GI tag : ಆಗಾಗ ನಾವೆಲ್ಲ ಪತ್ರಿಕೆಗಳಲ್ಲೊ, ಸುದ್ದಿ ಮಾಧ್ಯಮಗಳಲ್ಲೊ “ಜಿಐ ಟ್ಯಾಗ್” (GI Tag) ಎನ್ನುವ ಶಬ್ದವನ್ನು ಓದುತ್ತಿರುತ್ತೇವೆ. ಈ ಉತ್ಪನ್ನಕ್ಕೆ ಜಿಐ ಟ್ಯಾಗ್ ಸಿಕ್ಕಿತು, ಈ ಬಟ್ಟೆಗೆ ಜಿಐ ಟ್ಯಾಗ್ ಸಿಕ್ಕಿತು ಎಂದು ಮಾತಾಡುತ್ತೇವೆ ಕೂಡ. ಹಾಗಿದ್ರೆ ಈ ಜಿಐ ಟ್ಯಾಗ್ ಅಂದ್ರೆ ಏನಂತ ಗೊತ್ತಾ? ಇಲ್ಲಿದೆ ಈ ಕುರಿತಾದ ಸಂಪೂರ್ಣ ಮಾಹಿತಿ
GI Tag ಎಂದರೇನು? : GI Tag ಎಂದರೆ “ಭೌಗೋಳಿಕ ಸೂಚಕ ಟ್ಯಾಗ್” (Geographical Indication Tag) ಎಂದು ಅರ್ಥ. ಅಂದರೆ ಆಯಾ ಭೌಗೋಳಿಕ ಪ್ರದೇಶದಲ್ಲಿ ಮಾತ್ರ ದೊರೆಯುವ ಅಥವಾ ಬೆಳೆಯುವ ಅಥವಾ ತಯಾರಿಸಲಾಗುವ ವಿಶೇಷ ಉತ್ಪನ್ನಗಳು, ಕಲಾಕೃತಿಗಳು, ವಸ್ತುಗಳು, ತಿನಿಸುಗಳು, ಬೆಳೆಗಳು, ಬಟ್ಟೆ ಬರೆ ಮುಂತಾದವುಗಳಿಗೆ ಭೌಗೋಳಿಕ ಗುರುತಿನ ಆಧಾರದ ಮೇಲೆ ಉತ್ಪಾದಿಸುವ ಕಾರಣಕ್ಕೆ ಜಿಐ ಟ್ಯಾಗ್ ನೀಡಲಾಗುತ್ತದೆ.
ಆ ವಸ್ತುವಿನ ಹೆಸರು ಕೇಳಿದರೆ ಎಂತವರು ಅದರ ಭೌಗೋಳಿಕ ಪ್ರದೇಶವನ್ನು ಗುರುತಿಸುವಂತಿರಬೇಕು. ಅಂತವುಗಳನ್ನ ಮಾತ್ರ ಜಿಐ ಟ್ಯಾಗ್ ನೀಡಲು ಪರಿಗಣಿಸಲಾಗುತ್ತದೆ. ಹೀಗೆ ಒಂದು ಉತ್ಪನ್ನದ ಮೂಲ ತಯಾರಿಕಾ ಪ್ರದೇಶವನ್ನು ಜಿಐ ಟ್ಯಾಗ್ ಸೂಚಿಸುತ್ತದೆ.
ಭಾರತದಲ್ಲಿ ಇಂಥ ಒಟ್ಟು 400ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ನ್ನು ನೀಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಅದರಲ್ಲೂ ಭಾರತದಲ್ಲಿ ಅತಿ ಹೆಚ್ಚು ಜಿಐ ಟ್ಯಾಗ್‌ಗಳನ್ನ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಪಡೆದಿಕೊಂಡಿರುವುದು ವಿಶೇಷವಾದ ಸಂಗತಿ.
ಜಿಐ ಟ್ಯಾಗ್‌ನ ಆರಂಭ ?
GI ಟ್ಯಾಗ್ ಭಾರತದಲ್ಲಿ ಸೆಪ್ಟೆಂಬರ್15, 2003 ರಿಂದ ಜಾರಿಗೆ ಬಂದಿತು ಎನ್ನುತ್ತವೆ ದಾಖಲೆಗಳು. ಡಾರ್ಜಿಲಿಂಗ್ ಟೀ GI ಟ್ಯಾಗ್ ಪಡೆದ ಮೊದಲ ಭಾರತೀಯ ಉತ್ಪನ್ನವಾಗಿದೆ. ಅದಾದ ನಂತರ ಇದುವರೆಗೆ ಸರಿಸುಮಾರು 400 ಕ್ಕು ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗಿದೆ.
ಭಾರತದಲ್ಲಿ GI ಟ್ಯಾಗ್‌ನ್ನು ಬಿಡುಗಡೆ ಮಾಡಿದವರು ಯಾರು?
GI ಟ್ಯಾಗ್‌ಗಳನ್ನು ಉತ್ಪನ್ನಗಳ ಭೌಗೋಳಿಕ ಸೂಚನೆಗಳು (ನೋಂದಣಿ ಮತ್ತು ರಕ್ಷಣೆ) ಕಾಯಿದೆ, 1999 ಆರಂಭಿಸಲಾಗಿದೆ. ಈ ಟ್ಯಾಗ್‌ಗಳನ್ನು ಕೈಗಾರಿಕಾ ಪ್ರಚಾರ ಮತ್ತು ಆಂತರಿಕ ವ್ಯಾಪಾರ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ನೀಡಲಾಗುತ್ತದೆ.
ವಿಶ್ವ ವ್ಯಾಪಾರ ಸಂಸ್ಥೆ ಡಬ್ಲ್ಯೂಟಿ (WTO) ಅಂತಾರಾಷ್ಟ್ರೀಯ ಬೌದ್ಧಿಕ ಹಕ್ಕುಗಳನ್ನು ಕಾಯ್ದುಕೊಳ್ಳಲು ಈ ವ್ಯವಸ್ತೆಯನ್ನು ರೂಪಿಸಿದೆ.
ಜಿಐ ಟ್ಯಾಗ್‌ನ ನೀತಿ-ನಿಯಮಗಳು
ಯಾವುದೋ ಒಂದು ನಿಗದಿತ ಸ್ಥಳದಲ್ಲಿ ಭೌಗೋಳಿಕವಾಗಿ ವಿಶೇಷ ಎನಿಸಿಕೊಳ್ಳುವ ಉತ್ಪನ್ನವು ಅದರದ್ದೆ ಆದಂತಹ ಕೆಲವು ಮಾನದಂಡಗಳನ್ನು ಒಳಗೊಂಡಿರುತ್ತವೆ. ಅಲ್ಲದೇ ಆ ಉತ್ಪನ್ನವು ಆ ಭಾಗದ ಹೆಸರನ್ನು ಕೂಡ ಪ್ರಸಿದ್ಧಿಗಳಿಸುವ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅಂದರೆ ಆ ಉತ್ಪನ್ನದ ಜೊತೆಗೆ ಆ ಊರಿನ ಅಥವಾ ಆ ಜಿಲ್ಲೆಯ ಹೆಸರುಗಳು ಕೂಡ ಬೆರೆತಿರುತ್ತವೆ.
ಉದಾಹರಣೆಗೆ ಹೇಳುವುದಾದರೇ, ಧಾರವಾಡ ಪೇಡಾ, ಇಳಕಲ್ ಸೀರೆ, ಗುಳೇದಗುಡ್ಡ ಕಣ, ಕಲಬುರಗಿ ತೊಗರಿಬೇಳೆ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಕಮಲಾಪುರ ಕೆಂಪು ಬಾಳೆ, ಚೆನ್ನಪಟ್ಟಣದ ಗೊಂಬೆಗಳು.
ಇನ್ನೂ ಜಿಐ ಟ್ಯಾಗ್‌ಗಳನ್ನು ಪಡೆದ ರಾಜ್ಯಗಳ ಪಟ್ಟಿಯನ್ನು ಗಮನಿಸಿದರೆ ಇಲ್ಲಿ ದಕ್ಷಿಣ ಭಾರತದ ರಾಜ್ಯಗಳು ಅತಿ ಹೆಚ್ಚು ಪಡೆದುಕೊಂಡಿವೆ. ಇದರಲ್ಲಿ ಕರ್ನಾಟಕವೂ ಅತಿ ಹೆಚ್ಚು ಜಿಐ ಟ್ಯಾಗ್ ಪಡೆದುಕೊಂಡ ರಾಜ್ಯವಾಗಿದೆ.
ಜಿಐ ಟ್ಯಾಗ್ ಪಡೆದುಕೊಂಡ ಕರ್ನಾಟಕದ ಉತ್ಪನ್ನಗಳು
|
ಸಂಖ್ಯೆ |
ಭೌಗೋಳಿಕ ಸೂಚನೆ |
ಮಾದರಿ |
|
1. |
ಬ್ಯಾಡಗಿ ಮೆಣಸಿನಕಾಯಿ |
ಕೃಷಿ |
|
2. |
ಕಿನ್ನಾಳ ಆಟಿಕೆಗಳು |
ಕರಕುಶಲ |
|
3. |
ಮೈಸೂರು ಅಗರಬತ್ತಿ |
ತಯಾರಿಸಲಾಗಿದೆ |
|
4. |
ಬೆಂಗಳೂರು ನೀಲಿ ದ್ರಾಕ್ಷಿಗಳು |
ಕೃಷಿ |
|
5. |
ಮೈಸೂರು ಪಾಕ್ |
ಸಿಹಿತಿಂಡಿಗಳು |
|
6. |
ಬೆಂಗಳೂರು ಗುಲಾಬಿ ಈರುಳ್ಳಿ |
ಕೃಷಿ |
|
7. |
ಕೂರ್ಗ್ ಕಿತ್ತಳೆ |
ಕೃಷಿ |
|
8. |
ಮೈಸೂರು ರೇಷ್ಮೆ |
ಕರಕುಶಲ |
|
9. |
ಬಿದ್ರಿವೇರ್ |
ಕರಕುಶಲ |
|
10. |
ಚನ್ನಪಟ್ಟಣ ಆಟಿಕೆಗಳು ಮತ್ತು ಗೊಂಬೆಗಳು |
ಕರಕುಶಲ |
|
11. |
ಮೈಸೂರು ರೋಸ್ವುಡ್ ಕೆತ್ತನೆ |
ಕರಕುಶಲ |
|
12. |
ಮೈಸೂರು ಶ್ರೀಗಂಧದ ಎಣ್ಣೆ |
ತಯಾರಿಸಲಾಗಿದೆ |
|
13. |
ಮೈಸೂರು ಸ್ಯಾಂಡಲ್ ಸೋಪ್ |
ತಯಾರಿಸಲಾಗಿದೆ |
|
14. |
ಕಸೂತಿ ಕಸೂತಿ |
ಕರಕುಶಲ |
|
15. |
ಮೈಸೂರು ಸಾಂಪ್ರದಾಯಿಕ ಚಿತ್ರಕಲೆಗಳು |
ಕರಕುಶಲ |
|
16. |
ಮೈಸೂರು ವೀಳ್ಯದೆಲೆ |
ಕೃಷಿ |
|
17. |
ನಂಜನಗೂಡು ಬಾಳೆ |
ಕೃಷಿ |
|
18. |
ಮೈಸೂರು ಮಲ್ಲಿಗೆ |
ಕೃಷಿ |
|
19. |
ಉಡುಪಿ ಮಲ್ಲಿಗೆ |
ಕೃಷಿ |
|
20. |
ಹಡಗಲಿ ಮಲ್ಲಿಗೆ |
ಕೃಷಿ |
|
21. |
ಇಳಕಲ್ ಸೀರೆ |
ಕರಕುಶಲ |
|
22. |
ನವಲಗುಂದ ದುರ್ರೀಸ್ |
ಕರಕುಶಲ |
|
23. |
ಕರ್ನಾಟಕ ಕಂಚಿನ ಸಾಮಾನು |
ಕರಕುಶಲ |
|
24. |
ಮೊಳಕಾಲ್ಮುರು ಸೀರೆಗಳು |
ಕರಕುಶಲ |
|
25. |
ಮಾನ್ಸೂನ್ಡ್ ಮಲಬಾರ್ ಅರೇಬಿಕಾ ಕಾಫಿ |
ಕೃಷಿ |
|
26. |
ಮಾನ್ಸೂನ್ಡ್ ಮಲಬಾರ್ ರೋಬಸ್ಟಾ ಕಾಫಿ |
ಕೃಷಿ |
|
27. |
ಕೂರ್ಗ್ ಗ್ರೀನ್ ಏಲಕ್ಕಿ |
ಕೃಷಿ |
|
28. |
ಧಾರವಾಡ ಪೇಡಾ |
ಆಹಾರ ಪದಾರ್ಥ |
|
29. |
ಕೂರ್ಗ್ ಆರೆಂಜ್ |
ಕೃಷಿ |
|
30. |
ಮಲಬಾರ್ ಪೆಪ್ಪರ್ |
ಕೃಷಿ |
|
31. |
ಮೈಸೂರಿನ ಗಂಜಿಫಾ ಕಾರ್ಡ್ಸ್ |
ಕರಕುಶಲ |
|
32. |
ದೇವನಹಳ್ಳಿ ಪೊಮೆಲ್ಲೋ |
ಕೃಷಿ |
|
33. |
ಅಪ್ಪೆಮಿಡಿ ಮಾವು |
ಕೃಷಿ |
|
34. |
ಕಮಲಾಪುರ ಕೆಂಪು ಬಾಳೆ |
ಕೃಷಿ |
|
35. |
ಸಂಡೂರ್ ಲಂಬಾಣಿ ಕಸೂತಿ |
ಕರಕುಶಲ ವಸ್ತುಗಳು |
|
36. |
ಉಡುಪಿ ಮಟ್ಟು ಗುಳ್ಳ ಬದನೆ |
ಕೃಷಿ |
|
37. |
ಕರ್ನಾಟಕ ಕಂಚಿನ ಸಾಮಾನು ಲೋಗೋ |
ಕರಕುಶಲ |
|
38. |
ಮೈಸೂರು ಲೋಗೋದ ಗಂಜಿಫಾ ಕಾರ್ಡ್ಸ್ |
ಕರಕುಶಲ |
|
39. |
ನವಲಗುಂದ ದುರ್ರೀಸ್ ಲೋಗೋ |
ಕರಕುಶಲ |
|
40. |
ಗುಳೇದಗುಡ್ಡ ಖಾನ |
ಕರಕುಶಲ |
|
41. |
ಉಡುಪಿ ಸೀರೆಗಳು |
ಕರಕುಶಲ |
|
42. |
ಮೈಸೂರು ಸಿಲ್ಕ್ ಲೋಗೋ |
ಕರಕುಶಲ |
|
43. |
ಕೊಲ್ಹಾಪುರಿ ಚಪ್ಪಲ್ |
ಕರಕುಶಲ |
|
44. |
ಕೂರ್ಗ್ ಅರೇಬಿಕಾ ಕಾಫಿ |
ಕೃಷಿ |
|
45. |
ಚಿಕ್ಕಮಗಳೂರು ಅರೇಬಿಕಾ ಕಾಫಿ |
ಕೃಷಿ |
|
46. |
ಬಾಬಾಬುಡನ್‌ಗಿರಿಸ್ ಅರೇಬಿಕಾ ಕಾಫಿ |
ಕೃಷಿ |
|
47. |
ಸಿರ್ಸಿ ಅಡಿಕೆ |
ಕೃಷಿ |
|
48. |
ಕಲಬುರಗಿ ತೊಗರಿ ಬೇಳೆ |
ಕೃಷಿ |
|
49. |
ಇಂಡಿ ಲಿಂಬೆ |
ಕೃಷಿ |