News

ಇಂದಿನ ರಾಜ್ಯದ ಹವಾಮಾನ ವರದಿ

20 January, 2021 3:47 PM IST By:

ಇಂದಿನ ಅಂದರೆ 20-01-2021ರ ಹವಾಮಾನ ವರದಿಯನ್ನು ನಾವು ನೋಡಿದಾಗ ರಾಜ್ಯದಲ್ಲಿ ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ.ಎಂದಿನಂತೆ ಬೆಳಗಿನ ಹೊತ್ತಿನಲ್ಲಿ ಚಳಿಯ ವಾತಾವರಣ ಇರಲಿದೆ. ನಮ್ಮ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ನಾವು ನೋಡಿದಾಗ ಬೆಂಗಳೂರಿನಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ  29 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನ್ನು ನಮ್ಮ ಇಡೀ ರಾಜ್ಯದಲ್ಲಿ ನಾವು ಗಮನಿಸಿದಾಗ ಕಾರವಾರ ಸಾಗು ಬಾಗಲಕೋಟೆಯಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಹಾಗೂ ವಿಜಯಪುರದಲ್ಲಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ಅನ್ನು ನಾವಿಂದು ಕಾಣಬಹುದು.

 ಹವಾಮಾನ ವರದಿಯ ಮುಖ್ಯ ಉದ್ದೇಶವೆಂದರೆ ರೈತರು ಇಂದಿನ ದಿನಗಳಲ್ಲಿ ಹಲವಾರು ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ, ಅದರಲ್ಲಿ ಬಿತ್ತುವುದು, ಉಳುವುದು, ಕೊಯ್ಲು ಮಾಡುವುದು, ಮಾರಾಟಕ್ಕಾಗಿ ಸಾಗಣೆ ಮಾಡುವುದು ಹೀಗೆ ಹಲವಾರು ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ. ಹಾಗಾಗಿ ಒಮ್ಮೆ ಹವಾಮಾನ ವರದಿಯನ್ನು ನೋಡಿದರೆ ಅವರಿಗೆ ತುಂಬಾ ಅನುಕೂಲವಾಗಲಿದೆ.

ಉದಾಹರಣೆಗೆ ಇಂದು ಮಾರಲು ಬೇರೆ ಸ್ಥಳಕ್ಕೆ ನಾವು ಕೃಷಿ ವಸ್ತುಗಳನ್ನು ಸಾಗಿಸುತ್ತಿದ್ದು, ಆ ದಿನ ಮಳೆಯಾದರೆ ನಮಗೆ ಒಳ್ಳೆಯ ಬೆಲೆ ಸಿಗುವುದಿಲ್ಲ, ಹೀಗಾಗಿ ರೈತರು ಹವಾಮಾನ ವರದಿಯನ್ನು ಪತ್ರಿಕೆಗಳಲ್ಲಿ ಹಾಗೂ ಆನ್ಲೈನ್ನಲ್ಲಿ ನೋಡುತ್ತಾ ತಮ್ಮ ದಿನ ಚಟುವಟಿಕೆಗಳನ್ನು ಮಾಡಿದರೆ ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ.