News

“ಕೃಷಿ ಮತ್ತು ಮಣ್ಣಿನ ಸಂಬಂಧ ದೈವಿಕವಾದದ್ದು”-  ಪಶ್ಚಿಮ ಬಂಗಾಳ ರಾಜ್ಯಪಾಲ C.V. ಆನಂದ್‌ ಬೋಸ್‌ ಅಭಿಮತ

22 May, 2023 5:39 PM IST By: Maltesh
West Bengal Governor C.V. Ananda Bose at KJ Chaupal

ಕೃಷಿ ಮತ್ತು ಮಣ್ಣಿನ ನಡುವಿನ ಸಂಬಂಧವು ದೈವಿಕವಾಗಿದೆ. ಭಗವಂತ ಶಿವ, ಬ್ರಹ್ಮ, ವಿಷ್ಣುವಿನ ಆಶೀರ್ವಾದ ಇಂದು ನಮ್ಮ ಕೃಷಿ ಭೂಮಿಯ ಮೇಲಿದೆ. ಬೇಸಾಯವು ದೈವಿಕ ಮೂಲವಾಗಿದ್ದು ಕೋವಿಡ್‌ ನಂತಹ ಸಾಂಕ್ರಾಮಿಕ ಸಮಯದಲ್ಲಿ ಈಡೀ ದೇಶಕ್ಕೆ ಭಾರತ ಆಹಾರ ಪೂರೈಕೆದಾರನಾಗಿತ್ತು ಇದು ನಮ್ಮ ಹೆಮ್ಮೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಡಾ.C.V. ಆನಂದ್‌ ಬೋಸ್‌ ಅವರು ಅಭಿಪ್ರಾಯಪಟ್ಟರು.

ಕೃಷಿ ಜಾಗರಣ ಪ್ರಸ್ತುತಿ ಕೆಜೆ ಚೌಪಾಲ್‌ನಲ್ಲಿ ಇಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಕೃಷಿ ಜಾಗರಣದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಮುಂದುವರೆದು ಮಾತನಾಡಿದ ಅವರು " ನಾನು ಕೂಡ ಕೇರಳದಿಂದ ಬಂದಿದ್ದೇನೆ, ನನ್ನೂರು ದೇವರ ನಾಡು ಎಂದು ಖ್ಯಾತಿ ಗಳಿಸಿದೆ. ಸ್ವಾಮಿ ಪರಶುರಾಮನ ಕೃಪಾಶಿರ್ವಾದದಿಂದ ಈ ನಾಡು ಉದಯಿಸಿದೆ. ಪರುಶುರಾಮನು ಕೃಷಿ ಕುರಿತು ಪುಸ್ತಕ ರಚಿಸಿದ್ದು ಇದರಲ್ಲಿ ಕೃಷಿ ಹಾಗೂ ಬಿತ್ತನೆ ಕುರಿತು ಆಗಿನ ಕಾಲದಲ್ಲಿಯೇ ಉಲ್ಲೇಖಿಸಿದ್ದಾನೆ ಎಂದು ತಿಳಿಸಿದರು.

ಸಮೃದ್ಧಿಯ, ಸಂಪತ್ತಿನ ಹೆಸರಲ್ಲಿ ಮನುಕುಲ ಇಂದು ಕೃಷಿಯನ್ನು ಕಡೆಗಣಿಸುತ್ತಿದ್ದಾನೆ. ಹಾಗೂ ಇದನ್ನು ಸಮರ್ಥಿಸಿಕೊಳ್ಳುವ ಅಧಿಕಾರವನ್ನು ಆತ ಕಳೆದುಕೊಂಡಿದ್ದಾನೆ.  ಇದನ್ನು ಸರಿಪಡಿಸುವ ನಿಟ್ಟಿನಿಂದಲೇ ಸುಸ್ಥಿರ ಕೃಷು ಇಂದು ಮುನ್ನೆಲೆಗೆ ಬಂದಿದೆ. ದೇಶದಲ್ಲಿಯ ಹಸಿರು ಕ್ರಾಂತಿ ಸಾವಯವ ಕೃಷಿಯನ್ನು ಆಧರಿಸಿತ್ತು, ಜೊತೆಗೆ  ವಿಜ್ಞಾನ ಮತ್ತು ತಂತ್ರಜ್ಞಾನ, ನೈಸರ್ಗಿಕ  ಕೃಷಿಯೊಂದಿಗೆ ಮಿಶ್ರಣವಾಗಿದೆ ಎಂದರು. 

ಸಾಂಕ್ರಾಮಿಕ ಸಮಯದಲ್ಲಿ ರೈತರು ಆಹಾರದ ಪೂರೈಕೆಯಲ್ಲಿ ಮೊದಲ ಸಾಲಿನಲ್ಲಿ ನಿಂತರು ಏಕೆಂದರೆ ಬೇಸಾಯವು ದೈವಿಕ ಮೂಲವಾಗಿದೆ. ಕೃಷಿ ನಿಮಗೆ ಬೇಕಾದುದನ್ನು ಒದಗಿಸುತ್ತದೆ. ನಮಗೆ ಪ್ರಕೃತಿ ಹಾಲಿನಿಂದ ಹಿಡಿದು ಎಲ್ಲವನ್ನು ಧಾರೆ ಎರೆಯುತ್ತದೆ ಆದ್ದರಿಂದಲೇ ನಮ್ಮ ಪೂರ್ವಜರು ಪ್ರಕೃತಿ ಶ್ರೇಷ್ಠ ಶಿಕ್ಷಕ ಎಂದಿದ್ದಾರೆ. ಪ್ರಕೃತಿ ಎಂದಿಗೂ ದ್ರೋಹ ಮಾಡುವುದಿಲ್ಲ ಪ್ರತಿ ರೈತನು ಕೃಷಿ ಯೋಧನಿದ್ದಂತೆ ಎಂದು ಅವರು ಮಾತನಾಡಿದರು.

ಆ ಬಳಿಕ ಮಾತನಾಡಿದ ಕೃಷಿ ಜಾಗರಣ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕರಾದ M C ಡೊಮಿನಿಕ್‌ ಅವರು, ಅನೇಕ ಜನರು ಇಲ್ಲಿಗೆ ಬರುತ್ತಾರೆ ಆದರೆ ಇಂದು ಜ್ಞಾನವು ನಮ್ಮಲ್ಲಿಗೆ ಇಂದು ಬಂದಿದೆ. ನಾವು ಶ್ರೀ ಬೋಸ್ ಅವರೊಂದಿಗೆ ಕುಳಿತರೆ ಎಲ್ಲವನ್ನು ಮರೆತುಬಿಡುತ್ತೇವೆ. ಕೃಷಿ ಲೋಕದಲ್ಲಿ ಅವರು ಕೆಲಸ ಮಾಡಿದ ರೀತಿ ವಿಭಿನ್ನವಾದದ್ದು, ಅವರು ನಡೆದಾಡುವ ವಿಕಿಪೀಡಿಯಾ ಅಂದ್ರೆ ತಪ್ಪಾಗಲಾರದು ಎಂದು ಅವರು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಕೃಷಿ ಜಾಗರಣದ ನಿರ್ದೇಶಕಿ ಶೈನಿ ಡೊಮಿನಿಕ್‌, ಕೃಷಿ ಜಾಗರಣ ಸಿಒಒ ಪಿ ಕೆ ಪಂತ್‌,  ಸಾರ್ವಜನಿಕ ವ್ಯವಹಾರಗಳ ಅಧ್ಯಕ್ಷ ಪಿ ಎಸ್‌ ಸೈನಿ, ಕಂಟೆಂಟ್‌ ವಿಭಾಗದ ಅಧ್ಯಕ್ಷ ಸಂಜಯ್‌ ಕುಮಾರ್‌, ಸೋಷಿಯಲ್‌ ಮೀಡಿಯಾ ಜಿಎಂ ನಿಶಾಂತ್‌ ತಾಕ್‌, ಹಾಗೂ ಕಂಟೆಂಟ್‌ ಮ್ಯಾನೇಜರ್‌ ಪಂಕಜ್‌ ಖನ್ನಾ ಸೇರಿದಂತೆ ಕೃಷಿ ಜಾಗರಣದ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.