News

ರಾಜೀವ್‌ ಗಾಂಧಿ ಹತ್ಯೆಗೆ ಕಾರಣವೇನು, ಸಂಚು ರೂಪಿಸಿದ್ದೇಗೆ ?

12 November, 2022 11:12 AM IST By: Hitesh
Rajiv Gandhi

ರಾಜೀವ್‌ ಗಾಂಧಿ ಹಂತಕರು ಇದೀಗ ಸುದೀರ್ಘ ಜೈಲುವಾಸ ಅನುಭವಿಸಿ ಬಿಡುಗಡೆ ಆಗಿದ್ದಾರೆ. ಆದರೆ, ರಾಜೀವ್‌ ಗಾಂಧಿ ಅವರನ್ನು ಹತ್ಯೆ ಮಾಡಿದ್ದು, ಏಕೆ.. ಶ್ರೀಲಂಕಾದ ಆ ಘಟನೆ ಹೇಗೆ ಕಾರಣವಾಗಿತ್ತು. ಇಲ್ಲಿದೆ ವಿವರ.

ಇದನ್ನೂ ಓದಿರಿ: ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ?

ದೇಶದ ಮಾಜಿ ಪ್ರಧಾನಿ ಅವರನ್ನು ಮಾನವಬಾಂಬ್‌ನ ಮೂಲಕ ಸ್ಫೋಟಿಸಿ ಹತ್ಯೆ ಮಾಡಿದ ಹಂತಕರು ಕೊನೆಗೂ ಬಿಡುಗಡೆ ಆಗಿದ್ದಾರೆ.  

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಅಂದು ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಅಂತಾರಿಕ ಯುದ್ಧವನ್ನು ತಡೆಯಲು ನೆರವು ನೀಡಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಯಿತು.  

ಶ್ರೀಲಂಕಾದಲ್ಲಿ ಲ್‌ಟಿಟಿಯನ್ನು ನಿಗ್ರಹಿಸುವ ಸಲುವಾಗಿ ಭಾರತೀಯ ಸೈನ್ಯ ಕಳುಹಿಸಿದರು. ಅದೊಂದು ನಿರ್ಧಾರ ಭಾರತದ ಮಟ್ಟಿಗೆ ಮುಳುವಾಯಿತು.

ಇದನ್ನೂ ಓದಿರಿ: ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ 

ಯಾವಾಗ ರಾಜೀವ್ ಗಾಂಧಿ ಅವರು ಕಳುಹಿಸಿದ ಸೈನ್ಯ ಶ್ರೀಲಂಕದಲ್ಲಿ ನುಗ್ಗಿ ಎಲ್‌ಟಿಟಿ ವಿರುದ್ಧ ಯುದ್ಧ ಸಾರಿತ್ತು.

ಅಲ್ಲಿಂದ ಎಲ್‌ಟಿಟಿಗೆ ರಾಜೀವ್‌ ಗಾಂಧಿ ಹಾಗೂ ಭಾರತದ ಮೇಲೆ ವೈಷಮ್ಯ ಹೆಚ್ಚಾಯಿತು.   

ರಾಜೀವ್‌ ಗಾಂಧಿ ಅವರು ತಮಿಳುನಾಡಿನ ಚುನಾವಣೆ ಪ್ರಚಾರದಲ್ಲಿ ಇದ್ದಾಗ ಆ ದುರ್ಘಟನೆ ನಡೆದಿತ್ತು.

ಮಾನವ ಬಾಂಬ್ ದಾಳಿಯ ಬಗ್ಗೆ ಆಗ ಯಾರೂ ಊಹಿಸಿರಲಿಲ್ಲ. ಆದರೆ ಎಲ್ಟಿಟಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲು ಮುಂದಾಗಿತ್ತು.

ಎಲ್‌ಟಿಟಿಯ ಧನು ಹರಕೆಯ ಕುರಿಯಂತೆ ರಾಜೀವ್ ಗಾಂಧಿ ಅವರನ್ನು ಮುಗಿಸಲು ಆತ್ಮಹತ್ಯೆ ಮಾಡಿಕೊಳ್ಳುವ ಮಾನವ ಬಾಂಬರ್ ಆಗಿ ಸಿದ್ಧನಾದ.

Rajiv Gandhi

ಅವತ್ತು ಮೇ 21, 1991 ರಾಜೀವ್ ಗಾಂಧಿ ತಮಿಳುನಾಡಿನ ಪೆರಂಬೂರಿಗೆ ಚುನಾವಣೆ ಪ್ರಚಾರಕ್ಕೆ ಬರಲಿದ್ದಾರೆ ಎನ್ನುವ ಮಾಹಿತಿ ಅಧರಿಸಿ ದಾಳಿ ಮಾಡಲು ಒಂದು ಪ್ಲಾನ್ ಮಾಡಲಾಯಿತು.  

ಆಂಧ್ರಪ್ರದೇಶದ ವಿಶಾಖ ಪಟ್ಟಣoನಿಂದ ತಮಿಳುನಾಡಿನ ಪೆರಂಬೂರಿಗೆ ಕಾರಿನಲ್ಲಿ ಬರುವಾಗ ಆತ್ಮಹತ್ಯೆ ಬಾಂಬರ್ ಧನು ಸೊಂಟಕ್ಕೆ ಆರ್ ಡಿ ಎಕ್ಸ್ ಕಟ್ಟಿಕೊಂಡು ಸಿದ್ಧನಾಗಿದ್ದ.

ದಾರಿಯುದ್ಧಕ್ಕೂ ರಾಜೀವ್ ಗಾಂಧಿ ಅವರಿಗೆ ಹಾರ ಹಾಕಲು ಸಾಕಷ್ಟು ನೂಕು ನುಗ್ಗಲಿತ್ತು.

ಸ್ಥಳೀಯ ಕಾಂಗ್ರೆಸ್ ನಾಯಕರು ಭದ್ರಾತಾ ಲೋಪ ಆಗುತ್ತದೆ, ಪ್ರೊಟೊಕಾಲ್ ಉಲ್ಲಂಘನೆ ಆಗುತ್ತದೆ ಎನ್ನುವ ಅರಿವು ಇದ್ದೂ ರಾಜೀವ್ ಗಾಂಧಿಯವರನ್ನು ಭೇಟಿ ಆಗಲು ಗುಂಪಿನ ನಡುವೆ ಹಾತೊರೆಯುತ್ತಿದ್ದರು.

ಆಗ ಆ ಗುಂಪಿನ ನಡುವೆಯಿಂದ ಬಂದ ಧನು ರಾಜೀವ್ ಗಾಂಧಿಯ ಹತ್ತಿರಕ್ಕೆ ಬಂದು ಆರ್ ಡಿ ಎಕ್ಸ್ ಬಟನ್ ಅನ್ನು ಅದುಮುತಿದ್ದ ಹಾಗೆ ಭೀಕರ ಸ್ಫೋಟ ಕೇಳಿಸಿತು.

ಸಾವಿನ ಯಾವ ಮುನ್ಸೂಚನೆ ಇಲ್ಲದ ರಾಜೀವ್ ಗಾಂಧಿ ಅವರು ಕಣ್ಣು ಮಿಟುಕಿಸಿ ತೆರೆಯುವಷ್ಟರಲ್ಲಿ ಬಾಂಬ್ ದಾಳಿಗೆ ಬಲಿಯಾಗಿದ್ದರು.

ಅಸಲಿಗೆ ರಾಜೀವ್ ಗಾಂಧಿ ಅವರಿಗೆ ರಾಜಕೀಯಕ್ಕೆ ಬರಲು ಯಾವ ಒಲವು ಇರಲಿಲ್ಲ. ಅವರು ಪೈಲೆಟ್ ಆಗಲು ಬಯಸಿದ್ದರು.

ಇಂದಿರಾ ಗಾಂಧಿ ಅವರ ನಿಧನದ ಕಾರಣದಿಂದ ಅವರು ಅನಿವಾರ್ಯವಾಗಿ ರಾಜಕೀಯದತ್ತ ಹೆಜ್ಜೆ ಇಡಬೇಕಾಯಿತು.

ನಂತರ ಅವರು ಪ್ರಧಾನಿ ಆದರು. ಆದರೆ ಶ್ರೀ ಲಂಕಾಕ್ಕೆ ಸಹಾಯ ಹಸ್ತ ಚಾಚಲು ಅವರು ತೆಗೆದುಕೊಂಡ ಒಂದು ನಿರ್ಧಾರ ಅವರ ಹತ್ಯೆಯಲ್ಲಿ ಮುಕ್ತಾಯವಾಯಿತು.

ಇಂದಿರಾಗಾಂಧಿ ಹಾಗೂ ಫಿರೋಜ್ ಗಾಂಧಿಯವರ ಹಿರಿಯ ಮಗನಾದ ರಾಜೀವ್ ಗಾಂಧಿಯನ್ನು ರಾಜಕೀಯಕ್ಕೆ ಕರೆತರಲಾಗಿತ್ತು. ಆದರೆ, ಈ ಎಲ್ಲ ಘಟನೆಗಳ ನಂತರ ಸೋನಿಯಾ ಗಾಂಧಿ ಒಂಟಿಯಾದರು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರು ತಂದೆಯನ್ನು ಕಳೆದುಕೊಂಡು ಜೀವನವಿಡೀ ತಂದೆಯ ಪ್ರೀತಿಯಿಂದ ವಂಚಿತರಾಗಬೇಕಾಯಿತು.

ತಮಿಳುನಾಡಿಗೆ ಚುನಾವಣೆ ಪ್ರಚಾರ ತೆರಳುವ ಮುನ್ನ ರಾಜೀವ್ ಗಾಂಧಿ ಅವರಿಗೆ ಜೀವ ಬೆದರಿಕೆ ಇದೆಯೆಂದು ಸ್ಪಷ್ಟವಾಗಿ ಮಾಹಿತಿ ಇದ್ದರೂ ರಾಜೀವ್ ಗಾಂಧಿ ಅವರು ಧೈರ್ಯವಾಗಿ ಮುನ್ನುಗ್ಗಿದರು.

ಇದೇ ಅವರ ಸಾವಿಗೆ ಮುನ್ನುಡಿ ಬರಿದಿತ್ತು. 

ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ?