News

ಜುಲೈ 23 ರಿಂದ ರಾಜ್ಯದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಕ್ಲಾಸ್

22 July, 2020 10:00 AM IST By:
Youtube time table

ಪ್ರೌಢಶಾಲಾ ವಿದ್ಯಾರ್ಥಿಗಳ ಮಾದರಿಯಲ್ಲಿ ಜುಲೈ 23 ರಿಂದ ಕರ್ನಾಟಕ ರಾಜ್ಯದಲ್ಲಿ ಯೂ ಟ್ಯೂಬ್ ಕ್ಲಾಸ್ (ಫ್ರಿ ರೆಕಾರ್ಡೆಡ್ ವೀಡಿಯೋ) ಆನ್ ಲೈನ್ ತರಗತಿ ಆರಂಭಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ (Department of pre-university education) ನಿರ್ದೇಶಕಿ ಎಂ. ಕನಗವಲ್ಲಿ ತಿಳಿಸಿದ್ದಾರೆ.

ದ್ವಿತೀಯ ಪಿಯು (Second pu students) ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ನಿರಂತರಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಜು.23ರಂದು ಯುಟ್ಯೂಬ್​ನಲ್ಲಿ ಲೈವ್ ವಿಡಿಯೋಗಳ ಬೋಧನೆ ಆರಂಭಿಸಲಿದೆ. ಪ್ರತಿ ದಿನ 45 ನಿಮಿಷಗಳ (45 minutes class) 4 ತರಗತಿಗಳನ್ನು ನಡೆಸಲಾಗುವುದು. ಬೆಳಗ್ಗೆ 9ರಿಂದ 12 ಗಂಟೆವರೆಗೆ ಪಾಠಗಳನ್ನು http://youtube.com/c/dpuedkpucpa  ಲಿಂಕ್​ನಲ್ಲಿ (link) ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್, ಇಂಟರ್​ನೆಟ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದು ಬೇಡ. ಕಾಲೇಜು ಆರಂಭವಾದ ಮೇಲೆ ಮತ್ತೊಮ್ಮೆ ಪಾಠಗಳನ್ನು ಉಪನ್ಯಾಸಕರ ಮೂಲಕ ಬೋಧಿಸಲಾಗುತ್ತದೆ ಎಂದಿದ್ದಾರೆ.

Youtube

ಜುಲೈ ಮತ್ತು ಆಗಸ್ಚ್ ತಿಂಗಳಲ್ಲಿ ಪ್ರಸಾರವಾಗಲಿರುವ ವಿಡಿಯೋ ಪಾಠಗಳ ವೇಳಾಪಟ್ಟಿಯನ್ನು ಇಲಾಖೆ ಪ್ರಕಟಿಸಿದೆ. ಜುಲೈ 23 ರಿಂದ ತರಗತಿಗಳು ಪ್ರಸಾರವಾಗಲಿದ್ದು, ಪ್ರತಿದಿನ 45 ನಿಮಿಷಗಳ 4 ಅವಧಿಯ ತರಗತಿಗಳು (ಪ್ರತಿ ವಿಷಯಕ್ಕೆ ಎರಡು ಅವಧಿ, ಒಂದು ಅವಧಿಯಲ್ಲಿ ವಿಡಿಯೋ ತರಗತಿ,  ಎರಡನೇ ಅವಧಿಯಲ್ಲಿ ಈ ತರಗತಿಗೆ ಸಂಬಂಧಿಸಿದ ಸಂದೇಹ ನಿವಾರಣೆ, ನೋಟ್ಸ್ ಬರವಣಿಗೆ) ಇರಲಿದೆ. ಆಯಾ ಕಾಲೇಜಿನ, ಆಯಾ ವಿಷಯಗಳ ಉಪನ್ಯಾಸಕರು ನಿರ್ದೇಶಕರು, ಪ್ರಾಂಶುಪಾಲರು, ಅಲ್ಲಿಂದ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲುಪಿಸಿ ಪ್ರತಿದಿನ  ತರಗತಿಗಳನ್ನು ವೀಕ್ಷಿಸಲು ಪ್ರೇರೇಪಿಸಬೇಕು.  ವೇಳಾಪಟ್ಟಿಯಂತೆ ವಿಡಿಯೋ ವೀಕ್ಷಿಸಲು ಸಾಧ್ಯವಾಗದಿದ್ದರೆ,ಲಿಂಕ್ ಬಳಸಿ ಬೇರೆ ದಿನಗಳಲ್ಲಿ ಮತ್ತು ಪುನರಾವರ್ತಿತವಾಗಿ ವೀಕ್ಷಿಸಬಹುದು.ಜಿಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಐದು ಅಥವಾ ಹತ್ತು ಉಪನ್ಯಾಸಕರು ಅಥವಾ ಸಂಪನ್ಮೂಲ ವ್ಯಕ್ತಿಗಳ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಇದನ್ನು ಪ್ರಾಂಶುಪಾಲರು ನಿರ್ವಹಿಸಬೇಕು.