News

ಈ ಕಂಪನಿಯಲ್ಲಿ ತೂಕ ಇಳಿಸಿಕೊಂಡ್ರೆ ಅರ್ಧ ತಿಂಗಳ ಸಂಬಳ ಬೋನಸ್‌..!

19 April, 2022 10:09 AM IST By: KJ Staff
ಸಾಂದರ್ಭಿಕ ಚಿತ್ರ

ಕೊರೋನಾದಿಂದ ಎಲ್ಲಾ ಕಂಪನಿಗಳಿಗು ವರ್ಕ್ ಫ್ರಂ ಹೋಂ ಆಯ್ಕೆ ನೀಡಿದ್ದವು. ಇದೀಗ ಕೊರೋನಾ ಅಲೆ ಕಡಿಮೆಯಾಗಿರುವ ಕಾರಣ ಉದ್ಯೋಗಿಗಳು ಕಂಪನಿಯತ್ತ ಮರಳುತ್ತಿದ್ದಾರೆ. ಈಗಾಗಲೇ ಹಲವು ಕಂಪನಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ವರ್ಕ್ ಫ್ರಂ ಹೋಂ ಕಾರಣದಿಂದಾಗಿ ಕೆಲವು ಉದ್ಯೋಗಿಗಳು ಧಡೂತಿಗಳಾಗಿದ್ದಾರೆ.

ಇದನ್ನು ಗಮನಿಸಿಯೋ ಏನೋ ತಿಳಿಯದು, ಶೇರ್ ಮಾರ್ಕೆಟಿಂಗ್ ಕಂಪೆನಿಯೊಂದು ವಿಶ್ವ ಆರೋಗ್ಯ ದಿನದಂದು ಉದ್ಯೋಗಿಗಳಿಗೆ ಆರೋಗ್ಯ ಕಾಪಾಡಿಕೊಳ್ಳುವ ಹಿತದೃಷ್ಟಿಯ ಜೊತೆಗೆ ಹೊಸ ಆಫರ್ ಅನ್ನು ಕೊಟ್ಟಿದೆ. ಜೆರೋದಾ (Zerodha) ಎಂಬ ಶೇರ್ ಮಾರ್ಕೆಟಿಂಗ್ ಕಂಪೆನಿ ನಿಮಗೆ ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಿಎಂದು ಹೇಳಿದೆ. ಈ ಕಂಪನಿಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

WPI Inflation: ಗರಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ..ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ..

ಈ ತಪ್ಪುಗಳನ್ನ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್..!

ಈ ಬಗ್ಗೆ ಎಲ್ಲಾ ಉದ್ಯೋಗಿಗಳಿಗೆ ಸವಾಲೆಸೆದ ಜೆರೋದಾ (Zerodha) ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ 25ಕ್ಕಿಂತ ಕಡಿಮೆ ಬಿಎಂಐ (Body mass index - BMI) ಇದ್ದರೆ ಅಂತಹ ವ್ಯಕ್ತಿಗಳು ಅರ್ಧ ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆಯುತ್ತಾರೆ ಎಂದು ಹೇಳಿದ್ದಾರೆ. ತೂಕ ಕಳೆದುಕೊಳ್ಳುವ ಸಿಬ್ಬಂದಿಗೆ ಕೆಲವು ಲಾಭಗಳನ್ನು ಘೋಷಿಸಿದ್ದಾರೆ.

ರೈಲ್ವೆ ನೇಮಕಾತಿ: 147 ಹುದ್ದೆಗಳ ಭರ್ತಿ!

LIC BIG Scheme! Invest ₹ 29 ಪಡೆಯಿರಿ ₹4 ಲಕ್ಷ!

ಇವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧದ ಚರ್ಚೆ ನಡೆದಿದೆ. ಕೆಲವರು ತಕ್ಷಣವೇ ದೇಹ ತೂಕ ಇಳಿಕೆಗೆ ಮುಂದಾದರೆ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ ಎಂದು ಹೇಳಿದರೆ, ಇನ್ನು ಕೆಲವರು ಉದ್ಯೋಗಿಗಳ ಆರೋಗ್ಯದ ಮೇಲೆ ಕಂಪನಿಯ ಕಾಳಜಿ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ.

ಮಹತ್ವದ ಸುದ್ದಿ: ರೇಷನ್‌ ಬದಲು ಹಣ ನೀಡಲು ಚಿಂತನೆ..ಶೀಘ್ರದಲ್ಲೇ ಜಾರಿ ಸಾಧ್ಯತೆ..!

ಜೋರಾಗಿದೆ Hydroponic Farmingಗೆ ಬೇಡಿಕೆ..ಇಲ್ಲಿವೆ ಟಾಪ್‌ 5 ತರಕಾರಿಗಳು