News

ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!

28 April, 2022 2:58 PM IST By: Kalmesh T
"Warning to motorists" penalties for Chewing gutka while driving!

ವಾಹನ ಚಾಲಕರಿಗೆ ಎಚ್ಚರಿಕೆ! ವಾಹನ ಚಲಾವಣೆ ವೇಳೆ ಗುಟ್ಕಾ ಜಗೆಯುವುದು ಕಂಡು ಬಂದರೆ ಅಂತವರಿಗೆ ದಂಡ ವಿಧಿಸಲಾಗುವುದು ಎಂದು ಮಂಗಳೂರು ಆರ್‌ಟಿಒ ತಿಳಿಸಿದೆ.

ಮಂಗಳೂರು ಆರ್‌ಟಿಒನಿಂದ ಹೊಸ ಕ್ರಮ

ಈಗಾಗಲೇ ವಾಹನ ಚಲಾವಣೆ ವೇಳೆ ಮಧ್ಯಪಾನ ಮಾಡುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಕಾನೂನಿನ ಮೇರೆಗೆ ಬಹುಪಾಲು ನಿಯಮ ಜಾರಿಯಲ್ಲಿದೆ. ಈಗ ಇದರೊಟ್ಟಿಗೆ ಮಂಗಳೂರು RTO ಮತ್ತೊಂದು ಹೊಸ ಷರತ್ತನ್ನು ಜನರಿಗೆ ತಿಳಿಸುತ್ತಿದೆ.

ಕೆಲವರು ಮದ್ಯಪಾನ ಮಾಡಿ, ನಂತರ ಪಾನ್‌ ಮಸಾಲ ಹಾಕಿ ವಾಹನ ಚಲಾಯಿಸುತ್ತಾರೆ. ಮದ್ಯ ಕುಡಿಯದ ಕೆಲವರು ಗುಟ್ಕಾ ಹಾಕಿ ಡ್ರೈವಿಂಗ್‌ ಮಾಡುತ್ತಾರೆ. ಡ್ರೈವಿಂಗ್‌ ಸಂದರ್ಭ ನಿದ್ದೆ ಬರಬಾರದು ಎಂದು ಜಗಿಯುತ್ತಾ ಇರುತ್ತೇವೆ ಎಂದು ಅವರು ಸಮಜಾಯಿಷಿ ನೀಡುತ್ತಾರೆ. ಆದರೆ, ನಾವು ಅವರ ಮೇಲೂ ಕೇಸು ಹಾಕುತ್ತೇವೆ ಎನ್ನುತ್ತಾರೆ ಮಂಗಳೂರು ಸಾರಿಗೆ ಪ್ರಾಧಿಕಾರ ಅಧಿಕಾರಿ ರಮೇಶ್‌ ವರ್ಣೇಕರ್‌ ತಿಳಿಸಿದ್ದಾರೆ.

ಇದನ್ನೂ ಓದಿರಿ:

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ವಾಹನಗಳ ತಪಾಸಣೆ ಸಂದರ್ಭ ಲಾರಿ ಚಾಲಕನನ್ನು ಇಳಿಸಿ ದಾಖಲೆ ತೋರಿಸಲು ಹೇಳಿದಾಗ, ಬಾಯಿ ತುಂಬಾ ಗುಟ್ಕಾ ಇತ್ತು. ಆತ ಮಾತನಾಡಲು ಕಷ್ಟಪಡುತ್ತಿದ್ದ. ಆತನ ಮಾತಿನಲ್ಲಿ ಸ್ಪಷ್ಟತೆ ಇರಲಿಲ್ಲ. ಇದರಿಂದ ಕುಪಿತಗೊಂಡ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಇಂಥದ್ದೇ ಘಟನೆ ಮರುಕಳಿಸಿದಾಗ, ಇನ್ನೊಬ್ಬನಿಗೂ ಇದೇ ಮಾದರಿ ದಂಡ ವಿಧಿಸಿದ್ದಾರೆ.

‘ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಮೂರು ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ. ಗುಟ್ಕಾವನ್ನು ಕೂಡಾ ಮಾದಕ ದ್ರವ್ಯ ಎಂದು ಪರಿಗಣಿಸಿ, ಎರಡು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದು, ಇದನ್ನು ಮುಂದುವರಿಸುತ್ತೇವೆ’ ಎನ್ನುತ್ತಾರೆ ಮಂಗಳೂರು ಸಾರಿಗೆ ಪ್ರಾಧಿಕಾರ ಅಧಿಕಾರಿ ರಮೇಶ್‌ ವರ್ಣೇಕರ್‌.

ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ಗುಟ್ಕಾ ಹಾಕಿ ಡ್ರೈವಿಂಗ್‌ ಮಾಡಿದ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತು ಮಾಡುವುದು ಕಷ್ಟ. ಗುಟ್ಕಾ ಮತ್ತು ಪಾನ್‌ ವ್ಯತ್ಯಾಸ ತಿಳಿಯುವುದು ಕಷ್ಟ. ಆತನ ಉಗುಳಿನ ಮಾದರಿ ಸಂಗ್ರಹ, ಕೋರ್ಟ್‌ಗೆ ಸಲ್ಲಿಸುವುದೆಲ್ಲ ಸಾಧ್ಯವಾಗದ ಮಾತು. ಆದುದರಿಂದ ಕೇಸು ಹಾಕಿ, ಸ್ಥಳದಲ್ಲೇ ದಂಡ ಹಾಕಿ, ಪ್ರಕರಣ ಮುಗಿಸಿ ಬಿಡುತ್ತೇವೆ ಎನ್ನುತ್ತಾರೆ ಅವರು.

ಕೆಲವು ಧಾರ್ಮಿಕ ಕೇಂದ್ರಗಳ ಆವರಣ, ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ತಂಬಾಕು ಜಗಿಯುವುದನ್ನು ನಿಷೇಧಿಸಲಾಗಿದೆ. ಮಂಗಳೂರು RTO ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ತಂಬಾಕು ಸೇವನೆ ಬಿಟ್ಟರೆ, ಅವರ ಆರೋಗ್ಯ ಹಾಳಾಗುವುದು ತಪ್ಪುತ್ತದೆ. ವಾಹನ ಚಲಾಯಿಸುತ್ತಲೇ ಅಲ್ಲಲ್ಲಿ ಉಗುಳುವುದು, ಜನರ ಮೇಲೆ ಹಾರುವುದು ಕೂಡಾ ತಪ್ಪುತ್ತದೆ. ಖಾಸಗಿ ವಾಹನ ಚಾಲಕರ ಮೇಲೂ ಇಂಥ ದಂಡ ಪ್ರಯೋಗ ಮಾಡಬೇಕು ಎಂದು ಬಹುಪಾಲು ಜನರ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!