News

ಮನೆಯಲ್ಲಿಯೇ ಕುಳಿತು ಹತ್ತೇ ನಿಮಿಷದಲ್ಲಿ ಉಚಿತ ಪ್ಯಾನ್ ಪಡೆಯುವುದು ಪಡೆಯಿರಿ

31 May, 2020 11:15 AM IST By:
ದೇಶದಲ್ಲಿ ಪಾನ್‌ ಕಾರ್ಡ್ ಇಲ್ಲದೆ 50 ಸಾವಿರ ರೂಪಾಯಿಗಿಂತ ಹೆಚ್ಚು ಮೌಲ್ಯದ ಯಾವುದೇ ವ್ಯವಹಾರ ನಡೆಸಲಾಗದು. ಆದರೆ, ಅದೆಷ್ಟೋ ಜನರಿಗೆ ಪ್ಯಾನ್ ಕಾರ್ಡ್  ಹೇಗೆ ಪಡೆಯಬೇಕು ಎಂಬುದೇ ತಿಳಿದಿರುವುದಿಲ್ಲ. ಒಂದು ವೇಳೆ ತಿಳಿದರೂ, ಅದನ್ನು ಪಡೆಯುವ ಪ್ರಕ್ರಿಯೆಯೇ ಗೊತ್ತಿಲ್ಲ. ಇದೀಗ ಆದಾಯ ತೆರಿಗೆ ಇಲಾಖೆಯು ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ. ಕೇವಲ ಹತ್ತು ನಿಮಿಷಗಳಲ್ಲಿ  ಉಚಿತವಾಗಿ ಪ್ಯಾನ್ ಕಾರ್ಡ್‌ ಪಡೆಯಬಹುದು. ಆನ್‌ಲೈನ್‌ ಮೂಲಕ ಸಾರ್ವಜನಿಕರು ತ್ವರಿತವಾಗಿ ಇ-ಪ್ಯಾನ್‌ ಕಾರ್ಡ್‌ ಪಡೆಯಬಹುದು.
ದೃಢೀಕೃತ ಆಧಾರ್‌ ಸಂಖ್ಯೆ ಹಾಗೂ ಆಧಾರ್‌ನೊಂದಿಗೆ ನೋಂದಣಿಯಾಗಿರುವ ಮೊಬೈಲ್‌ ಸಂಖ್ಯೆ ಆಧಾರದಲ್ಲಿ ತ್ವರಿತವಾಗಿ ಇ-ಪ್ಯಾನ್‌ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆ ಅರ್ಜಿದಾರರಿಗೆ ನೀಡಲಿದೆ. ಈ ಮೂಲಕ ಆದಾಯ ತೆರಿಗೆ ಇಲಾಖೆ ಡಿಜಿಟಲ್‌ ಇಂಡಿಯಾ ಅಭಿಯಾನವನ್ನು ಮತ್ತೊಂದು ಹಂತಕ್ಕೆ ವಿಸ್ತರಿಸಿದೆ.

ಪ್ಯಾನ್ ಕಾರ್ಡ್ ಪಡೆಯೋದು ಸುಲಭ

ಪ್ಯಾನ್‌ ಸಂಖ್ಯೆಯ ನಿಗದಿ ಪ್ರಕ್ರಿಯೆ ಸಂಪೂರ್ಣ ಕಾಗದ ರಹಿತವಾಗಿರಲಿದ್ದು, ಉಚಿತವಾಗಿ ಇ-ಪ್ಯಾನ್‌ (ವಿದ್ಯುನ್ಮಾನ ಪ್ಯಾನ್‌) ಸಂಖ್ಯೆಯನ್ನು ವಿತರಿಸಲಾಗುವುದು ಎಂದು ಕೇಂದ್ರ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಮನೆಯಲ್ಲಿಯೇ ಕುಳಿತು ಪ್ಯಾನ್ ಕಾರ್ಡ್ ಪಡೆಯಿರಿ

 ಮನೆಯಲ್ಲಿಯೇ ಕುಳಿತು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಇನ್‌ಸ್ಟಾಂಟ್‌ ಪ್ಯಾನ್ ಕಾರ್ಡ್ (ಇಪಿಎಎನ್) ವ್ಯವಸ್ಥೆ ಶುರು ಮಾಡಿದೆ. ಬಳಕೆದಾರರು ಆದಾಯ ತೆರಿಗೆ ಇಲಾಖೆ ಪೋರ್ಟಲ್ ಗೆ ಹೋಗಿ ಲಾಗಿನ್ ಆಗಬೇಕು. ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಹಾಕಬೇಕು. ಇದಕ್ಕೆ ಪ್ರತ್ಯೇಕವಾಗಿ ದಾಖಲೆಗಳು ಬೇಕಾಗುವುದಿಲ್ಲ.
ಇ-ಪ್ಯಾನ್ ಕಾರ್ಡ್ ಪಡೆಯಲು ಬಳಕೆದಾರರು ತಮ್ಮ ಸಹಿಯಯನ್ನು ಸ್ಕ್ಯಾನ್‌ ಮಾಡಿ JPEG ಮಾದರಿಯಲ್ಲಿ ಒದಗಿಸಬೇಕು. ಈ ಸೇವೆ ಉಚಿತವಾಗಿದ್ದು, ವೈಯಕ್ತಿಯ ತೆರಿಗೆ ಪಾವತಿದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವುದರ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.
https://www.incometaxindiaefiling.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಸುಲಭವಾಗಿ ಇ-ಪ್ಯಾನ್‌ ಪಡೆಯಬಹುದು.