News

ಕಸದಿಂದ ರಸ, ನಿಮ್ಮ ಮನೆಯಲ್ಲಿ ಬರುವಂತ ಹಸಿರು ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸಬಹುದು ಗೊತ್ತಾ?

16 December, 2020 2:56 PM IST By:

ನಗರಗಳಲ್ಲಿ ಬದುಕುವ ಜನ ತಮ್ಮ ಮನೆಯಲ್ಲಿನ ಕಸವನ್ನು ಮಹಾನಗರಪಾಲಿಕೆಯ ಗಾಡಿಗಳಲ್ಲಿ ನಾವೆಲ್ಲ ಹಾಕುವುದು ವಾಡಿಕೆ, ಆದರೆ ಮಹಾನಗರ ಪಾಲಿಕೆಯವರು ನಾವು ಹಾಕಿದ ಕಸವನ್ನು ತೆಗೆದುಕೊಂಡು ಅದನ್ನು ಏನು ಮಾಡಬೇಕು ಎಂಬುದು ದೊಡ್ಡ ತೊಂದರೆಯಾಗಿತ್ತು ಆದರೆ ಅದಕ್ಕೀಗ ಕೊನೆ ಬಂದಿದ್ದು ಕಸದಿಂದ ರಸ ವಾಗಿ ಕಸದಿಂದ ನಾವು ಗೊಬ್ಬರವನ್ನು ತಯಾರಿಸಬಹುದು ಎಂಬುದನ್ನು ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ತೋರಿಸಿಕೊಟ್ಟಿದ್ದಾರೆ.

ನಾವು ನಮ್ಮ ಮನೆಯಲ್ಲಿ ಹಲವಾರು ತರಹದ ಕಸವನ್ನು ಹಾಕುತ್ತೇವೆ ಅದು ಪ್ಲಾಸ್ಟಿಕ್ ಆಗಿರಬಹುದು, ಅಡುಗೆ ಕೋಣೆಯಿಂದ ಬರುವಂತಹ ಉಳಿದ ಸಾಮಗ್ರಿಗಳ ಆಗಿರಬಹುದು, ಹೀಗೆ ಹಸಿ ಕಸವನ್ನು ಬಳಸಿ ಗೊಬ್ಬರ ತಯಾರಿಸುವುದು ಹೇಗೆ ಎಂಬುದನ್ನು ಧಾರವಾಡದವರು ತೋರಿಸಿಕೊಟ್ಟಿದ್ದಾರೆ.

ಸ್ವಚ್ಛ ಭಾರತ್ ಮಿಷನ್ ಅರವಿಂದ ಸಮಗ್ರ ಗಣ ತ್ಯಾಜ್ಯ ವಸ್ತು ನಿರ್ವಹಣೆ ಯೋಜನೆ ಅಡಿಯಲ್ಲಿ ನಗರದಲ್ಲಿ ಕಾಂಪೋಸ್ಟ್ ಘಟಕವನ್ನು ಸ್ಥಾಪಿಸುವ ಮೂಲಕ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಚಾಲನೆ ಕೊಟ್ಟಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಹೊಸ ಯಲ್ಲಾಪುರದಲ್ಲಿ 12.63 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.ಇದು 150 tonnes per day ಸಾಮರ್ಥ್ಯವುಳ್ಳ ಘಟಕವಾಗಿದೆ.

ಈ ಘಟಕದಲ್ಲಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಅದನ್ನು ಕೃಷಿಭೂಮಿಗೆ ಬಳಸಲು ಯೋಗ್ಯವೆಂದು ಪರೀಕ್ಷೆ ನಡೆಸಲಾಗಿದೆ. ಪ್ರಯೋಗಾಲಯವು ಹೀಗೊಬ್ಬರು ಕೃಷಿಭೂಮಿಗೆ ಬಳಸಲು ಯೋಗ್ಯವೆಂದು ಪ್ರಮಾಣಪತ್ರವನ್ನು ನೀಡಿದೆ ಹಾಗೂ ಇನ್ನೇನು ಕೆಲವೇ ದಿನಗಳಲ್ಲಿ ಈ ಗೊಬ್ಬರವು ಮಾರುಕಟ್ಟೆಯಲ್ಲಿ ಸಿಗಲಿದೆ.