ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳವಾರ ಅವರು ಸಿದ್ಧಾಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯವನ್ನು ನೆರವೇರಿಸಿ ಹಾಗೂ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು.
ಈ ಪುಣ್ಯಾತ್ಮ 60 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲವಂತೆ!
ಭಾರತದಲ್ಲಿ ನಿಂತ ನೀರಾಗಿದ್ದ ಅಭಿವೃದ್ಧಿ ಕೆಲಸಗಳಿಗೆ ಇಂದು ವೇಗ ನೀಡಲಾಗಿದೆ.
ದೇಶದ ಪ್ರತಿ ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ಗುರಿ ತಲುಪಿಸಲು ಜಲಜೀವನ ಮಿಷನ್ ಯೋಜನೆಯಡಿ ದೇಶದ 10 ಕೋಟಿ ಮನೆಗಳಿಗೆ ಕುಡಿಯುವ ನೀರು ತಲುಪಿಸಲಾಗಿದೆ.
7TH Pay Commission 10 ಲಕ್ಷ ಸರ್ಕಾರಿ ನೌಕರರಿಂದ ನಾಳೆ ಕೆಲಸಕ್ಕೆ ಗೈರು; ಜನ ಜೀವನದ ಮೇಲೆ ಪರಿಣಾಮ!
ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ತಲುಪಿಸಲಾಗಿದೆ. ಸರ್ವೋದಯದೊಂದಿಗೆ ನವೋದಯವನ್ನು ಸಾಧಿಸಿ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಭಾರತವು ಬದಲಾವಣೆಯ ಪರ್ವದಲ್ಲಿದೆ. ಇಡೀ ವಿಶ್ವವೇ ಆರ್ಥಿಕ ಹಿಂಜರಿಕೆಯ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಭಾರತ ಶೇ. 6.7 ರಷ್ಟು ಅಭಿವೃದ್ಧಿಯನ್ನು ಕಂಡಿದೆ.
ದೇಶದ ಜನಸಂಖ್ಯೆಯನ್ನು ಶಾಪವೆಂದು ಪರಿಗಣಿಸುವ ಕಾಲವೊಂದಿತ್ತು. ಆದರೆ, ಈಗ ಜನಸಂಖ್ಯೆಯ ಶೇ.46 ರಷ್ಟು ಯುವಜನರಿದ್ದು,
ಪ್ರಧಾನಿ ಮೋದಿಯವರು ಈ ಯುವಶಕ್ತಿಯೇ ದೇಶದ ಶಕ್ತಿ ಎಂದರು.
ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದೇಶದ ಯುವಶಕ್ತಿ ಪ್ರಮುಖ ಪಾತ್ರವಹಿಸಲಿದೆ.
ನಕಾರಾತ್ಮಕತೆಯಿಂದ ಸಕಾರಾತ್ಮಕತೆಯೆಡೆಗೆ, ಸವಾಲುಗಳನ್ನು ಅವಕಾಶಗಳಾಗಿ ಮಾಡಿಕೊಳ್ಳುವ ಕಾಲಘಟ್ಟದಲ್ಲಿದ್ದೇ ಎಂದು ಹೇಳಿದರು.
ಮೀನುಗಾರಿಕೆ ಇಲಾಖೆಗೆ ಗಸ್ತು ದೋಣಿ ಖರೀದಿಸಲು ಭಿಕ್ಷಾಟನೆ ಪ್ರತಿಭಟನೆ!
ಸರ್ಕಾರವು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ರಾಜ್ಯದಲ್ಲಿ ಈ ಹಿಂದೆಂದಿಗಿಂತಲೂ ಗಣನೀಯ ಪ್ರಮಾಣದ ಅಭಿವೃದ್ಧಿ ಕಾಣುತ್ತಿದೆ.
ನವ ಕರ್ನಾಟದಿದ ನವ ಭಾರತ ನಿರ್ಮಾಣ ಮಾಡೋಣ ಎಂದರು.
ಜನಕಲ್ಯಾಣಕ್ಕೆ ಯಾವ ಸ್ಥಾನವೂ ಅಡ್ಡಿಬರುವುದಿಲ್ಲ. ರಾಜಕಾರಣದಲ್ಲಿ ಜನ ರಾಜಕಾರಣ ಮಾಡಿದವರಿಗೆ ಅಧಿಕಾರವೂ ಬರುತ್ತದೆ ಜನರ ಪ್ರೀತಿಯೂ ಇರುತ್ತದೆ.
ಆರು ಬಾರಿ ಶಿರಶಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆರಿಸಿ ಬರಬೇಕಾದರೆ ಅವರು ಮಾಡಿರುವ ಕೆಲಸವೇ ಸಾಕ್ಷಿ.
ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,
ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.