ಕೊರೊನಾ ಮಹಾಮಾರಿ ತಡೆಯಲು ಸರ್ಕಾರಗಳು ಸಾಕಷ್ಟು ರೀತಿಯ ಪ್ರಯತ್ನಗಳನ್ನು ಮಾಡಿತ್ತು. ಈಗ ಎರಡೂ ಡೋಸ್ ಪಡೆದವರಿಗೆ ಸರ್ಕಾರದಿಂದ ರೂಪಾಯಿ 5 ಸಾವಿರ ದೊರೆಯಲಿದೆ ಎಂದು ಎಲ್ಲೆಡೆ ಸುದ್ದಿ ಹಬ್ಬಿದೆ. ಹಾಗಿದ್ರೆ ಏನಿದು ತಿಳಿಯೋಣ ಬನ್ನಿ.
ಇದನ್ನೂ ಓದಿರಿ: ಪಿಎಂ ಕಿಸಾನ್ Big Update: ಈಗ ಗಂಡ-ಹೆಂಡತಿ ಇಬ್ಬರ ಖಾತೆಗೂ ಬರಲಿದೆಯಾ 12ನೇ ಕಂತಿನ ಹಣ?
(Corona Vaccine 2nd Dose) ಕೊರೊನಾ ಲಸಿಕೆ 2 ಡೋಸ್‌ಗಳನ್ನು ಪಡೆದುಕೊಂಡವರಿಗೆ ಸರ್ಕಾರದಿಂದ 5 ಸಾವಿರ ರೂಪಾಯಿ ನೀಡಲಾಗುತ್ತಿದೆ ಎನ್ನುವ ಸಂದೇಶವೊಂದು ಎಲ್ಲೆಡೆ ಹರಿದಾಡುತ್ತಿದೆ.
ಈ ಕುರಿತು ಸರ್ಕಾರವೂ ಕೂಡ ಸ್ಪಷ್ಟನೆಯನ್ನು ನೀಡಿದೆ. ಕೊರೊನಾ ಕುರಿತಾದ ಸಾಕಷ್ಟು ಕೆಲಸಗಳನ್ನು ಮಾಡಿದ್ದ ಸರ್ಕಾರ ಈಗ ಈ 5 ಸಾವಿರ ರೂಪಾಯಿ ಕುರಿತು ಏನು ಹೇಳುತ್ತದೆ ಎಂಬುದು ಇಲ್ಲಿದೆ.
ರೈತರಿಗೆ ಗುಡ್‌ನ್ಯೂಸ್: 10 ಸಾವಿರ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಸೆಟ್ ವಿತರಿಸಲು ರಾಜ್ಯ ಸರ್ಕಾರ ನಿರ್ಧಾರ!
ಲಸಿಕೆ ಪಡೆದವರಿಗೆ ನಿಜಕ್ಕೂ ದೊರೆಯಲಿದೆಯಾ ರೂ.5000 ?
ಪಿಐಬಿ (Press Information Beauro) ತನ್ನ ಅಧಿಕೃತ ಟ್ವಿಟ್ಟರ್ (Twitter) ಹ್ಯಾಂಡಲ್ ಮೂಲಕ ಈ ಕುರಿತು ಮಾಹಿತಿಯನ್ನು ನೀಡಿದೆ.
Covid 19: ಕೊವಿಡ್ 19 ಲಸಿಯ ಎರಡೂ ಪ್ರಮಾಣಗಳನ್ನು ಹಾಕಿಸಿಕೊಂಡವರು ಅರ್ಜಿಯೊಂದನ್ನು ತುಂಬಿದರೆ ಪ್ರಧಾನ ಮಂತ್ರಿ ಜನ ಕಲ್ಯಾಣ ವಿಭಾಗ ಅವರಿಗೆ ರೂ 5000 ನೀಡಲಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಎಂದು ಹೇಳಿದೆ.
ಬ್ರೇಕಿಂಗ್: ಉಚಿತ ಪಡಿತರ ಯೋಜನೆ ನಿಲ್ಲಿಸಲು ಕೇಂದ್ರದ ನಿರ್ಧಾರ!
PIB Fact Check: ಅಸಲಿಗೆ ಈ ಸುದ್ದಿ ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಇಂತಹ ಸಂದೇಶವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಶೇರ್ ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ.
ನಕಲಿ ಮೆಸೆಜ್‌ಗಳ ಕುರಿತು ಜಾಗೃತೆ ಇರಲಿ
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ರೀತಿಯ ಸಂದೇಶದ ಬಗ್ಗೆ ಜನರು ಜಾಗ್ರತರಾಗಿರಬೇಕು ಎಂದು ಪಿಐಬಿ ಹೇಳಿದೆ.
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ; ಹವಾಮಾನ ಇಲಾಖೆಯಿಂದ ಅತಿ ಹೆಚ್ಚು ಮಳೆಯಾಗುವ ಸೂಚನೆ!
ಈ ರೀತಿಯ ಸಂದೇಶಗಳನ್ನು ಮುಂದಕ್ಕೆ ಸಾಗಿಸಬೇಡಿ ಎಂದು ಹೇಳಿದೆ. ಈ ರೀತಿಯ ಸಂದೇಶಗಳ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣ ಅಪಾಯಕ್ಕೆ ಸಿಲುಕಿಕೊಳ್ಳಲಿದೆ ಎಂದು ಅದು ಹೇಳಿದೆ.