ಕರ್ನಾಟಕ ಗೃಹ ಜ್ಯೋತಿ (Griha Jyoti) ಯೋಜನೆಯು ಕಾಂಗ್ರೆಸ್ (Congress) ಪಕ್ಷದ ಚುನಾವಣಾ ಪೂರ್ವ ಭರವಸೆಗಳಲ್ಲಿ ಒಂದಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿಗಳನ್ನು ಮೊದಳ ಸಂಪುಟದಲ್ಲೇ ಈಡೇರಿಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಅದರಂತೆಯೇ ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಯಾದ ಶಕ್ತಿ ಯೋಜನೆಯ ಗ್ಯಾರಂಟಿಯನ್ನು ಸರ್ಕಾರ ಜಾರಿಗೆ ತಂದಿದೆ.
ಭಾರೀ ಮಳೆ ಅಲರ್ಟ್: ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಇದೀಗ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಹೊರಟಿದ್ದು, ನಿನ್ನೆಯಿಂದ ಈ ಯೋಜನೆಗೆ ನೋಂದಣಿಯನ್ನ ಕೂಡ ಆರಂಭಿಸಿದೆ. ಈ ಹಣದುಬ್ಬರದ ಯುಗದಲ್ಲಿ ಕರ್ನಾಟಕದ ಮನೆಗಳಿಗೆ ಬೆಂಬಲ ನೀಡುವುದು ಕರ್ನಾಟಕ ಗೃಹ ಜ್ಯೋತಿ ಯೋಜನೆಯನ್ನು ಪ್ರಾರಂಭಿಸುವ ಹಿಂದಿನ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಲ್ಲಿ ಪ್ರತಿ ಮನೆಗೆ 200 ಯುನಿಟ್ (200 Unit) ವರೆಗೆ ಉಚಿತ ವಿದ್ಯುತ್ ಒದಗಿಸಲಾಗುವುದು.
ಗೃಹ ಜ್ಯೋತಿ ಯೋಜನೆಯಡಿಯಲ್ಲಿ ತಿಂಗಳಿಗೆ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳು ಯಾವುದೇ ವಿದ್ಯುತ್ ಶುಲ್ಕವನ್ನು ಪಾವತಿಸುವುದಿಲ್ಲ. ಇದು ಅವರು ಇಷ್ಟು ದಿನ ಉಪಯೋಗಿಸಿದ ಮಾಸಿಕ ವಿದ್ಯುತ್‌ನ ಮೇಲೆ ಅವಲಂಬಿತವಾಗಿದ್ದು ಅದರ ಮೇಲೆ ಶೇ 10 ರಷ್ಟು ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಗೃಹ ವಿದ್ಯುತ್ ಸಂಪರ್ಕ ಹೊಂದಿರುವ ಕರ್ನಾಟಕದ ಖಾಯಂ ನಿವಾಸಿಗಳು ಕರ್ನಾಟಕ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಯಾವುದೇ ಕುಟುಂಬವು ತಿಂಗಳಿಗೆ 200 ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಬಳಸುತ್ತಿದ್ದರೆ ಆ ಕುಟುಂಬಗಳು ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿರುವುದಿಲ್ಲ. ಅಷ್ಟೇ ಅಲ್ಲದೆ ಅವರ ಹೆಸರಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಹೊಂದಿದ್ದರೆ ಅಂತಹ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುವುದಿಲ್ಲ.ಬಾಡಿಗೆದಾರ ನಿವಾಸಿಗಳು ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ಗೆ ಅರ್ಹರಾಗಿರುತ್ತಾರೆ.
Free Smartphones : ಮಹಿಳೆಯರಿಗೆ ಸ್ಮಾರ್ಟ್ ಫೋನ್ ಖರೀದಿಗೆ ಹಣ
ಅವಶ್ಯಕ ದಾಖಲೆಗಳು
ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆಯಲು ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ:-
ರಾಜ್ಯದಲ್ಲಿ ವಾಸಿಸುತ್ತಿರುವ ಕುರಿತು ನಿವಾಸ ಪುರಾವೆ/ ವಿಳಾಸ ದೃಢೀಕರಣ ಪತ್ರ
ವಿದ್ಯುತ್ ಸಂಪರ್ಕ ಸಂಖ್ಯೆ.
ವೋಟರ್ ಐಡಿ.
ಆಧಾರ್ ಕಾರ್ಡ್.
ಬಾಡಿಗೆ / ಗುತ್ತಿಗೆ ಒಪ್ಪಂದ.
ಮೊಬೈಲ್ ನಂಬರ.