Agripedia

ರೈತರ ಆದಾಯ ಹೆಚ್ಚಳಕ್ಕಾಗಿ ಬಿದಿರು ಕೃಷಿ: ಪ್ರತಿ ಹೆಕ್ಟರ್ಗೆ 13 ಲಕ್ಷದವರೆಗೆ ಆದಾಯ..!

29 May, 2022 3:14 PM IST By: Kalmesh T
Bamboo Cultivation: Income up to Rs 13 lakhs

ಸರ್ಕಾರ ರೈತರ ಆದಾಯ ಹೆಚ್ಚಳಕ್ಕಾಗಿ ಬಿದಿರಿಗೆ ಮೊರೆ ಹೋಗುತ್ತಿದ್ದು, ಬಿದಿರು ಅಭಿವೃದ್ಧಿ ಮಂಡಳಿ ರಚನೆಗೂ ನಿರ್ಧರಿಸಿದೆ. ಬಿದಿರು ಮೊದಲು ಅರಣ್ಯ ವ್ಯಾಪ್ತಿಯಲ್ಲಿತ್ತು, ಆಗ ಕೆಲವು ನಿರ್ಬಂಧಗಳಿದ್ದವು, ಅದನ್ನು 2017 ರಲ್ಲಿ ಕೃಷಿ ವ್ಯಾಪ್ತಿಗೆ ತರಲಾಗಿದೆ.

ಇದನ್ನೂ ಓದಿರಿಳ: 

ಉತ್ತಮ ಆರೋಗ್ಯಕ್ಕೆ ವರದಾನ ಡ್ರ್ಯಾಗನ್ ಹಣ್ಣು! ಇಲ್ಲಿದೆ ಡ್ರ್ಯಾಗನ್ ಹಣ್ಣಿನ ಮಾಹಿತಿ…

ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ಬಿದಿರು ಬೆಳೆಯಲು ಹಾಗೂ ಕತ್ತರಿಸಿ ಮಾರಾಟ ಮಾಡಲು ಕಾನೂನಿನ ಅಡ್ಡಿ ತೆರವಾಗಿರುವುದರಿಂದ ಕೃಷಿ ಇಲಾಖೆ ಬಿದಿರು ಅಭಿವೃದ್ಧಿಗೆ ನಿರ್ಧರಿಸಿದೆ.

ಭಾರತದಲ್ಲಿ ಸುಮಾರು 1400ಕ್ಕೂ ಅಧಿಕ ಬಿದಿರು ಜಾತಿಗಳಿವೆ. ಇದರಲ್ಲಿ ಬಹುತೇಕ ಜಾತಿಯ ಬಿದಿರುಗಳು ಪೆಳೆ ರೀತಿ ಬೆಳೆಯುತ್ತಿದ್ದು, ಮುಳ್ಳುಗಳು ಹೆಚ್ಚಾಗಿರುತ್ತವೆ. ಈ ಕಾರಣದಿಂದಲೇ ರೈತರು ಬಿದಿರು ಬೆಳೆಯಲು ಹಿಂಜರಿಯುತ್ತಿದ್ದರು.

ಇದನ್ನು ಅರಿತ ಕೃಷಿ ವಿಜ್ಞಾನಿಗಳು ಅಂಗಾಂಶ ಕೃಷಿ ತಂತ್ರಜ್ಞಾನ (ಟಿಷ್ಯುಕಲ್ಚರ್) ಬಳಸಿಕೊಂಡು ಹೈಬ್ರೀಡ್ ಸಸಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.

Cucumber Farming ನಿಂದ ರೈತರು ಇಡೀ ವರ್ಷ ಗಳಿಸಬಹುದು!!

Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ

80 ವರ್ಷಗಳವರೆಗೂ ಆದಾಯ!

ತಜ್ಞರು ಸಲಹೆ ಮಾಡಿದ ರೀತಿಯಲ್ಲೇ ನಿಗದಿತ ಅಂತರದಲ್ಲಿ ನಾಟಿ ಮಾಡಿದಾಗ ಒಂದು ಎಕರೆಗೆ 900 ರಿಂದ 1000 ಬಿದಿರಿನ ಗಿಡಗಳು ಕೂರುತ್ತವೆ. 3 ವರ್ಷಗಳ ನಂತರ ಬಿದಿರು ಕಟಾವಿಗೆ ಸಿದ್ಧವಾಗಿ, ಆದಾಯ ಬರಲು ಆರಂಭವಾಗುತ್ತದೆ.

ಒಂದು ಸಾವಿರ ಬಿದಿರಿನ ಗಿಡಗಳಿಂದ 40 ಟನ್ ಬಿದಿರು ತೆಗೆಯಬಹುದು. ಪ್ರಸ್ತುತ ಮಾರುಕಟ್ಟೆ ದರದಂತೆ ಒಂದು ಟನ್ ಬಿದಿರಿನಿಂದ 5000 ರೂ. ಸಿಗಲಿದ್ದು, ಮೊದಲ ವರ್ಷ 1.50 ಲಕ್ಷದಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು.

ಮೂರನೇ ವರ್ಷ ಆರಂಭವಾಗುವ ಈ ಆದಾಯ ಸುಮಾರು 80-90 ವರ್ಷಗಳವರೆಗೆ ನಿರಂತರವಾಗಿ ಮುಂದುವರಿಯುತ್ತದೆ. 

White Bread& Brown Bread-ಬಿಳಿ ಬ್ರೆಡ್ ಹಾಗೂ ಕಂದು ಬ್ರೆಡ್..ಯಾವುದು ಉತ್ತಮ..?

ಕಲ್ಲಂಗಡಿ ಅತಿಯಾದ ಸೇವನೆಯಿಂದ ಏನೆಲ್ಲ ಅಡ್ಡ ಪರಿಣಾಮಗಳಿವೆ ಗೊತ್ತಾ..?

ಉಪ ಉತ್ಪನ್ನಗಳು

ಕೊಳಲು, ಪೆನ್ ಸ್ಟ್ಯಾಂಡ್, ದಿಂಬು, ಶೂ, ಪೇಪರ್, ಚಿಪ್ಸ್, ಟೀ, ಬಿಯರ್, ಉಪ್ಪು, ಸ್ಟೀಕ್, ಹೆಲೈಟ್, ಬೈಸಿಕಲ್, ಪೋನ್ ಕೇಸ್, ಅಲಂಕಾರಿಕ ಆಭರಣಗಳು, ಬ್ರಷ್, ಮೌಸ್, ದಿಂಬು, ನೆಲಹಾಸು, ಮನೆ ಗೋಡೆಗಳ ಅಲಂಕಾರ, ಕಾರುಗಳ ಸ್ಟೇರಿಂಗ್.

ಎಷ್ಟು ಲಾಭ

ಜಮೀನಿನ ಬದುಗಳಲ್ಲಿ ಬೆಳೆದರೂ 40 ಟನ್ ಉತ್ಪಾದನೆ ಮಾಡಬಹು ದಾಗಿದೆ. ಪ್ರತಿ ಟನ್‌ಗೆ ಕನಿಷ್ಠ 3 ರಿಂದ 4 ಸಾವಿರ ರೂ.ಸಿಗುತ್ತದೆ.

ಉದ್ಯೋಗ ಅವಕಾಶ

ಉತ್ಪನ್ನಗಳ ತಯಾರಿಕಾ ಘಟಕಗಳ ಸ್ಥಾಪನೆ, ಮಾರಾಟ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳ ಸೃಷ್ಟಿ ಜತೆಗೆ ಆರ್ಥಿಕ ಚಟುವಟಿಕೆಗಳು ನಡೆಯುತ್ತವೆ.