ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆ ನಗರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜೂನ್ 15ರಂದು ಮಧ್ಯಾಹ್ನ 12 ಗಂಟೆಗೆ ‘ಭತ್ತದಲ್ಲಿ ಯಾಂತ್ರೀಕೃತ ನಾಟಿ ಪದ್ಧತಿ ಮತ್ತು ಹಸಿರೆಲೆ ಗೊಬ್ಬರ ತಾಂತ್ರಿಕತೆಗಳು’ ವಿಷಯ ಕುರಿತಂತೆ ಆನ್‌ಲೈನ್ ಮೂಲಕ ತರಬೇತಿ ಕಆರ್ಯಾಗಾರ ಆಯೋಜಿಸಲಾಗಿದೆ.
ನೀರವರಿ ಸೌಲಭ್ಯ ಹೊಂದಿರುವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭತ್ತ ಬೆಳೆಯಲಾಗುತ್ತದೆ. ಪ್ರಸ್ತುತ ಬಹುತೇಕ ಭಾಗಗಳಲ್ಲಿ ಭತ್ತದ ಕಟಾವು ಕಾರ್ಯ ಪೂರ್ಣಗೊಂಡಿದ್ದು, ರೈತರು ಸಸಿ ಮಡಿಗೆ ಬೀಜಗಳನ್ನು ಚೆಲ್ಲುವ ತಯಾರಿಯಲ್ಲಿದ್ದಾರೆ. ಹೀಗಾಗಿ ರಾಜ್ಯದ ಭತ್ತ ಬೆಳೆಯುವ ರೈತರಿಗೆ ಸೂಕ್ತ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೊಜಿಸಲಾಗಿದೆ. ರಾಜ್ಯದಲ್ಲಿನ ಗೂಗಲ್ ಮೀಟ್ ವೇದಿಕೆಯಲ್ಲಿ ಕಾರ್ಯಾಗಾರವು ನಡೆಯಲಿದ್ದು, ಭತ್ತ ಬೆಳೆಯುವ ಆಸಕ್ತ ರೈತರು (https://meet.google.com/zpz-xcap-amw), ಈ ಲಿಂಕ್ ಮೇಲೆ ಒತ್ತುವ ಮೂಲಕ (Meeting ID: zpz-xcap-amw) ಕಾರ್ಯಾಗಾರದಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಐಸಿಎಂಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತç ವಿಷಯ ತಜ್ಞರಾಗಿರುವ ಮಲ್ಲಿಕಾರ್ಜುನ ಬಿ.ಓ. ಅವರು ಭಾಗವಹಿಸಲಿದ್ದು, ಭತ್ತದ ಕೃಷಿಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ ವಿನುತನ ತಾಂತ್ರಿಕ ಮತ್ತು ಯಾಂತ್ರೀಕೃತ ಪದ್ಧತಿಗಳು, ಅವುಗಳನ್ನು ಬಳಸುವುದರಿಂದ ರೈತರಿಗೆ ಆಗಲಿರುವ ಪ್ರಯೋಜನಗಳು, ಭತ್ತದ ಕೃಷಿಯಲ್ಲಿ ಹಸಿರೆಲೆ ಗೊಬ್ಬರದ ಮಹತ್ವ ಹಾಗೂ ಅದರಿಂದ ರೈತರಿಗೆ ಆಗಲಿರುವ ಪ್ರಯೋಜನಗಳ ಕುರಿತು ವಿವರವಾದ ಮಾಹಿತಿ ಒದಗಿಸಲಿದ್ದಾರೆ. ಪ್ರಸ್ತುತ ಭತ್ತ ಬೆಳೆಯುವ ರೈತರು ಕೂಲಿ ಆಳುಗಳ ಮೂಲಕ ಭತ್ತ ನಾಟಿ ಮಾಡಿಸುವ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸುತ್ತಿದ್ದಾರೆ. ಆದರೆ, ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಜೊತೆಗೆ ಹಣ ಕೂಡ ಹೆಚ್ಚು ವೆಚ್ಚವಾಗುತ್ತದೆ. ಅಲ್ಲದೆ, ನಾಟಿ ರುತು ಆರಂಭವಾದರೆ ಕೆಲವೊಮ್ಮೆ ನಾಟಿ ಮಾಡಲು ಜನರು ಸಿಗುವುದಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಯಾಂತ್ರಿಕ ನಾಟಿ ಮಾಡುವುದರಿಂದ ರೈತರ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.
ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.
ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ಪ್ರಸೆಂಟ್ ನೌ ಮೇಲೆ ಕ್ಲಿಕ್ ಮಾಡದೆ, ಆಸ್ಕ್ ಟು ಜಾಯಿನ್ ಮೇಲೆ ಒತ್ತಬೇಕು ಎಂದು ತರಳಬಾಳು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.