News

ರಾಜ್ಯ ಸರ್ಕಾರದಿಂದ ಇದೀಗ ಆರೋಗ್ಯ ಗ್ಯಾರಂಟಿ ಜಾರಿ, ಏನಿದು ?

11 December, 2023 1:36 PM IST By: Hitesh
ರಾಜ್ಯ ಸರ್ಕಾರದಿಂದ ಹೊಸ ಗ್ಯಾರಂಟಿ ಜಾರಿ

ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ 6ನೇ ಗ್ಯಾರಂಟಿಯೊಂದನ್ನು ಜಾರಿ ಮಾಡುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಬಂದ ಮೇಲೆ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ನಿಮಗೆಲ್ಲ ತಿಳಿದೇ ಇದೆ

ಇದೀಗ 6ನೇ ಗ್ಯಾರಂಟಿ ಜಾರಿ ಮಾಡಲು ಮುಂದಾಗುತ್ತಿದೆ.

ಆರನೇ ಗ್ಯಾರಂಟಿ: ಆರೋಗ್ಯವೇ ಭಾಗ್ಯ

ರಾಜ್ಯ ಸರ್ಕಾರವು ಇದೀಗ ಆರೋಗ್ಯವೇ ಭಾಗ್ಯ ಎನ್ನುವ ಘೋಷಾವಾಕ್ಯದೊಂದಿಗೆ ರಾಜ್ಯದ ಜನರಿಗೆ ಆರೋಗ್ಯ ಗ್ಯಾರಂಟಿಯನ್ನು ನೀಡುತ್ತಿದೆ.

ಇದರ ಭಾಗವಾಗಿ ರಾಜ್ಯದ ಎಲ್ಲಾ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಂ.ಆ‌ರ್.ಐ ಹಾಗೂ ಸಿಟಿ ಸ್ಕ್ಯಾನ್ ಸೇವೆಗಳನ್ನು

ಉಚಿತವಾಗಿ ನೀಡಲು 47 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಅಲ್ಲದೇ ಶುಚಿ ಯೋಜನೆಯಡಿ 10 ರಿಂದ 18 ವರ್ಷ ವಯೋಮಾನದ 19 ಲಕ್ಷ ಹೆಣ್ಣುಮಕ್ಕಳಿಗೆ ರೂ.47 ಕೋಟಿ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್

ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಈ ಹಿಂದೆಯೂ ಸಹ ಸ್ಯಾನಿಟರಿ ಪ್ಯಾಡ್‌ ನೀಡುವ ಯೋಜನೆ ಜಾರಿಯಲ್ಲಿತ್ತು.

ಆದರೆ, ಈ ನಡುವೆ ಈ ಯೋಜನೆಯನ್ನು ನಿಲ್ಲಿಸಲಾಗಿತ್ತು.

ಇದೀಗ ರಾಜ್ಯ ಸರ್ಕಾರವು ಈ ಯೋಜನೆಯನ್ನು ಮರಳಿ ಜಾರಿ ಮಾಡಲು ಮುಂದಾಗಿದೆ.

ಇನ್ನು ಸರ್ಕಾರವು ಈಗಾಗಲೇ ಘೋಷಿಸಿರುವಂತೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ

ರಾಜ್ಯದ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ 85 ಸ್ಪೋಕ್ ಸೆಂಟರ್ ಹಾಗೂ 10 ಹಬ್‌ಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.  

ಆಡಳಿತ ಗ್ಯಾರಂಟಿ ಅಷ್ಟೇ ಅಲ್ಲ ಅಭಿವೃದ್ಧಿಯೂ: ಸಿ.ಎಂ

ನಮ್ಮ ಸರ್ಕಾರವು ಆಡಳಿತ ಗ್ಯಾರಂಟಿಗಳಿಗಷ್ಟೇ ಸೀಮಿತವಾಗದೆ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದೆ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ 143 ಕಾರ್ಯಕ್ರಮಗಳಲ್ಲಿ

83ಕ್ಕೆ ಆದೇಶ ಹೊರಡಿಸಿ, ಜಾರಿಗೊಳಿಸುತ್ತಿದೆ ಎಂದಿದ್ದಾರೆ.

ಅಲ್ಲದೇ ಈಗಾಗಲೇ 4 ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ.

ಯುವನಿಧಿ ಜನವರಿಯಲ್ಲಿ ಜಾರಿಗೆ ಬರಲಿದೆ.

ನಮ್ಮ ಆಡಳಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸೀಮಿತವಾಗದೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ಕೊಟ್ಟು ಕರ್ನಾಟಕ

ಅಭಿವೃದ್ಧಿ ಮಾದರಿ ಆಡಳಿತವೆಂಬ ನವ ಕಲ್ಪನೆಗೆ ನಾಂದಿಯಾಗಿದ್ದೇವೆ. ನಮ್ಮ ಸಾಧನೆಗಳು ಸದನದ ಒಳಗೆ ಮತ್ತು ಹೊರಗೆ ಹಾಳೆಗಳಿಗೆ

ಸೀಮಿತವಾಗಿರದೆ ಜನರ ಬದುಕಲ್ಲಿ ಪ್ರತಿಫಲಿಸುತ್ತಿವೆ ಎಂದು ಮುಖ್ಯಮಂತ್ರಿ Siddaramaiah ಹೇಳಿದ್ದಾರೆ.