ಸರ್ಕಾರಿ ಅಧಿಕಾರಿಗಳ ಹೆಸರು ಹೇಳಿಕೊಂಡು ಜನ ಸಾಮಾನ್ಯರನ್ನು ಹೆದರಿಸಿ ಹಣ ವರ್ಗಾವಣೆ ಮಾಡಿಸಿಕೊಳ್ಲೂತ್ತಿದೆ ಖದೀಮರ ಗ್ಯಾಂಗ್.
ಆನ್‌ಲೈನ್ ವ್ಯವಹಾರಗಳು ಆರಂಭವಾಗಿ ಒಂದು ದೊಡ್ಡ ಡಿಜಿಟಲ್ ಕ್ರಾಂತಿ ಎಲ್ಲೆಡೆಯಾಗಿದೆ. ಆದರೆ, ಪ್ರತಿಯೊಂದು ಒಳ್ಳೆಯ ಕೆಲಸಕ್ಕೂ ಒಂದೊಂದು ಅಡಚಣೆಗಳು ಇರುವಂತೆ ಇಲ್ಲಿಯೂ ಆಗಿದೆ. ಬಹುಪಾಲು ಜನರ, ಅಧಿಕಾರಿಗಳ, ಕಚೇರಿಗಳ ವ್ಯವಹಾರಗಳಿಗೆ ಅತ್ಯಂತ ಸರಳವಾಗಿ ನೆರವೇರುವಂತೆ ಮಾಡಿದ್ದ ಡಿಜಿಟಲ್ ವ್ಯವಸ್ಥೆ ಇಂದು ಅದೆ ಫ್ಲಾಟ್‌ಫಾರ್ಮ್ ಮೂಲಕ ಕೆಟ್ಟದ್ದನ್ನು ಮಾಡುತ್ತಿದೆ.
ಹೌದು! ನಾವೆಲ್ಲ ಫೋನ್ ಪೇ, ಗೂಗಲ್ ಪೇಗಳ ಮೂಲಕ ಬ್ಯಾಂಕುಗಳಲ್ಲಿ ಸಾಲುಗಳಲ್ಲಿ ನಿಲ್ಲುವುದನ್ನು ತಪ್ಪಿಸಿಕೊಂಡಿದ್ದೇವೆ. ಆದರೆ, ಇನ್ನೊಂದೆಡೆ ಸರ್ಕಾರಿ ಅಧಿಕಾರಿಗಳ ಹೆಸರು ಹೇಳಿಕೊಂಡು ಜನ ಸಾಮಾನ್ಯರನ್ನು ಹೆದರಿಸಿ ಹಣ ವರ್ಗಾವಣೆ ಮಾಡಿಸಿಕೊಳ್ಲೂತ್ತಿದೆ ಖದೀಮರ ಗ್ಯಾಂಗ್.
ಇದನ್ನೂ ಓದಿರಿ:
ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!
SBI ಅಲರ್ಟ್: ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI
ಇತ್ತೀಚಿಗೆ ರಾಜ್ಯದಲ್ಲಿ ನಕಲಿ ಎಸಿಬಿ (ACB) ಹಾವಳಿ ಶುರುವಾಗಿದೆ. ರಾಯಚೂರು ಸೇರಿ ಹಲವೆಡೆ ಎಸಿಬಿ ಅಧಿಕಾರಿಗಳ ಹೆಸರಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಹಣ ನೀಡಿದ್ರೆ ಕೇಸ್ ಕ್ಲೋಸ್ ಮಾಡುತ್ತೇವೆ. ಹಣ ನೀಡದಿದ್ದರೆ ನಿಮ್ಮ ಮೇಲೆ ದಾಳಿ ಮಾಡಬೇಕಾಗುತ್ತೆ ಅಂತ ಭಯವನ್ನು ಹುಟ್ಟಿಸುವ ಗ್ಯಾಂಗ್ ಒಂದು ಕಾರ್ಯ ನಿರ್ವಹಿಸಲು ಶುರು ಮಾಡಿದೆ. ಭಯಗೊಂಡ ಕೆಲ ಅಧಿಕಾರಿಗಳು ಹಣಕೊಟ್ಟರೆ, ಅನುಮಾನ ಬಂದವರು ಪೊಲೀಸ್ ಕೇಸ್ ದಾಖಲು ಮಾಡಲು ಮುಂದಾಗಿದ್ದಾರೆ.
ಎಚ್ಚರ ಕರ್ನಾಟಕ! ಹಕ್ಕಿಜ್ವರ; ಲೆಕ್ಕ ತಪ್ಪಿದರೆ ಕಾದಿದೆ ಆಪತ್ತು!
#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!
ACB ಹೆಸರಲ್ಲಿ ಕಾಲ್ ಮಾಡಿ ಹಣ ದೋಚುತ್ತಾರೆ
ನಕಲಿ ಎಸಿಬಿ ಗ್ಯಾಂಗ್ ರಾಯಚೂರು ಸೇರಿ ರಾಜ್ಯದ ಯಾದಗಿರಿ, ಬೀದರ್ ಹಾಗೂ ಇತರೆಡೆ ದಾಳಿಯ ಬೆದರಿಕೆ ಹಾಕಿ ಹಣ ವಸೂಲಿ ದಂಧೆ ನಡೆಸಿದೆ. ನೇರವಾಗಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ಮಾಡುವ ಈ ನಕಲಿ ಎಸಿಬಿ ಗ್ಯಾಂಗ್, ನಿಮ್ಮ ಇಲಾಖೆಯ ಅಧೀನ ಕಚೇರಿಯ ಇಂತಹ ಅಧಿಕಾರಿ ವಿರುದ್ದ ಎಸಿಬಿಗೆ ದೂರು ಬಂದಿದೆ. ಅವರನ್ನು ವಿಚಾರಣೆ ಮಾಡಬೇಕು ನಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಹೇಳಿ ಅಂತ ಹೇಳುತ್ತೆ. ಬಳಿಕ ಟಾರ್ಗೆಟ್ ಮಾಡಿರುವವರಿಗೆ ಕರೆ ಮಾಡಿ ಬಿ ರಿಪೋರ್ಟ್ ಹಾಕಲು ಹಣದ ಬೇಡಿಕೆ ಇಡುತ್ತೆ.
ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!
ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!
ರಾಯಚೂರು ಎಸಿಬಿ ಡಿವೈಎಸ್ ಪಿ. ವಿಜಯಕುಮಾರ್ ಹೆಸರಲ್ಲಿ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ನೂರ್ ಜಹಾರ್ ಖಾನಂಗೆ ಕರೆ ಮಾಡಿ ನಿಮ್ಮ ಅಧೀನದ ಜಿ.ಪಂ. ಯೋಜನಾಧಿಕಾರಿ ರೋಹಿಣಿ ಹಾಗೂ ರಾಯಚೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ವಿರುದ್ಧ ದೂರು ಬಂದಿದೆ ಅಂತ ತಿಳಿಸಿದೆ. ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ನಾಯಕ್‌ಗೆ ಕರೆ ಮಾಡಿ ರಾಯಚೂರು ವಲಯದ ಅಬಕಾರಿ ನಿರೀಕ್ಷಕ ಹಣಮಂತ ಗುತ್ತೆದಾರ ವಿರುದ್ಧ ಎಸಿಬಿಗೆ ದೂರು ಬಂದಿದೆ ಅವರನ್ನ ವಿಚಾರಣೆ ಮಾಡಬೇಕು. ನನ್ನ ನಂಬರ್ ಗೆ ಕರೆ ಮಾಡಲು ಹೇಳಿ ಅಂತ ತಿಳಿಸಿದ್ದಾರೆ.ಬಳಿಕ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ.
ನಕಲಿ ಎಸಿಬಿ ಬೆದರಿಕೆ ಕರೆಗೆ ಹೆದರಿ ಕೆಲ ಅಧಿಕಾರಿಗಳು ಹಣವನ್ನ ನೀಡಿದ್ದಾರೆ ಅನ್ನೋ ಮಾಹಿತಿಯಿದೆ. ಆದರೆ ಅನುಮಾನ ಬಂದಿರುವ ರಾಯಚೂರಿನ ಅಧಿಕಾರಿಗಳು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಸೈಬರ್ ಕ್ರೈಮ್ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!