News

Weather Report | ಕರ್ನಾಟಕದಲ್ಲಿ ಮುಂದಿನ ಎರಡು ದಿನ ಹವಾಮಾನ ಹೇಗಿರಲಿದೆ ನೋಡಿ!

15 January, 2024 4:59 PM IST By: Hitesh
ಎರಡು ದಿನದ ಹವಾಮಾನ ವರದಿ ಹೇಗಿದೆ ನೋಡಿ

ಎಲ್ಲ ರೈತ ಬಾಂಧವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಷಯಗಳು. ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ಗೆ ಸ್ವಾಗತ.

ಕಂಬಳ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಸರ್ಕಾರ ಸಿದ್ಧವಿದ್ದು, ಕೋಟಿ ರೂಪಾಯಿ ಅನುದಾನ ನೀಡಲಿದೆ ಎಂದು ಸರ್ಕಾರ ತಿಳಿಸಿದೆ.

ಗೋಧಿ, ಅಕ್ಕಿ, ಸಕ್ಕರೆ & ಈರುಳ್ಳಿ ಮೇಲಿನ ರಫ್ತು ನಿರ್ಬಂಧದ ಬಗ್ಗೆ ಕೇಂದ್ರ ಸರ್ಕಾರ ಶಾಕಿಂಗ್‌ ಮಾಹಿತಿ ನೀಡಿದೆ.

ಈ ಎಲ್ಲ ಸುದ್ದಿಗಳನ್ನು ನೋಡೋಣ ಮೊದಲಿಗೆ ಮುಖ್ಯಾಂಶಗಳು

1. ಕಂಬಳ ಉತ್ತೇಜನಕ್ಕೆ ಕೋಟಿ ರೂ. ಅನುದಾನ !

2. ಮೀನುಗಾರರಿಂದ ಅರ್ಜಿ ಆಹ್ವಾನ

3. ಸಿರಿಧಾನ್ಯ ಉತ್ತೇಜನದಿಂದ 3 ಕೋಟಿ ರೈತರಿಗೆ ಲಾಭ: ಮೋದಿ

4. ಗೋಧಿ, ಅಕ್ಕಿ, ಸಕ್ಕರೆ & ಈರುಳ್ಳಿ ಮೇಲಿನ ರಫ್ತು ನಿರ್ಬಂಧ ಇಲ್ಲ: ಕೇಂದ್ರದ ಸ್ಪಷ್ಟನೆ

5. ಶ್ರಮಿಕ – ಕೃಷಿಕ ಬಾಳಲ್ಲಿ ಸುಖ- ಶಾಂತಿ ಮೂಡಲಿ: ಸಿ.ಎಂ

6. ರಾಜ್ಯದ ವಿವಿಧೆಡೆ ಮುಂದುವರಿದ ಒಣಹವೆ ಸುದ್ದಿಗಳ ವಿವರ ಈ ರೀತಿ ಇದೆ.

1. ಕರ್ನಾಟಕದಲ್ಲಿ ಕಂಬಳವನ್ನು ಉತ್ತೇಜನ ಮಾಡುವುದಕ್ಕೆ ಸರ್ಕಾರ ಎಲ್ಲ ರೀತಿಯ ನೆರವನ್ನೂ ನೀಡಲು ಸಿದ್ಧವಿದೆ.

ಕಂಬಳ ಉತ್ತೇಜನಕ್ಕೆ ಬದ್ಧವಾಗಿದ್ದು ತುಳು ನಾಡಿನ ಕಲೆಯನ್ನು ಬೆಳೆಸಲು ಒಂದು

ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ

ಇಲಾಖೆ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.

----------------------

ಸಿರಿಧಾನ್ಯದಿಂದ ಮೂರು ಕೋಟಿ ರೈತರಿಗೆ ಲಾಭ: ಮೋದಿ 

2. ಮತ್ಸಾಯಾಶ್ರಯ ಯೋಜನೆಯಡಿ ವಸತಿ ವ್ಯವಸ್ಥೆ ಇಲ್ಲದ ಮೀನುಗಾರರಿಗೆ ವಸತಿ ಕಲ್ಪಿಸುವುದು   

ಆರ್ಥಿಕವಾಗಿ ಹಿಂದುಳಿದ, ಹುಟ್ಟಿನಿಂದ ಅಥವಾ ವೃತ್ತಿಯಲ್ಲಿ ಮೀನುಗಾರರಾಗಿರುವ, ವಿವಾಹಿತ, ವಿಧವೆ,

ವಿಧುರ ಹಾಗೂ ಮೀನುಗಾರ ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಸಂಬಂಧ ಗೊಂದಲಗಳಿದ್ದರೆ ಮೀನುಗಾರಿಕೆ ಕಚೇರಿ ಸಂಪರ್ಕಿಸಬಹುದು ಎಂದು  ಇಲಾಖೆ ತಿಳಿಸಿದೆ.
-----------------------
3. ಸಿರಿಧಾನ್ಯ ಉತ್ಪಾದನೆಗೆ ಕೇಂದ್ರ ಸರ್ಕಾರವು ಪ್ರೋತ್ಸಾಹ ನೀಡುತ್ತಿದೆ. ಭಾರತದಲ್ಲಿ ಮೂರು ಕೋಟಿಗೂ ಹೆಚ್ಚು

ರೈತರು ಶ್ರೀ ಅನ್ನ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಸಿರಿಧಾನ್ಯಗಳ ಬಗ್ಗೆ ಪ್ರಚಾರ ಮಾಡಿದರೆ, ಮೂರು ಕೋಟಿ ರೈತರಿಗೆ ನೇರವಾಗಿ

ಲಾಭವಾಗಲಿದೆ ಎಂದಿದ್ದಾರೆ. ಅಲ್ಲದೇ ದೇಶದಲ್ಲಿ ಸಿರಿಧಾನ್ಯಗಳಿಗೆ ಉತ್ತೇಜನ ನೀಡುತ್ತಿರುವುದು ಸಣ್ಣ ರೈತರಿಗೆ ಮತ್ತು

ಯುವ ಉದ್ಯಮಿಗಳಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
-----------------------

4. ಗೋಧಿ, ಅಕ್ಕಿ, ಸಕ್ಕರೆ ಹಾಗೂ ಈರುಳ್ಳಿ ಮೇಲಿನ ರಫ್ತುಗಳ ಮೇಲೆ ಕೇಂದ್ರ ಸರ್ಕಾರವು ನಿರ್ಬಂಧ ವಿಧಿಸಿದೆ.

ಇದೀಗ ಗೋಧಿ, ಅಕ್ಕಿ, ಸಕ್ಕರೆ ಹಾಗೂ ಈರುಳ್ಳಿ ಮೇಲಿನ ರಫ್ತುಗಳ

ನಿರ್ಬಂಧಗಳನ್ನು ತೆಗೆದುಹಾಕುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ

ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಗೋಧಿ ಮತ್ತು ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಅಗತ್ಯವಿಲ್ಲ ಎಂದಿದ್ದಾರೆ.

ಇನ್ನು ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಸರ್ಕಾರ ಅಗತ್ಯ ವಸ್ತುಗಳ ರಫ್ತಿನ ಮೇಲೆ ನಿಷೇಧ ಹೇರಿದೆ.   

---------------------- 

ಮುಂದಿನ ಎರಡು ದಿನಗಳ ಕಾಲ ಹವಾಮಾನ ವರದಿ ಹೇಗಿದೆ ನೋಡಿ 

5. ಹಲವು ಗಣ್ಯರು ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ.

ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿ ಶಾಂತಿ,‌ ಸೌಹಾರ್ದತೆ, ಸಮೃದ್ಧಿಯ ಕಡೆಗೆ ನಾಡನ್ನು ಮುನ್ನಡೆಸಲಿ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಕೋರಿದ್ದಾರೆ. ನಾಡು ಸಮೃದ್ಧ ಮಳೆ, ಬೆಳೆ ಕಂಡು ಕೃಷಿಕ - ಶ್ರಮಿಕರ ಬದುಕಿನಲ್ಲಿ

ಸುಖ-ಶಾಂತಿಯ ಫಸಲು ಹುಲುಸಾಗಿ ಬೆಳೆಯಲಿ, ಅವರ ಬಾಳು ಬಂಗಾರವಾಗಲಿ. ನಾಡ ಬಾಂಧವರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.
----------------------
6. ಕರ್ನಾಟಕದ ಬಹುತೇಕ ಭಾಗದಲ್ಲಿ ಒಣಹವೆ ಮುಂದುವರಿದಿದೆ. ವಿಜಯಪುರದಲ್ಲಿ ಅತೀ ಹೆಚ್ಚುಚಳಿ ವಾತಾವರಣ ದಾಖಲಾಗಿದೆ.

ಭಾನುವಾರ ವಿಜಯಪುರದಲ್ಲಿ 14 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿರುವುದು ವರದಿ ಆಗಿದೆ. ಇನ್ನು ಬೆಂಗಳೂರಿನಲ್ಲಿ

ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗಿನ ಜಾವ ದಟ್ಟಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ ಎಂದು ಭಾರತೀಯ

ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಇಂದು ಮತ್ತು ನಾಳೆ ಇದೇ

ವಾತಾವರಣ ಬಹುತೇಕ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
---------------------- 

ಗ್ಯಾರಂಟಿ ಯೋಜನೆಗಳಿಂದ 1.50 ಕೋಟಿ ಜನರಿಗೆ ಲಾಭ

7. ರಾಜ್ಯದ ಹೆಮ್ಮೆಯ ಮೈಸೂರು ಸ್ಯಾಂಡಲ್‌ ಸೋಪಿನ ಹಿರಿಮೆ ಹೆಚ್ಚಾಗುವುದರ ನಡುವೆಯೇ ಇದೀಗ ಇದರ ನಕಲಿ

ಮೈಸೂರು ಸ್ಯಾಂಡಲ್‌ ಸೋಪು ತಯಾರಿಕೆಯೂ ಹೆಚ್ಚಾಗಿದೆ. ಹೈದರಾಬಾದ್ ಮಾರುಕಟ್ಟೆಗೆ ನಕಲಿ ಮೈಸೂರು

ಸ್ಯಾಂಡಲ್ ಸೋಪ್ ಪೂರೈಕೆಯಾಗುತ್ತಿದೆ ಎಂದು ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಕ್ರಮ ವಹಿಸಲಾಗಿದೆ ಎಂದು

ಸಚಿವ ಎಂ.ಬಿ ಪಾಟೀಲ ಅವರು ತಿಳಿಸಿದ್ದಾರೆ. ಸಿಕಂದರಾಬಾದಿನಲ್ಲಿರುವ ನಮ್ಮ ಸಂಸ್ಥೆಯ ಅಧಿಕೃತ ಮಾರಾಟದ

ಸಿಬ್ಬಂದಿ, ನಕಲಿಗಳ ಜಾಲವನ್ನು ಬೇಧಿಸಲು ತಂತ್ರ ರೂಪಿಸಿದರು. ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ

2 ಕೋಟಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
----------------------
8. ಗ್ಯಾರಂಟಿ ಯೋಜನೆಗಳಿಂದ 1.50 ಕೋಟಿ ಕುಟುಂಬಗಳಿಗೆ ನೆರವಾಗಿದೆ ಎಂದು ಸರ್ಕಾರ ಹೇಳಿದೆ.

ಯುರೋಪ್‌ ದೇಶಗಳಲ್ಲಿನ ಸಾರ್ವತ್ರಿಕ ಮೂಲ ಆದಾಯ ಎಂಬ ತತ್ವವನ್ನು ರಾಜ್ಯದಲ್ಲೂ ಅಳವಡಿಸಿ ಅನುಸರಿಸಿದ್ದೇವೆ

ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಕರ್ನಾಟಕದಲ್ಲಿ ಜಾರಿ ಮಾಡಿದ ಐದು ಗ್ಯಾರಂಟಿ

ಯೋಜನೆಗಳಿಂದ 1.50 ಕೋಟಿ ಕುಟುಂಬಗಳು ತಿಂಗಳಿಗೆ 5 ಸಾವಿರ ರೂಪಾಯಿಯಿಂದ

6 ಸಾವಿರ ರೂಪಾಯಿ ವರೆಗೆ ಆರ್ಥಿಕ ನೆರವನ್ನು ಪಡೆಯುತ್ತಿವೆ ಎಂದಿದ್ದಾರೆ.
----------------------