News

ಗ್ರೂಪ್ ಚಾಟ್‌ಗಳಿಂದ ನಿಮಗೆ ಕಿರಿಕಿರಿಯಾಗುತ್ತಿದ್ದರೆ ಚಿಂತಿಸಬೇಡಿ, ಇನ್ನೂ ಮುಂದೆ ಶಾಶ್ವತವಾಗಿ ಮ್ಯೂಟ್ ಮಾಡುವ ಅವಕಾಶ

23 October, 2020 8:53 PM IST By:

ಹಲವು ತಿಂಗಳ ಬಳಿಕ ವಾಟ್ಸಪ್ ಹೊಸ ಫೀಚರ್ ಒಂದನ್ನು ಹೊರತಂದಿದೆ. ಇಂದು ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮವಾಗಿರುವ  ವಾಟ್ಸಪ್‌ನಲ್ಲಿ ವಿವಿಧ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಬಳಕೆದಾರರು ಚಾಟ್ ಅನ್ನು ಶಾಶ್ವತವಾಗಿ ಮ್ಯೂಟ್ ಮಾಡಬಹುದು.

ವಾಟ್ಸಪ್ ವೈಯಕ್ತಿಕ ಚಾಟ್ ಮತ್ತು ಗ್ರೂಪ್ ಚಾಟ್‌ಗಳಿಂದ ನಿಮಗೆ ಕಿರಿಕಿರಿಯಾಗುತ್ತಿದ್ದರೆ ಮತ್ತು ನೋಟಿಫಿಕೇಶನ್‌ ಸಮಸ್ಯೆಯಾಗುತ್ತಿದ್ದರೆ, ನೀವು ವಾಟ್ಸಪ್ ಚಾಟ್ ಅನ್ನು ಮ್ಯೂಟ್ ಮಾಡುವ ಆಯ್ಕೆಯನ್ನು ನಿಮಗೆ ವಾಟ್ಸಪ್ ನೀಡಿತ್ತು. ಅಂದರೆ, ವೈಯಕ್ತಿಕ ಚಾಟ್ ಇರಲಿ ಅಥವಾ ಗ್ರೂಪ್ ಚಾಟ್ ಇರಲಿ, ಅದರಲ್ಲಿ 8 ಗಂಟೆ, 1 ವಾರ ಮತ್ತು 1 ವರ್ಷ ಮ್ಯೂಟ್ ಮಾಡುವ ಆಯ್ಕೆಯನ್ನು ಕಂಪನಿ ಒದಗಿಸಿತ್ತು. ಆದರೆ, ಈಗ 1 ವರ್ಷದ ಬದಲು, ಶಾಶ್ವತ ಮ್ಯೂಟ್ ಆಯ್ಕೆಯನ್ನು ಒದಗಿಸಿದೆ.

ಬ್ಯಾಕ್ ಟು ಬ್ಯಾಕ್ ಬರುವ ಗ್ರೂಪ್ ಮೆಸೆಜ್ ಗಳಿಂದ ಪಾರಾಗಲು ಇದೊಂದು ಉತ್ತಮ ಆಯ್ಕೆಯಾಗಿದೆ. ಒಮ್ಮೆ ಚಾಟ್ ಮ್ಯೂಟ್ ಮಾಡಿದಾಕ್ಷಣ ಯಾವುದೇ ನೋಟಿಫಿಕೇಷನ್ ಕಾಣಿಸುವುದಿಲ್ಲ.

ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯ:

ವಾಟ್ಸಪ್ ತಂದ ಹೊಸ ಫೀಚರ್ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಮೂಲಕ ವಾಟ್ಸಪ್ ಅನ್ನು ಅಪ್‌ಡೇಟ್ ಮಾಡಿಕೊಂಡು ಈ ಫೀಚರ್ ಬಳಸಬಹುದು.

​ವಾಟ್ಸಪ್ ಚಾಟ್ ಮ್ಯೂಟ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಮತ್ತು ಐಫೋನ್ ಗಳಲ್ಲಿ ವಾಟ್ಸಪ್ ತೆರೆದ ನಂತರ ಮ್ಯೂಟ್ ಮಾಡಬೇಕೆಂದಿರುವ ಚಾಟ್ ಅಥವಾ ಗ್ರೂಪ್ ಓಪನ್ ಮಾಡಬೇಕು.  ಚಾಟ್ ಸ್ವೈಪ್ ಮಾಡುವಾಗಲೂ ನಿಮಗೆ ಮೋರ್‌ನಲ್ಲಿ ಮ್ಯೂಟ್ ಆಯ್ಕೆ ಇದೆ. ಅಲ್ಲಿ ನಿಮಗೆ 8 ಗಂಟೆ, 1 ವಾರ ಮತ್ತು ಆಲ್ವೇಸ್ ಎಂಬ ಆಯ್ಕೆ ಇರುತ್ತದೆ. ನಿಮಗೆ ಬೇಕಾದ  ಆದ್ಯತೆಯನ್ನು ಸೆಲೆಕ್ಟ್ ಮಾಡಿಕೊಂಡರೆ ವಾಟ್ಸಪ್ ಕಿರಿಕಿರಿಯಿಂದ ಮುಕ್ತಿ ಹೊಂದಬಹುದು.