಹಣ್ಣಿನ ರಸದಿಂದ ಜಾಮ್, ಸ್ಕ್ವಾಷ್, ಸಿರಪ್, ಶರಬತ್,  ಆಮರಸ್, ಅಮ್ರಖಂಡ್, ಬರ್ಫಿ, ಟಾಫಿ ಹಾಗೂ ಹೋಳಿಗೆಗಳಂತಹ ವಿವಿಧ ಪದಾರ್ಥಗಳನ್ನು ತಯಾರಿಸಬಹುದು. ಹೀಗೆ ಮಾವಿನ ಹಣ್ಣಿನ ಸಂಸ್ಕರಣೆ ಮಾಡುವುದನ್ನೇ  ಲಘು ಉದ್ಯಮವನ್ನಾಗಿ ಕೈಗೊಳ್ಳಬಹುದು.

ಮಾವಿನ ಹಣ್ಣಿನ ಜಾಮ್ :

ಬೇಕಾಗುವ ಸಾಮಗ್ರಿ: ಸಕ್ಕರೆ-750 ಗ್ರಾಂ,ನೀರು - 200 ಮಿ.ಲೀ,ಸಿಟ್ರಿಕ್ಆಸಿಡ್ -4 ಗ್ರಾಂ, ಪೊಟ್ಯಾಷಿಯಂ ಮೆಟಾ ಬೈ ಸಲ್ಫೇಟ್(KMS) - 300ಮಿ.ಗ್ರಾಂ, ಮಾವಿನ ಹಣ್ಣಿನ ರಸ – 1000 ಗ್ರಾಂ

ವಿಧಾನ: ಮೊಟ್ಟಮೊದಲು ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಬೀಜ ಮತ್ತು ಸಿಪ್ಪೆಯನ್ನು ಬೇರ್ಪಡಿಸಿ ಹಣ್ಣಿನ ರಸವನ್ನು ತೆಗೆಯಬೇಕು. ರಸದಲ್ಲಿ ನೀರು ಮತ್ತು ಕೊಟ್ಟಿರುವ ಪ್ರಮಾಣದಲ್ಲಿ ಸಕ್ಕರೆಯನ್ನು  ಹಾಕಿ ಚೆನ್ನಾಗಿ ಕಲಕುತ್ತಿರಬೇಕು. ಈ ಮಿಶ್ರಣವನ್ನು ಮಂದ ಉರಿಯಲ್ಲಿ 20-25 ನಿಮಿಷ ಬೇಯಿಸುತ್ತಾ ಇರಬೇಕು, ಸ್ವಲ್ಪ ಗಟ್ಟಿಯಾದ ಮೇಲೆ ಸಿಟ್ರಿಕ್ ಅಸಿಡನ್ನು ಸ್ವಲ್ಪ  ನೀರಿನಲ್ಲಿ ಕರಗಿಸಿ ಹಾಕಿ ಈ ಮಿಶ್ರಣವನ್ನು 1050 C ͦ  ಉಷ್ಣತೆಯಲ್ಲಿ ಕಾಯಿಸಬೇಕು. ಜಾಮನ್ನು ಹೆಚ್ಚು ದಿನ ಶೇಖರಿಸಿಡಲು 1 ಕಿ.ಗ್ರಾಂ ಗೆ 300 ಮಿ.ಗ್ರಾಂ KMS ನ್ನು ಉಪಯೋಗಿಸಬೇಕು. ತಯಾರಿಸಿದ ಜಾಮನ್ನು ಗಾಜಿನ ಡಬ್ಬಿಯಲ್ಲಿ ಹಾಕಿಡಬೇಕು.

Butter milk ‍& Curd: ಮಜ್ಜಿಗೆ ಮತ್ತು ಮೊಸರು ಯಾವುದು ಬೆಸ್ಟ್‌..?

ಹೆಚ್ಚು ಉಪ್ಪು ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

Mango Jam

ಮಾವಿನ ಕಾಯಿ ಉಪ್ಪಿನಕಾಯಿ :

ಬೇಕಾಗುವ ಸಾಮಗ್ರಿ :  ಹಸಿ ಮಾವಿನಕಾಯಿ - 1 ಕಿ.ಗ್ರಾಂ (ಕತ್ತರಿಸಿದ), ಉಪ್ಪು-250 ಗ್ರಾಂ, ಅರಿಷಿಣ ಪುಡಿ-30 ಗ್ರಾಂ, ಹಿಂಗು-10 ಗ್ರಾಂ, ಕೆಂಪು ಮೆಣಸಿನ ಪುಡಿ-30 ಗ್ರಾಂ, ಕರಿ ಮೆಣಸಿನ ಪುಡಿ-3 ಗ್ರಾಂ, ಸಾಸಿವೆ -10 ಗ್ರಾಂ, ಮೆಂತೆ ಪುಡಿ-30 ಗ್ರಾಂ, ಸಾಸಿವೆ ಎಣ್ಣೆ- 250 ಗ್ರಾಂ.

ವಿಧಾನ:  ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಬೀಜವನ್ನು ಬೇರ್ಪಡಿಸಿ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. 25% ಉಪ್ಪಿನ ದ್ರಾವಣದಲ್ಲಿ ನೆನೆಯಿಸಬೇಕು.ಇದರಿಂದ ಮಾವಿನಕಾಯಿ ತುಂಡುಗಳು ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ.ನಂತರ 1-3 ದಿನ ಬಿಸಿಲಿನಲ್ಲಿ ಒಣಗಿಸಬೇಕು. ಉಪ್ಪು, ಅರಿಷಿಣ ಪುಡಿ, ಹಿಂಗು, ಕೆಂಪು ಮೆಣಸಿನ ಪುಡಿ, ಕರಿ ಮೆಣಸಿನ ಪುಡಿ, ಸಾಸಿವೆ, ಮೆಂತೆ ಪುಡಿ ಈ ಎಲ್ಲ ಮಸಾಲೆಗಳನ್ನು ಒಣಗಿದ ಮಾವಿನ ತುಂಡುಗಳಲ್ಲಿ ಹಾಕಿ ಚೆನ್ನಾಗಿ ಕಲಕಬೇಕು. ಉಪ್ಪಿನ ಕಾಯಿಯನ್ನು ಗಾಜಿನ ಬಾಟಲಿಯಲ್ಲಿ ಹಾಕಿ ನಂತರ ಬಿಸಿ ಮಾಡಿ ಆರಿಸಿದ ಸಾಸಿವೆ ಎಣ್ಣೆಯನ್ನು ಉಪ್ಪಿನಕಾಯಿ ಮೇಲೆ ಹಾಕಬೇಕು.

White Bread& Brown Bread-ಬಿಳಿ ಬ್ರೆಡ್ ಹಾಗೂ ಕಂದು ಬ್ರೆಡ್..ಯಾವುದು ಉತ್ತಮ..?

ಕಲ್ಲಂಗಡಿ ಅತಿಯಾದ ಸೇವನೆಯಿಂದ ಏನೆಲ್ಲ ಅಡ್ಡ ಪರಿಣಾಮಗಳಿವೆ ಗೊತ್ತಾ..?

Mango Pickle

ಮಾವಿನ ಹಣ್ಣಿನ ಶರಬತ್:

ಬೇಕಾಗುವ ಸಾಮಗ್ರಿ: ಮಾವಿನ ಹಣ್ಣಿನ ರಸ -1 ಕಿ.ಗ್ರಾಂ, ಸಕ್ಕರೆ-1.310 ಕಿ. ಗ್ರಾಂ,ಸಿಟ್ರಿಕ್ ಆಸಿಡ್- 22 ಗ್ರಾಂ, ಸೋಡಿಯಂ ಬೆಂಜೋಯೇಟ - 1 ಗ್ರಾಂ, ಹಳದಿ ಬಣ್ಣ- ಅವಶ್ಯಕತೆಗನುಸಾರ,ನೀರು-7.66 ಲೀ.

ವಿಧಾನ: ಒಂದು ಸ್ಟೀಲ್ ಪಾತ್ರೆಯಲ್ಲಿ ನೀರು ತೆಗೆದುಕೊಂಡುಅದರಲ್ಲಿ ಸಿಟ್ರಿಕ್ ಆಸಿಡ್ ಹಾಗೂ ಸಕ್ಕರೆಯನ್ನು ಹಾಕಿ.ನಂತರ ಅದರಲ್ಲಿ ಮಾವಿನ ಹಣ್ಣಿನ ರಸವನ್ನು ಹಾಕಬೇಕು.ಪಾತ್ರೆಯಲ್ಲಿನ ಶರಬತನ್ನು ಮಸ್ಲಿನ್ ಬಟ್ಟೆಯಿಂದ ಶೋಧಿಸಿಕೊಳ್ಳಬೇಕು.ಅದರಲ್ಲಿ  ಸೋಡಿಯಂ ಬೆಂಜೋಯೇಟನ್ನು ಹಾಕಿಕೊಳ್ಳಬೇಕು.ತದನಂತರ 200 ಮಿ.ಲೀ.ಗಾಜಿನ ಬಾಟಲಿಯಲ್ಲಿ ಹಾಕಿ ಮಶಿನಿನ ಸಹಾಯದಿಂದ ಪ್ಯಾಕ್ ಮಾಡಿಕೊಳ್ಳಬೇಕು.ಈ ಬಾಟಲಿಯನ್ನು 800-850 C ͦ  ಉಷ್ಣತೆಯಲ್ಲಿ 25-30 ನಿಮಿಷದವರೆಗೆ ನೀರಿನಲ್ಲಿ ಇಟ್ಟು ಸ್ಟೆರಿಲೈಸ ಮಾಡಿಕೊಳ್ಳಬೇಕು. ಈ ರೀತಿ ಪ್ಯಾಕ್ ಮಾಡಿದ ಬಾಟಲ್ ನಲ್ಲಿಯ ಶರಬತ್ ಒಂದೂವರೆಯಿಂದ ಎರಡು ತಿಂಗಳುಗಳವರೆಗೆ ಚೆನ್ನಾಗಿ ಇರುವುದು.

Papaya! (ಪಪ್ಪಾಯಿ) Dengue ನಿಂದ ಮುಕ್ತಿ!

ಮಜ್ಜಿಗೆಗಿಂತ ಮತ್ತೊಂದು ಮದ್ದು ಬೇಕೆ..? ಬೆರಗುಗೊಳಿಸುತ್ತೆ ಇದರ ಪ್ರಯೋಜನಗಳು

Mango Juice

ಈ ರೀತಿ ಮಾವಿನ ಹಣ್ಣಿನ ವಿವಿಧ ಪದಾರ್ಥಗಳನ್ನು ಮಾಡಿ ಸ್ವಂತ ಉದ್ಯೋಗವನ್ನು ಕಂಡುಕೊಳ್ಳಬಹು. ಹತ್ತಿರದ ಅಂಗಡಿಗಳಲ್ಲಿ ಮಾರ್ಕೆಟಿಂಗ್ ಸೌಲಭ್ಯ ಸಿಗಬಹುದು.ಅದೇ ರೀತಿ ದೊಡ್ಡ ರಿಟೇಲ್ ಶಾಪ್, ಮಾಲಗಳಲ್ಲಿ ಇಂತಹ ಪದಾರ್ಥಗಳನ್ನು ಮಾರಾಟ ಮಾಡಲು ಇಡಬಹುದು.

ಲೇಖಕರು:

ರೇಖಾ ಭಾ ಕಾರಭಾರಿ (ಗೃಹ ವಿಜ್ಞಾನ) 

ICAR–ಕೃಷಿ ವಿಜ್ಞಾನ ಕೇಂದ್ರ, ತುಕ್ಕಾನಟ್ಟಿ,

ತಾ: ಗೋಕಾಕ  ಜಿ: ಬೆಳಗಾವಿ