News

Mariano Beheran ಭಾರತದಿಂದ ನಾವು ಕಲಿಯುವುದು ಸಾಕಷ್ಟಿದೆ: ಅರ್ಜೆಂಟೀನಾದ ಕೃಷಿ ಪ್ರತಿನಿಧಿ ಮರಿಯಾನೋ ಬೆಹೆರಾನ್

12 October, 2023 4:32 PM IST By: Hitesh
We have a lot to learn from India: Argentina's agriculture representative Mariano Beheron

ನಾವು ಭಾರತದಿಂದ ಕಲಿಯುವುದು ಸಾಕಷ್ಟಿದೆ. ಇಲ್ಲಿನ ಕೃಷಿ ಪದ್ಧತಿಗಳಿಂದಲೂ ನಾವು ಕಲಿಯುವುದಿದೆ ಎಂದು ಅರ್ಜೆಂಟೀನಾದ ರಾಯಭಾರಿ ಕಚೇರಿಯ ಕೃಷಿ ಪ್ರತಿನಿಧಿ, (Agriculture Attache) ಮರಿಯಾನೋ ಬೆಹೆರಾನ್ (Mariano Beheran) ಅವರು ಹೇಳಿದರು.

ಕೃಷಿ ಜಾಗರಣದ ನವದೆಹಲಿಯ ಕೇಂದ್ರ ಕಚೇರಿಗೆ ಅವರು ಗುರುವಾರ ಭೇಟಿ ನೀಡಿ ಮಾತನಾಡಿದರು.

ಕೃಷಿ ಜಾಗರಣದ ಚೌಪಾಲ್‌ನಲ್ಲಿ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅರ್ಜೆಂಟೀನಾದಲ್ಲಿ ಕೃಷಿ ಸಹ ಪ್ರಧಾನವಾಗಿದೆ. ನಾವು 8ನೇ ಅತೀ ದೊಡ್ಡ ರಾಷ್ಟ್ರವಾಗಿದ್ದು, ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಯಶಸ್ಸು ಸಾಧಿಸಿದ್ದೇವೆ.

ಆದರೆ, ಇದೇ ಸಂದರ್ಭದಲ್ಲಿ ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳಲ್ಲಿ ಅಳವಡಿಸಿಕೊಂಡಿರುವ ಕೃಷಿ ಪದ್ಧತಿ

ಹಾಗೂ ವಿವಿಧ ತಳಿಗಳನ್ನು ಬೆಳೆಯುವ ವಿಧಾನವನ್ನು ನಾವು ತಿಳಿದುಕೊಳ್ಳಬೇಕಿದೆ. 

Mariano Beheron

ಇನ್ನು ಇತ್ತೀಚಿನ ವರ್ಷಗಳಲ್ಲಿ ಅಥವಾ ಕಳೆದ ಒಂದು ದಶಕದ ಅವಧಿಯಲ್ಲಿ ಭಾರತದ ಕೃಷಿ ವಿಧಾನದಲ್ಲಿಯೂ ಸಾಕಷ್ಟು ಬದಲಾವಣೆಗಳು ಆಗಿವೆ.

ಇಲ್ಲಿನ ಕೃಷಿ ಪದ್ಧತಿಗಳು ಅಭಿವೃದ್ಧಿ ಆಗಿವೆ.

ಇಲ್ಲಿ ಆಗಿರುವ ಬದಲಾವಣೆಗಳು ಎಲ್ಲ ದೇಶಗಳಿಗೂ ಮಾದರಿಯಾಗಿವೆ ಎಂದು ಹೇಳಿದರು. 

ಎಂ.ಎಸ್‌ ಸ್ವಾಮಿನಾಥನ್‌ ಇನ್ಸ್‌ಟಿಟ್ಯೂಟ್‌ಗೆ ಮೆಚ್ಚುಗೆ

ಹಸಿರು ಕ್ರಾಂತಿಯ ಹರಿಕಾರ ಹಾಗೂ ದಿವಂಗತ ವಿಜ್ಞಾನಿ ಎಂ.ಎಸ್‌ ಸ್ವಾಮಿನಾಥನ್‌ ಅವರು ತಮಿಳುನಾಡಿನ ಚೆನ್ನೈನಲ್ಲಿ

ಪ್ರತಿಷ್ಠಾಪಿಸಿರುವ ಎಂ.ಎಸ್‌ ಸ್ವಾಮಿನಾಥನ್‌ ಸಂಶೋಧನಾ ಸಂಸ್ಥೆಯ ಬಗ್ಗೆ ಮರಿಯಾನೋ ಬೆಹೆರಾನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.  

ಭಾರತದ ಕೃಷಿಗೆ ಎಂ.ಎಸ್‌ ಸ್ವಾಮಿನಾಥನ್‌ ಅವರ ಕೊಡುಗೆ ಅಪಾರವಾಗಿದೆ. ಎಂ.ಎಸ್‌ ಸ್ವಾಮಿನಾಥನ್‌ ಸಂಶೋಧನಾ ಸಂಸ್ಥೆಯಲ್ಲಿ ಕೃಷಿಗೆ

ಸಂಬಂಧಿಸಿದ ಹಲವು ಉಪಯುಕ್ತ ಮಾಹಿತಿಗಳು ಇವೆ. ಅಷ್ಟೇ ಅಲ್ಲದೇ ರೈತರಿಗೆ ಉಪಯುಕ್ತವಾಗುವ ಮಾಹಿತಿಯನ್ನೂ ಒಳಗೊಂಡಿದೆ.

ಈ ರೀತಿಯ ಸಂಸ್ಥೆ ಅರ್ಜೆಂಟೀನಾದಲ್ಲಿ ಇಲ್ಲ ಎಂದರು. ಅಲ್ಲದೇ ನಾನು ತಮಿಳುನಾಡಿನ ಚೆನ್ನೈನಲ್ಲಿ ಪ್ರತಿಷ್ಠಾಪಿಸಿರುವ ಎಂ.ಎಸ್‌ ಸ್ವಾಮಿನಾಥನ್‌

ಸಂಶೋಧನಾ ಸಂಸ್ಥೆಯಗೆ ಈಚಿನ ವರ್ಷಗಳಲ್ಲಿ ಭೇಟಿ ನೀಡಿದ್ದೆ. ಅಲ್ಲಿ ಇರುವ ವ್ಯವಸ್ಥೆ ನೋಡಿ ಸಂತೋಷವಾಯಿತು.

ಅಷ್ಟೇ ಅಲ್ಲ ನಾನು ತಮಿಳುನಾಡು ಸೇರಿದಂತೆ ಭಾರತದ ವಿವಿಧ ರೈತರು, ಕೃಷಿ ಸಂಶೋಧಕರೊಂದಿಗೆ ಚರ್ಚೆ ನಡೆಸಿದೆ.

ಇಲ್ಲಿನ ಕೃಷಿ ಪದ್ಧತಿ, ಕೃಷಿ ವಿಧಾನಗಳ ಬಗ್ಗೆ ಮಾತನಾಡಿದೆ. ಈ ಎಲ್ಲ ಅಂಶಗಳೂ ನನ್ನನ್ನು ಉತ್ತೇಜಿಸಿದವು.

ಇಲ್ಲಿಗೆ ಭೇಟಿ ನೀಡುವುದು ಎಂದರೆ ಹೆಚ್ಚು ಸಂತೋಷವನ್ನು ಉಂಟು ಮಾಡುವ ವಿಷಯ ಎಂದು ಹೇಳಿದರು.

ಮೆಸ್ಸಿ ಜರ್ಸಿ ಉಡುಗೋರೆ

ಮರಿಯಾನೋ ಬೆಹೆರಾನ್ ಅವರು ಗುರುವಾರ ಕೃಷಿ ಜಾಗರಣದ ಕಚೇರಿಗೆ ಭೇಟಿ ನೀಡಿ ಅವರ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಅರ್ಜೆಂಟೀನಾದ ಪುಟ್ಬಾಲ್‌ ಆಟಗಾರ ಲಿಯೊನೆಲ್‌  ಮೆಸ್ಸಿ ಅವರ ಹೆಸರು ಇರುವ ಜರ್ಸಿಯನ್ನು ಕೃಷಿ ಜಾಗರಣ

ಸಂಸ್ಥೆಯ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕರಾದ ಎಂ. ಸಿ. ಡೊಮಿನಿಕ್‌  ಹಾಗೂ ಸಂಸ್ಥೆಯ ನಿರ್ದೇಶಕಿ

ಶೈನಿ ಡೊಮಿನಿಕ್‌ ಅವರಿಗೆ ಮರಿಯಾನೋ ಬೆಹೆರಾನ್ ಅವರು ಉಡುಗೋರೆಯಾಗಿ ನೀಡಿದರು.

We have a lot to learn from India: Argentina's agriculture representative Mariano Beheran

ಯಾರು ಮರಿಯಾನೋ ಬೆಹೆರಾನ್ ?

ಮರಿಯಾನೋ ಬೆಹೆರಾನ್ ಅವರು ಮೂಲತಃ ಅರ್ಜೆಂಟೀನಾದವರು.

ಅಗ್ರಿಬಿಸಿನೆಸ್‌ ವೃತ್ತಿಪರರಾಗಿದ್ದು, ಕೃಷಿಯ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದಾರೆ.

ಅರ್ಜೆಂಟೀನಾದಲ್ಲಿ ಮತ್ತು ಇತರ ದೇಶಗಳಲ್ಲಿ  ಕೆಲವು ಮಾರುಕಟ್ಟೆಗಳಲ್ಲಿ ಉತ್ಪಾದನೆಯಾಗುವ

ಕೃಷಿ ಉತ್ಪನ್ನ ಹಾಗೂ ವ್ಯಾಪಾರದ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದಾರೆ.

ಅಲ್ಲದೇ ಸಾಂಪ್ರದಾಯಿಕ ಬೆಳೆಗಳ ವ್ಯಾಪಾರ, ಜಾನುವಾರು ತಳಿ ತಳಿಶಾಸ್ತ್ರ ಮತ್ತು ಡೈರಿ

ಹಾಲು ಉದ್ಯಮದಂತಹ ಕೃಷಿಗೆ ಸಂಬಂಧಿಸಿದಂತೆ ಹಲವಾರು ವಾಣಿಜ್ಯ ಚಟುವಟಿಕೆಗಳಲ್ಲಿ ಅನುಭವವನ್ನು ಹೊಂದಿದ್ದಾರೆ. 

We have a lot to learn from India: Argentina's agriculture representative Mariano Beheran