1..UIDAI ನಿಂದ ಆಧಾರ್‌ಗೆ ಲಿಂಕ್ ಮಾಡಿದ ಇಮೇಲ್/ಮೊಬೈಲ್ ಸಂಖ್ಯೆ ಬದಲಾವಣೆಗೆ ಅನುಮತಿ!
2.. ಕುಂದಗೋಳದಲ್ಲಿಯೇ ಮೆಣಸಿನಕಾಯಿ ಖರೀದಿ ಮಾಡುವ ವ್ಯವಸ್ಥೆ: ಸಿಎಂ ಬೊಮ್ಮಾಯಿ
3.. ರೈತರ ಬೇಡಿಕೆ ಈಡೇರಿಸುವವರಿಗೆ ರೈತರ ಬೆಂಬಲ: ಮೇ 6 ರಂದು ಅಂತಿಮ ಘೋಷಣೆ!-ಕುರುಬೂರು ಶಾಂತಕುಮಾರ್
4.. ವಿಮಾನ ಪ್ರಯಾಣ; ಭಾರತದಲ್ಲಿ ಹೊಸ ದಾಖಲೆ ಸೃಷ್ಟಿ, ಒಂದೇ ದಿನ ದಾಖಲೆಯ ಪ್ರಯಾಣ
5.. ಏಪ್ರಿಲ್ 2023 ರ GST ಆದಾಯ ಸಂಗ್ರಹದಲ್ಲಿ ಗರಿಷ್ಠ ದಾಖಲೆ
6.. ರಾಜ್ಯದಲ್ಲಿ ಮುಂದುವರೆದ ಮಳೆ: ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
1..ಬಳಕೆದಾರರ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಇಮೇಲ್ ಇತ್ಯಾದಿಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿದೆ.
ಕೆಲವು ಸಂದರ್ಭಗಳಲ್ಲಿ ನಿವಾಸಿಗಳಿಗೆ ತಮ್ಮ ಯಾವ ಮೊಬೈಲ್‌ಗಳು ತಮ್ಮ ಆಧಾರ್‌ಗೆ ಲಿಂಕ್ ಆಗಿದೆ ಎಂಬುದು ತಿಳಿದಿರುವುದಿಲ್ಲ. ಇದನ್ನು ಗಮನದಲ್ಲಿಟ್ಟಿಕೊಂಡು ಈ ಕ್ರಮವನ್ನು ಜಾರಿಗೆ ತಂದಿದೆ. ಸದ್ಯ ಬೇರೆ ಯಾವುದೇ ಮೊಬೈಲ್ ಸಂಖ್ಯೆಗೆ ಆಧಾರ್ ಒಟಿಪಿ ಹೋಗುತ್ತಿಲ್ಲ ಎಂದು ಬಳಕೆದಾರರು ಆತಂಕ ವ್ಯಕ್ತಪಡಿಸಿದರು. ಈಗ ಈ ಸೌಲಭ್ಯದೊಂದಿಗೆ, ನಿವಾಸಿಗಳು ಇವುಗಳನ್ನು ಬಹಳ ಸುಲಭವಾಗಿ ವೀಕ್ಷಿಸಬಹುದು.
2..ಕುಂದಗೋಳದಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಾರೆ. ಆದ್ದರಿಂದ ಮುಂದಿನ ವರ್ಷದಿಂದ ಕುಂದಗೋಳದಲ್ಲಿಯೇ ಮೆಣಸಿನಕಾಯಿ ಖರೀದಿ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.
ಕುಂದಗೋಳದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್ ಪಾಟೀಲ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ಕುಂದಗೋಳ ತಾಲೂಕಿಗೆ ನಾನು ಬಂದಾಗ ಭಾವನಾತ್ಮಕವಾಗುತ್ತೇನೆ . ನನ್ನ ಬಹುತೇಕ ಬಾಲ್ಯವನ್ನು ಇಲ್ಲೆ ಕಳೆದಿದ್ದೇನೆ. ಕಮಡೊಳ್ಳಿ, ಸಂಶಿ, ಗುಡಗೇರಿ ಇಲ್ಲಿಯೇ ತಿರುಗಾಡುತ್ತಿದ್ದೇವು.ನಮ್ಮ ತಂದೆ ಇಲ್ಲಿನ ರೈತರ ಸುಮಾರು 30 ಸಾವಿರ ಎಕರೆ ಜಮೀನು ಬಿಡಿಸಿ ಕೊಟ್ಟಿದ್ದರು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯ ಗಳಿಸಿದ್ದರು ಎಂದರು.
3..ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ರೈತ ಬೇಡಿಕೆಗಳನ್ನು ಈಡೇರಿಸುವವರಿಗೆ ಮಾತ್ರ ರೈತರ ಮತ್ತು ರೈತ ಸಂಘಟನೆಗಳ ಬೆಂಬಲ ನೀಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೂರು ಕೋಟಿಗೂ ಹೆಚ್ಚು ರೈತ ಮತದಾರರಿದ್ದಾರೆ. ರೈತರ ಓಟು ಕೇಳುವ ರಾಜಕೀಯ ಪಕ್ಷಗಳು.ರೈತ ಸಮಸ್ಯೆಗಳ ಪ್ರಣಾಳಿಕೆ ಬಗ್ಗೆ ಯಾಕೆ ಬದ್ಧತೆ ತೋರುತ್ತಿಲ್ಲ ಒಂದುವರೆ ತಿಂಗಳು ಪ್ರಣಾಳಿಕೆ ಬದ್ಧತೆ ಬಗ್ಗೆ ಕಾಲಾವಕಾಶ ನೀಡಿದರೂ, ಯಾವ ಪಕ್ಷದವರು ಬದ್ಧತೆ ತೋರಲಿಲ್ಲ. ಇ೦ದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಕ್ತಾರರು ಮಾಜಿ ಸಂಸದರು ಉದಿತ್ ರಾಜ್ ವರು ದೂರವಾಣಿ ಕರೆ ಮಾಡಿ 6ನೇ ತಾರೀಖಿನಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಜೊತೆಯಲ್ಲಿ ರೈತ ಮುಖಂಡರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ರೈತರ ಬೆಂಬಲ ಕೋರುವುದಾಗಿ ಮನವಿ ಮಾಡಿರುವ ಕಾರಣ ಅವರ ಜೊತೆ ಚರ್ಚಿಸಿದ ನಂತರ ರೈತರ ಬೆಂಬಲ ಯಾರಿಗೆ ಎಂದು ತಿಳಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಿದ್ದಾರೆ.
4..ಭಾರತೀಯ ವಿಮಾನಯಾನವು ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಿದೆ. ಹೌದು ಒಂದೇ ದಿನ ದಾಖಲೆಯ ಮಟ್ಟದ ಜನ ವಿಮಾನದಲ್ಲಿ ಪ್ರಯಾಣ ಬೆಳೆಸಿರುವುದು ದಾಖಲಾಗಿದೆ. ಒಂದೇ ದಿನದಲ್ಲಿ ಬರೋಬ್ಬರಿ 456,082 ಜನ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಹೊಸ ದಾಖಲೆ ಸೃಷ್ಟಿ ಆಗಿದೆ. ಈ ಮೂಲಕ ಭಾರತದ ದೇಶೀಯ ವಿಮಾನ ಸಂಚಾರವು ದಾಖಲೆಯನ್ನೇ ಸೃಷ್ಟಿ ಮಾಡಿದೆ. ಈ ಹೊಸ ದಾಖಲೆಯು ಏಪ್ರಿಲ್ 30ಕ್ಕೆ ಸೃಷ್ಟಿಯಾಗಿದೆ. ಆ ದಿನ ಬರೋಬ್ಬರಿ ದೇಶಾದ್ಯಂತ 2,978 ವಿಮಾನಗಳು ಟೇಕ್ ಆಫ್ ಆಗಿವೆ. ಈ ಸಂಬಂಧ ಟ್ವೀಟ್ ಮಾಡಿರುವ ಭಾರತೀಯ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಕೋವಿಡ್ ನಂತರ ವಿಮಾನ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಳವಾಗಿರುವುದರ ದಾಖಲೆ ಇದು. ಭಾರತದ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದಿದ್ದಾರೆ.
5..2023 ರ ಏಪ್ರಿಲ್ 20 ರಂದು 9. 8 ಲಕ್ಷ ವಹಿವಾಟುಗಳ ಮೂಲಕ ಒಂದೇ ದಿನದಲ್ಲಿ ₹68,228 ಕೋಟಿ GST ಸಂಗ್ರಹಿಸಲಾಗಿದೆ. ಏಪ್ರಿಲ್, 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು ₹ 1,87,035 ಕೋಟಿಗಳಾಗಿದ್ದು , ಇದರಲ್ಲಿ ಸಿಜಿಎಸ್‌ಟಿ ₹38,440 ಕೋಟಿ , ಎಸ್‌ಜಿಎಸ್‌ಟಿ ₹47,412 ಕೋಟಿ ,
ಐಜಿಎಸ್‌ಟಿ ₹89,158 ಕೋಟಿ ₹ 12,025 ಕೋಟಿ ಆಗಿದೆ. ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ ₹45,864 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ ₹37,959 ಕೋಟಿ ಇತ್ಯರ್ಥಪಡಿಸಿದೆ. ನಿಯಮಿತ ಇತ್ಯರ್ಥದ ನಂತರ ಏಪ್ರಿಲ್ 2023 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು CGST ಗಾಗಿ ₹84,304 ಕೋಟಿ ಮತ್ತು SGST ಗಾಗಿ ₹85,371 ಕೋಟಿ ಆಗಿದೆ.
6..ರಾಜ್ಯದ ಕೆಲೆವಡೆ ಮಳೆ ಜೋರಾಗಿ ಅಬ್ಬರಿಸುತ್ತಿದ್ದು, ಈ ಮಳೆ ಮೂಮದಿನ 24 ಗಂಂಟೆಗಳಲ್ಲಿ ಕೊಡಗು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಂಗಳೂರಿನಲ್ಲಿ ಆಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ದಕ್ಷಿಣ ಒಳನಾಡಿನ ಕೊಡಗು, ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮುಂಜಾಗೃತ ಕ್ರಮವಾಗಿ 2 ದಿನ ಹಳದಿ ಎಚ್ಚರಿಕೆಯನ್ನು ನೀಡಲಾಗಿದೆ.