News

Zero Shadow Day: ಶೂನ್ಯ ನೆರಳು ದಿನವಂತೆ ಇಂದು! ಏನಿದು ಗೊತ್ತೆ?

25 April, 2023 5:28 PM IST By: Kalmesh T
Zero Shadow Day today! You know what is this? Pic Credit : Vijay Karnataka

Zero Shadow Day: ಶೂನ್ಯ ನೆರಳು ದಿನವಂತೆ ಇವತ್ತು! ಏನಿದು ಗೊತ್ತೆ? ಇಲ್ಲಿದೆ ಮಾಹಿತಿ..

Zero Shadow Day: ಬೆಂಗಳೂರಿನಲ್ಲಿ ಇಂದು (April 25) ಎಲ್ಲರಿಗೂ ಅಚ್ಚರಿಯ ದಿನವಾಗಿತ್ತು. ಏಕೆಂದರೆ ಇಂದು ಸೌರವ್ಯೂಹವು ಈ ದಿನ ವಿಶಿಷ್ಟವಾದ ರಚನೆಯೊಂದನ್ನು ಪರಿಚಯಿಸಿದೆ.

ಅದುವೆ ಶೂನ್ಯ ನೆರಳು ದಿನ. ಅಂದರೆ ಈ ದಿನದ ಕೆಲ ಸಮಯ ಜನರು ತಮ್ಮ ನೆರಳನ್ನು ತಾವು ಕಾಣುವುದಿಲ್ಲ. ಇದು ಕೆಲವು ಕ್ಷಣಗಳವರೆಗೆ ಇರುತ್ತದೆ. ಇದೊಂದು ವಿಚಿತ್ರ ಘಟನೆಯಾಗಿದ್ದು ಇಂದು ಇದು ಸಂಭವಿಸಿದೆ.

ಎಷ್ಟು ಜನ ಗಮನಿಸಿದರೋ ಅವರಿಗೆ ಗೊತ್ತಾಗಿರುತ್ತದೆ. ಮಧ್ಯಾಹ್ನ 12.15ರ ಸುಮಾರಿಗೆ ಈ ಘಟನೆ ನಡೆದಿದೆ. ಇದನ್ನು ಶೂನ್ಯ ನೆರಳು ದಿನ (Zero Shadow Day) ಎಂದು ಹೆಸರಿಸಲಾಗಿದೆ.

Indian Institute of Astrophysics: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ತನ್ನ ಕ್ಯಾಂಪಸ್‌ನಲ್ಲಿ ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

ಈ ಬಗ್ಗೆ ಬೆಂಗಳೂರಿನ ಜನರು ತಮ್ಮ ನೆರಳು ತಮಗೆ ಕಾಣಿಸದೇ ಇರುವ ಸಂದರ್ಭದ ದೃಶ್ಯವನ್ನು ಸೆರೆಹಿಡಿಯಲು ಜನರು ಕುತೂಹಲಕಾರಿಯಾಗಿದ್ದಾರೆ.

ಶೂನ್ಯ ನೆರಳು ದಿನ ಎಂದರೇನು? What is Zero Shadow Day?

ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಪ್ರಕಾರ ಇಂದು ಮಧ್ಯಾನದ ಸಮಯದಲ್ಲಿ ಸೂರ್ಯನು ಯಾವುದೇ ವಸ್ತುವಿಗೆ ನೆರಳು ನೀಡುವುದಿಲ್ಲ.

ಇದರಿಂದಾಗಿ ಈ ಘಟನೆ ಸಂಭವಿಸಲಿದೆ. ASI ಪ್ರಕಾರ, ಕರ್ಕಾಟಕ ರಾಶಿ ಮತ್ತು ಮಕರ ರಾಶಿ ವೃತ್ತದ ನಡುವೆ ಇರುವ ಜನರು ಈ ಶೂನ್ಯ ನೆರಳಿನ ದಿನಕ್ಕೆ ವರ್ಷಕ್ಕೆರಡು ಬಾರಿ ಸಾಕ್ಷಿಯಾಗುತ್ತಾರೆ.

ಈ ವಿದ್ಯಾಮಾನ ಈ ವರ್ಷದ ಕಾಣಿಸಿದೆ ಎಂದು ಖಗೋಳ ಭೌತ ಶಾಸ್ತ್ರಜ್ಞರು ತಿಳಿಸಿದ್ದಾರೆ. ಇದು ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿ ತಲಾ ಒಂದು ಬಾರಿ ಇದು ನಡೆಯುತ್ತದೆ.

ಭೂಮಿಯ ಪರಿಭ್ರಮಣ ಅಕ್ಷವು ಸೂರ್ಯನ ಸುತ್ತ ತನ್ನ ಕಕ್ಷೆಗೆ 23.5 ಡಿಗ್ರಿಗಳಷ್ಟು ವಾಲುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಅಂದರೆ ಹಗಲಿನಲ್ಲಿ ಸೂರ್ಯನು ಉಚ್ಛ್ರಾಯ ಸ್ಥಿತಿಯಲ್ಲಿರುತ್ತಾನೆ. ಈ ಪರಿಭ್ರಮಣೆಯಿಂದಾಗಿ, ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿ ನಮ್ಮ ನೆರಳು ನಮಗೆ ಕಾಣುವುದಿಲ್ಲ.

ಸರ್ಕಾರಿ ನೌಕರರ ಗಮನಕ್ಕೆ: ಈ ದಿನ ಬರಲಿದೆಯಂತೆ ನಿಮ್ಮ ಖಾತೆಗೆ 18 ತಿಂಗಳ ಬಾಕಿ ಡಿಎ!