ಮೂಕಬಸರಿಕಟ್ಟಿಯನ್ನು ಕಂದಾಯ ಗ್ರಾಮ ಮಾಡಬೇಕೆನ್ನುವ ಬೇಡಿಕೆ ಇದೆ. ಚುನಾವಣೆ ಮುಗಿದ ನಂತರ ಕಂದಾಯ ಗ್ರಾಮ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಿಸಾನ್ ಸಮ್ಮಾನ್ ಯೋಜನೆ 32 ಸಾವಿರ ರೈತರಿಗೆ ತಲುಪಿದೆ. ವೃದ್ಧಾಪ್ಯ ವೇತನ, ವಿಧವಾ ಮಾಸಾಶನ, ಅಂಗವಿಕಲರ ಮಾಸಾಶನ ಹೆಚ್ಚಳ ಮಾಡಿದ್ದೇನೆ.
ನಾನು ಬಡವರ, ರೈತರ ಹಾಗೂ ಕಾರ್ಮಿಕರ ಪರ ಹಲವಾರು ಕಾರ್ಯಕ್ರಮಗಳನ್ನು ನಿಮ್ಮ ಬಸವರಾಜ ಬೊಮ್ಮಾಯಿ ಮಾಡಿದ್ದೇನೆ.
ಮನೆ ಮನೆಗೆ ಗಂಗೆ ಯೋಜನೆ ಅಡಿಯಲ್ಲಿ ನನ್ನ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಕೊಡುತ್ತಿದ್ದೇನೆ. 438 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾದಿಂದ ನೀರು ತರಲಾಗುವುದು.
ಬೆಳೆ ಹಾನಿ ಡಬಲ್ ಕೊಟ್ಟಿದ್ದೀವಿ ಮತ್ತು ಪ್ರವಾಹದಿಂದ ಕುಸಿದಿದ್ದ ಮನೆಗಳ ಪರಿಹಾರವನ್ನು ಹಲವು ಪಟ್ಟ ಏರಿಕೆ ಮಾಡಿದ್ದೇವೆ.
ನೀವು ಕೊಟ್ಟ ಮತದ ಶಕ್ತಿಯಿಂದ ನಾನು ಸಿಎಂ ಆಗಿದ್ದೀನಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬರದ ರೀತಿಯಲ್ಲಿ ಶಿಗ್ಗಾಂವಿ ಸವಣೂರು ತಾಲ್ಲೂಕಿನ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀನಿ.
ನನಗೆ ಮತ್ತೊಮ್ಮೆ ಆಶೀರ್ವದಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ಮತದಾರರಲ್ಲಿ ಮನವಿ ಮಾಡಿಕೊಂಡರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಮೂಕಬಸರಿಕಟ್ಟಿ, ಬಾಡ, ನಾರಾಯಣಪುರ, ಇಬ್ರಾಹಿಂಪುರ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಇದೊಂದು ಮಹತ್ಬದ ಚುನಾವಣೆ. ಬರುವ ಐದು ವರ್ಷ ರಾಜ್ಯದ ಭವಿಷ್ಯ ನಿರ್ಧರಿಸುವ ಚುನಾವಣೆ ಇದಾಗಿದೆ. ಈ ಚುನಾವಣೆಯಲ್ಲಿ ಒಂದೆಡೆ ಬಿಜೆಪಿಯ ಅಭಿವೃದ್ಧಿ, ಕರ್ನಾಟಕದ ಕಲ್ಯಾಣ.
ಮತ್ತೊಂದೆಡೆ ಅಭಿವೃದ್ಧಿ ಇಲ್ಲದೇ, ಸುಳ್ಳು ಆರೋಪದಲ್ಲಿ ತೊಡಗಿ ಸಮಾಜ ಒಡೆಯುವ ಮಾಡುವ ಕಾಂಗ್ರೆಸ್ ಇದೆ. 2018 ರಲ್ಲಿ ನಿಮ್ಮ ಆಶೀರ್ವಾದದಿಂದ ಶಾಸಕನಾಗಿ, ಮಂತ್ರಿ ಮಾಡಿ, ಸಿಎಂ ಆದೆ. ನಿಮ್ಮ ಮತಕ್ಕೆ ಅಷ್ಟು ಶಕ್ತಿ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಪ್ರಧಾನಿ ಮೆಚ್ಚಿಕೊಂಡ ವಿದ್ಯಾನಿಧಿ
ನಿಮ್ಮಿಂದ ನಾನು ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು. ನಾನು ಸಿಎಂ ಆದ ಕೂಡಲೇ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ.
ನಮ್ಮ ಕ್ಷೇತ್ರದಲ್ಲಿ 8 ಸಾವಿರ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಿ ದೊಡ್ಡ ಹುದ್ದೆ ಅಲಂಕರಿಸಿದರೆ ಅವರ ಜೀವನ ಮಟ್ಟ ಸುಧಾರಣೆಯಾಗುತ್ತದೆ.
ಇದು ಬೇರೆ ಯಾವ ರಾಜ್ಯದಲ್ಲಿ ಇಲ್ಲ. ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೂ ಮೆಚ್ಚಿಕೊಂಡಿದ್ದಾರೆ. ಈಗ ರೈತ ಕೂಲಿಕಾರು, ವೃತ್ತಿಪರ ಕಾರ್ಮಿಕರ ಮಕ್ಕಳಿಗೂ ಇದನ್ನು ವಿಸ್ತರಣೆ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.