News

MBBS ಪುಸ್ತಕಗಳು ಕನ್ನಡಕ್ಕೆ ಅನುವಾದವಾಗುವುದೇ, ಸರ್ಕಾರದ ನಿಲುವೇನು?

13 November, 2022 10:38 AM IST By: Hitesh
Mbbs

ಎಂಬಿಬಿಎಸ್‌ (MBBS) ಪುಸ್ತಕಗಳನ್ನು ಕನ್ನಡಕ್ಕೆ ಅನುವುದದ ಕುರಿತು ಸರ್ಕಾರ ತನ್ನ ನಿಲುವನ್ನು ತಿಳಿಸಿದೆ. 

ಈಗಾಗಲೇ ದೇಶದ ಕೆಲವು ಹಿಂದಿ ರಾಜ್ಯಗಳು ಎಂಬಿಬಿಎಸ್‌ ಪಠ್ಯಗಳನ್ನು ಹಿಂದಿಗೆ ಅನುವಾದಿಸಿವೆ.

ನೇಪಾಳದಲ್ಲಿ ಒಂದೇ ವಾರದಲ್ಲಿ ಮೂರನೇ ಬಾರಿ ಭೂಕಂಪನ: ದೆಹಲಿ ಜನಕ್ಕೆ ಆತಂಕ! 

ಕೆಲವು ರಾಜ್ಯಗಳು ಎಂಬಿಬಿಎಸ್‌ ಪಠ್ಯಗಳನ್ನು ಹಿಂದಿಗೆ ಅನುವಾವದಿಸಿದ ಬೆನ್ನಲ್ಲೇ ಕನ್ನಡದಲ್ಲಿಯೂ ಎಂಬಿಬಿಎಸ್‌ ಪುಸ್ತಕಗಳು ಅನುವಾದವಾಗಲಿದೆಯೇ ಎನ್ನುವ ಪ್ರಶ್ನೆ ಸೃಷ್ಟಿ ಆಗಿತ್ತು.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳನ್ನು ಮೊದಲು ಜಾರಿಗೆ ತರುತ್ತಿದ್ದು, ಇದನ್ನು ಜಾರಿ ಮಾಡುತ್ತದೆಯೇ ಎನ್ನುವ ಕುತೂಹಲ ಸೃಷ್ಟಿ ಆಗಿತ್ತು.

ಇದನ್ನೂ ಓದಿರಿ ನೇಪಾಳದಲ್ಲಿ ಭೂಕಂಪನ: ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ! 

ಆದರೆ, ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಎಂಬಿಬಿಎಸ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆಯ ಬಗ್ಗೆ ಚಿಂತನೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.  

ಎಂಬಿಬಿಎಸ್ ಪುಸ್ತಕಗಳನ್ನು ಕನ್ನಡ ಭಾಷೆಗೆ ಅನುವಾದಿಸುವ ಯಾವುದೇ ಚಿಂತನೆಗಳಿಲ್ಲ ಎಂದು ರಾಜ್ಯ ಸರ್ಕಾರ  ಹೇಳಿದೆ.

ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ: ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌! 

mbbs

ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ ರಾಥೋಡ್ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿರಿ: ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ? 

Will MBBS books be translated into Kannada, what is the government's stand?

ಎಂಬಿಬಿಎಸ್‌ ಪಠ್ಯವನ್ನು ಕನ್ನಡಕ್ಕೆ ಅನುವಾದ ಮಾಡುವ ಸಂಬಂಧ ಇಲಾಖೆಯು ಉನ್ನತ ಶಿಕ್ಷಣ ಇಲಾಖೆಯಿಂದ ಯಾವುದೇ ನಿರ್ದೇಶನ ಅಥವಾ ಸಲಹೆಗಳು ಬಂದಿಲ್ಲ ಎಂದು ತಿಳಿಸಿದ್ದಾರೆ. 

Will MBBS books be translated into Kannada, what is the government's stand?

ಎಂಬಿಬಿಎಸ್ ಪುಸ್ತಕಗಳನ್ನು ಮಧ್ಯಪ್ರದೇಶ ಸರ್ಕಾರ ಹಿಂದಿಗೆ ಭಾಷೆಗೆ ಅನುವಾದಿಸಿದ್ದು, ಇದರ ಬೆನ್ನಲ್ಲೇ ಕನ್ನಡದಲ್ಲೂ ಪುಸ್ತಕಗಳ ಅನುವಾದಿಸುವ ಕುರಿತು ಮಾತುಗಳು ಕೇಳಿ ಬಂದಿದ್ದವು.

ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಿದೆ.

ಸದ್ಯದ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ತಜ್ಞರು ವೈದ್ಯರು ತಮ್ಮ ಪ್ರದೇಶಗಳಿಗೆ ಸೀಮಿತರಾಗುವುದರಿಂದ ಮಹತ್ವಾಕಾಂಕ್ಷೆಗಳನ್ನು

ಹೊಂದಿರುವ ವೈದ್ಯರಿಗೆ ಅವಕಾಶಗಳನ್ನು ಕಡಿಮೆ ಮಾಡಿದಂತಾಗುತ್ತದೆ ಎಂದು  ಅಭಿಪ್ರಾಯಪಟ್ಟಿದ್ದಾರೆ.

ರಾಜೀವ್‌ ಗಾಂಧಿ ಹತ್ಯೆಗೆ ಕಾರಣವೇನು, ಸಂಚು ರೂಪಿಸಿದ್ದೇಗೆ ?