News

ನಮಗೆ ವಧು ಸಿಗ್ತಿಲ್ಲ; ಜಾಗೃತಿ ಮೂಡಿಸಿ: ತಹಶೀಲ್ದಾರ್‌ಗೆ ಯುವ ರೈತರ ಮನವಿ!

23 November, 2022 10:48 AM IST By: Hitesh
We cannot find bride; Create awareness: Young farmers appeal to Tehsildar!

ಮದುವೆಗೆ ವಧು ಸಿಗ್ತಿಲ್ಲ ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಇಲ್ಲೊಬ್ಬರು ಯುವ ರೈತ ತಹಶೀಲ್ದಾರ್‌ ಮುಂದೆ ಮನವಿ ಮಾಡಿದ್ದು, ಖುದ್ದು ತಹಶೀಲ್ದಾರ್‌ ತಬ್ಬಿಬ್ಬಾಗಿದ್ದಾರೆ.  

ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ

ರೈತ ಎನ್ನುವ ಕಾರಣಕ್ಕೆ ಹೆಣ್ಣು ಕೊಡುತ್ತಿಲ್ಲ. ಇದರಿಂದ ಹಲವರ ಮದುವೆ ಆಗುತ್ತಿಲ್ಲ ಎಂದು  ಯುವಕರು ತಹಶೀಲ್ದಾರ್‌ ಬಳಿ ತೆರಳಿ ನೋವು ತೋಡಿಕೊಂಡರುವ ಘಟನೆ ನಡೆದಿದೆ.

ಹುಬ್ಬಳ್ಳಿಯ ಕುಂದಗೋಳ ತಾಲ್ಲೂಕಿನ ಯುವ ರೈತರು ತಹಶೀಲ್ದಾರ್‌ ಅವರನ್ನು ಭೇಟಿ ಮಾಡಿ ನಮಗೆ ಯಾರೂ ಹೆಣ್ಣು ಕೊಡ್ತಿಲ್ಲ ದಯವಿಟ್ಟು

ನಮ್ಮ ಸಮಸ್ಯೆಗೆ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಸಮಸ್ಯೆಗೆ ಪರಿಹಾರ ನೀಡುವಂತೆ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವಂತೆ ಮನವಿ ಸಲ್ಲಿಸಿದ್ದಾರೆ.

ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ  

ರೈತರು ಎನ್ನುವ ಒಂದೇ ಕಾರಣಕ್ಕೆ ಯಾರು ಹೆಣ್ಣು ಕೊಡುತ್ತಿಲ್ಲ. ನಮಗೆ ಸರ್ಕಾರವೇ ಸಹಕಾರ ನೀಡಬೇಕು.

ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಯುವ ರೈತರ ತಂಡವೊಂದು ಕುಂದಗೋಳದ ತಹಶೀಲ್ದಾರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.  

Elephant Task Force: ರಾಜ್ಯದಲ್ಲಿ ಮನುಷ್ಯ- ಕಾಡಾನೆ ಸಂಘರ್ಷ ತಡೆಗೆ ನಾಲ್ಕು ಜಿಲ್ಲೆಗಳಲ್ಲಿ ಟಾಸ್ಕ್‌ ಪೋರ್ಸ್‌ ರಚನೆ 

ಹೊಸಳ್ಳಿ ಗ್ರಾಮದಲ್ಲಿ ತಹಶೀಲ್ದಾರ್‌ ಅಶೋಕ್ ಶಿಗ್ಗಾಂವಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಬಂದ ಯುವ ರೈತರ ತಂಡ, ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

 ತಹಶೀಲ್ದಾರ್‌ಗೆ ಮನವಿ ಪತ್ರ
ಮದುವೆ ವಿಳಂಬವಾಗುತ್ತಿದ್ದು, ಪರಿಹಾರ ನೀಡಬೇಕು ಎಂದು ಯುವ ರೈತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಅದರಲ್ಲಿ  “ನಾವು ರೈತ ಕುಟುಂಬದವರು. ನಮ್ಮ ಬೆಳವಣಿಗೆಗೆ ಕೃಷಿಯನ್ನೇ ಅವಲಂಬಿಸಿದ್ದೇವೆ. ದೇಶ ಕಾಯಲು ಸೈನಿಕ ಬೇಕು. ಅನ್ನ ನೀಡಲು ರೈತ ಬೇಕು.

ರೈತರ ಮಕ್ಕಳಿಗಾಗಿ ನಾವು ಸಹ ಕೃಷಿಯನ್ನು ಅವಲಂಬಿಸುತ್ತೇವೆ.

 ಆದರೆ, ಇತ್ತೀಚಿನ ದಿನದಲ್ಲಿ ರೈತರ ಮಕ್ಕಳಿಗೆ ಯಾರೂ ವಧು ನೀಡುತ್ತಿಲ್ಲ. ಕೃಷಿ ಮಾಡುತ್ತಿದ್ದೇವೆ ಎಂದು ಹೇಳಿದರೆ, ವಧು ಕೊಡುವುದಿಲ್ಲ. ನೌಕರಿ ಇದ್ದರೆ ಮಾತ್ರ ಹೆಣ್ಣು ಕೊಡುತ್ತಾರೆ.

ಈ ಕುರಿತು ಸರ್ಕಾರ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಜಾಗೃತಿ ಮೂಡಿಸಬೇಕು” ಎಂದು ಮನವಿ ಪತ್ರ ನೀಡಿದ್ದಾರೆ.

ರೈತ ಮಕ್ಕಳು ರೈತರಾಗಬಾರದೇ ?

ರೈತರ ಮಕ್ಕಳು ರೈತರಾಗಬಾರದೇ ಎಂದು ಪ್ರಶ್ನಿಸಿರುವ ಯುವಕರು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡಿದ್ದಾರೆ.

ರೈತರಿಗೆ ಕನ್ಯೆ ನೀಡುವಂತೆ ಜನಜಾಗೃತಿ ಕಾರ್ಯಕ್ರಮ ಮಾಡಿ ಅರಿವು ಮೂಡಿಸಬೇಕು ಎಂದು ಕುಂದಗೋಳ ತಹಶೀಲ್ದಾರ್‌ ಅಶೋಕ್ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಾರ್ವಜನಿಕರಿಗೆ ರಾಷ್ಟ್ರಪತಿ ಭವನ ವೀಕ್ಷಿಸಲು ಡಿಸೆಂಬರ್‌ 1ರಿಂದ ಅವಕಾಶ!