News

ರೈತರೆ ಗಮನಿಸಿ: ಡೇರಿ ಉದ್ಯಮ ಆರಂಭಿಸಲು ನಬಾರ್ಡ್‌ ನೀಡಲಿದೆ ಬರೋಬ್ಬರಿ ₹25 ಲಕ್ಷ! ಪಡೆಯುವುದು ಹೇಗೆ ಗೊತ್ತೆ?

10 August, 2022 11:30 AM IST By: Kalmesh T
Want to start a dairy industry, NABARD will give you ₹25 lakh!

ರೈತರೇ ಗಮನಿಸಿ ನೀವು ಡೇರಿ ಉದ್ಯಮ ಆರಂಭಿಸಲು ಬಯಸಿದರೆ ನಬಾರ್ಡ್‌ ನೀಡಲಿದೆ ರೂಪಾಯಿ 25 ಲಕ್ಷದವರೆಗೆ ಸಾಲ ಸೌಲಭ್ಯ. ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಕುರಿತು ಇಲ್ಲಿದೆ ಮಾಹಿತಿ..

ಇದನ್ನೂ ಓದಿರಿ: ಹವಾಮಾನ ಇಲಾಖೆಯಿಂದ ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ; ಎಲ್ಲೆಲ್ಲಿ ಎಷ್ಟು ಮಳೆಯಾಗಲಿದೆ ಗೊತ್ತೆ?

ಕೃಷಿ ಕ್ಷೇತ್ರಕ್ಕೆ ಸಾಲ ನೀಡಲು ದೇಶದ ಅತ್ಯುತ್ತಮ ಬ್ಯಾಂಕ್ ನಬಾಡ್( ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್) ನಿನ್ನ ಪ್ರತಿವರ್ಷವೂ ಸುಮಾರು 90 ಸಾವಿರ ಕೋಟಿ ರೂಪಾಯಿಗಳನ್ನು ಬೆಳೆ ಸಾಲವನ್ನಾಗಿ ವಿನಾಯಿತಿ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಆದರೆ ಸದ್ಯಕ್ಕೆ ಹಣಕಾಸು ವರ್ಷದಲ್ಲಿ ಸಾಲದ ಪ್ರಮಾಣವು 1.20 ಲಕ್ಷ ಕೋಟಿ ರೂಪಾಯಿಗಳು ವಿಸ್ತರಿಸಲಾಗಿದೆ.

ವಾಸ್ತವವಾಗಿ ಕೇಂದ್ರ ಸರ್ಕಾರ ಶುರು ಮಾಡಿದ ಡೈರಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಡೈರಿ ಉದ್ಯಮ ಆರಂಭಿಸಲು ಪ್ರೋತ್ಸಾಹ ಮಾಡುತ್ತಿದ್ದಾರೆ. ಡೈರಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಈ ನಬಾರ್ಡ್ ಯೋಜನೆಯಲ್ಲಿ ಹಣಕಾಸನ್ನು ಒದಗಿಸುತ್ತಿದ್ದಾರೆ.

ಈ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ದೊರೆಯಲಿದೆ ರೂ 20,000 ದಿಂದ 35,000 ಪ್ರೋತ್ಸಾಹಧನ! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?

ಯೋಜನೆಯ ವಿವರ

* ಸರ್ಕಾರಿ ಯೋಜನೆಯ ಹೆಸರು: ನಬಾರ್ಡ್ ಯೋಜನೆ 2022

* ಆರಂಭಿಸಿದವರು: ಕೇಂದ್ರ ಸರ್ಕಾರ

* ಸಂಪರ್ಕ ಸಂಖ್ಯೆ : (91) 022-26539895/96/99

* ಅಧಿಕೃತ ವೆಬ್‌ಸೈಟ್: https://www.nabard.org/ 

ರೈತರಿಗೆ ಗುಡ್‌ನ್ಯೂಸ್‌: ರೈತರಿಂದ ಗೋಮೂತ್ರ, ಸಗಣಿ ಖರೀದಿಸಲು ಮುಂದಾದ ಸರ್ಕಾರ! ಬೆಲೆ ಎಷ್ಟು ಗೊತ್ತೆ?

ನಬಾರ್ಡ್ ಯೋಜನೆ ಎಂದರೇನು?

ನಬಾರ್ಡ್ ಸಾಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ದೇಶದ ರೈತರಿಗೆ ಹೈನುಗಾರಿಕೆ ಪ್ರಾರಂಭಿಸಲು ಹಾಗೂ ಕೇಂದ್ರ ಸರ್ಕಾರದ ಸಹಾಯದೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಲವನ್ನು ಒದಗಿಸುವ ಯೋಜನೆ ಇದಾಗಿದೆ.

ಈ ಯೋಜನೆಯೂ ಕೇವಲ ಹಾಲು ಉತ್ಪಾದನೆ ಹೆಚ್ಚಿಸಲು ಆರಂಭಿಸಲಾಗಿದೆ. ಈ ಯೋಜನೆಯ ಮೂಲಕ ಹಾಲು ಮತ್ತು ಹಾಲಿನ ಉತ್ಪಾದನೆಗಳನ್ನು ಹೆಚ್ಚಿಸಲು ಆಗುವುದರಿಂದ ಹಣವನ್ನು ಹೆಚ್ಚಾಗಿ ಗಳಿಸುವುದಕ್ಕೆ ಸಹಾಯಮಾಡುತ್ತದೆ.

ಈ ಯೋಜನೆಯಡಿ, ಬ್ಯಾಂಕಿನಿಂದ ಡೈರಿ ವ್ಯವಹಾರಕ್ಕಾಗಿ ಸಾಲ ತೆಗೆದುಕೊಳ್ಳುತ್ತೀರಿ ಎಂದಾದರೆ, ಈ ಸಾಲದ ಮೇಲೆ ಸಬ್ಸಿಡಿ (ಸಹಾಯಧನ) ಪಡೆಯುತ್ತೀರಿ.

ಈ ಯೋಜನೆಯಡಿ ಸಾಲದ ಮೇಲೆ ಎಸ್‌ಸಿ ಎಸ್‌ಟಿ ಫಲಾನುಭವಿಗಳಿಗೆ ಸುಮಾರು ಶೇ.33ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಶೇ.25ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಗರಿಷ್ಠ 25 ಲಕ್ಷ ರೂಪಾಯಿವರೆಗೆ ಸಾಲ ಪಡೆಯಲು ಅವಕಾಶವಿದೆ.

ಇದರಿಂದ ಹೊಸದಾಗಿ ಡೇರಿ ಉದ್ಯಮ ಆರಂಭಿಸುವ ಪ್ರಾರಂಭಿಸುವರು ಸಾಲದ ಒತ್ತಡವಿಲ್ಲದೆ ಉದ್ಯಮ ಆರಂಭಿಸಬಹುದು.

ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಉಡುಗೊರೆ; ಈ ಯೋಜನೆಯಡಿ ದೊರೆಯಲಿದೆ ₹1.50 ಲಕ್ಷ! ಯಾರು ಅರ್ಹರು ಗೊತ್ತೆ?

ನಬಾರ್ಡ್ ಯೋಜನೆಯ ಮುಖ್ಯ ಉದ್ದೇಶಗಳು

ಅನೇಕ ರಾಜ್ಯಗಳಲ್ಲಿ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದ್ದು, ಸರಿಯಾಗಿ ಪೂರೈಕೆಯಾಗುವುದಿಲ್ಲ. ನಗರದಲ್ಲಿ ವಾಸಿಸುತ್ತಿರುವ ಜನರಿಗೆ ಸರಿಯಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳು ದೊರೆಯುವುದು ಸಮಸ್ಯೆಯಾಗುತ್ತಿದೆ. ಇದನ್ನು ಪೂರೈಸಲು ಹಾಗೂ ಸ್ವಯಂ ಉದ್ಯಮಗಳನ್ನು ಹೆಚ್ಚಿಸಲು ಈ ಯೋಜನೆ ಸಹಾಯ ಮಾಡುತ್ತದೆ.

ನಬಾರ್ಡ್ ಯೋಜನೆಯಗೆ ಅರ್ಹತೆಗಳು?

* ದೇಶದ ಯಾವುದೇ ರಾಜ್ಯದಲ್ಲಿ ವಾಸಿಸುವ ರೈತರು, ವೈಯಕ್ತಿಕ ಉದ್ಯಮಿಗಳು, ಎನ್‌ಜಿಒಗಳು, ಕಂಪನಿಗಳು, ಅಸಂಘಟಿತ ಮತ್ತು ಸಂಘಟಿತ ವಲಯದ ಗುಂಪುಗಳು ಇತ್ಯಾದಿಗಳು ಈ ಯೋಜನೆಯ ಲಾಭ ಪಡೆಯಲು ಅರ್ಹರು.

* ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ವಾಣಿಜ್ಯೋದ್ಯಮಿ ಎಲ್ಲ ಘಟಕಗಳಿಗೆ ಈ ಯೋಜನೆಯಡಿ ಸಹಾಯ ಪಡೆಯಬಹುದು. ಆದರೆ, ಅವರು ಪ್ರತಿ ಘಟಕಕ್ಕೆ ಅರ್ಹರಾಗಿರಬೇಕು.

ಪಡಿತರದಾರರ ಗಮನಕ್ಕೆ: ಸೆಪ್ಟೆಂಬರ್‌ನಿಂದ ಸ್ಥಗಿತಗೊಳ್ಳಲಿದೆಯಾ ಉಚಿತ ರೇಷನ್‌ ವಿತರಣೆ?

* ಒಂದು ಕುಟುಂಬದ ಇಬ್ಬರು ಸದಸ್ಯರು ಸಹ ಈ ಯೋಜನೆಯ ಲಾಭ ಪಡೆಯಬಹುದು. ಆದರೆ, ಇದಕ್ಕಾಗಿ ಕೆಲವು ಷರತ್ತುಗಳನ್ನು ಹಾಕಲಾಗಿದೆ, ಅವರು ಕನಿಷ್ಠ 500 ಮೀಟರ್ ಅಂತರದಲ್ಲಿ ವಿವಿಧ ಸ್ಥಳಗಳು ಮತ್ತು ರಚನೆಗಳೊಂದಿಗೆ ಪ್ರಾರಂಭಿಸಬೇಕು.

* ಯಾವುದೇ ಅರ್ಜಿದಾರರು ಈ ಯೋಜನೆಯಡಿ ಒಮ್ಮೆ ಮಾತ್ರ ಪ್ರಯೋಜನ ಪಡೆಯಬಹುದು.

* ಅರ್ಚಿತಾರಾರು ಪ್ರಾಣಿಗಳನ್ನು ಸಾಕಲು ಸೂಕ್ತವಾದ ಭೂಮಿಯನ್ನು ಹೊಂದಿರಬೇಕು

EPS ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸುದ್ದಿ: ಕನಿಷ್ಠ ಪಿಂಚಣಿ-1995ರಲ್ಲಿ ಮಹತ್ವದ ಬದಲಾವಣೆ!

ಅರ್ಜಿ ಸಲ್ಲಿಕೆ ಹೇಗೆ?

* ನೀವು ನಮ್ಮ ಯೋಚನೆಯಲ್ಲಿ ಲಾಭವನ್ನು ಪಡೆಯಬೇಕಾದಲ್ಲಿ ಆನ್ಲೈನ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬೇಕು ಇದರ ಹಂತಗಳನ್ನು ಕೆಳಗೆ ನೀಡಿದ್ದೇವೆ.

* ಯೋಜನೆಯ ವೆಬ್‌ಸೈಟ್ (https://www.nabard.org/) ಗೆ ಭೇಟಿ ನೀಡಿ.

* ಇದಾದ ನಂತರ ಮುಖಪುಟದಲ್ಲಿ ಕಾಣಿಸುವ ಮಾಹಿತಿ ಕೇಂದ್ರವನ್ನು ಆಯ್ಕೆ ಮೇಲೆ ಕ್ಲಿಕ್ ಮಾಡಿ

* ಇದಾದ ನಂತರ ನೀವು ಆನ್ಲೈನ್ ನಬಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುವ ಬಟನ್ ಮೇಲೆ ಒತ್ತಿರಿ ಅಥವಾ ಕ್ಲಿಕ್ ಮಾಡಿ.

* ಇದರ ಒಳಗೆ ನಿಮಗೆ ಡೈರಿ ಫಾರ್ಮಿಂಗ್ ಸ್ಕೀಮ್ ಆನ್ಲೈನ್ ಅಪ್ಲಿಕೇಶನ್ ನ ಪಿಡಿಎಫ್ ಅನ್ನು ಆಯ್ಕೆ ನೀಡಲಾಗುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಿ.

* ಇದಾದ ನಂತರ ಯೋಜನೆಯ ಫಾರ್ಮನ್ನು ತೆಗೆದುಕೊಂಡು ನೀವು ಈ ಫಾರ್ಮ್ ಅನ್ನು ತುಂಬಿ ಅದರಲ್ಲಿ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನೀವು ಯೋಜನೆಯನ್ನು ಪಡೆಯಲು ಆಸಕ್ತಿ ಇರುವ ನಿಮ್ಮ ಸಮೀಪದ ಬ್ಯಾಂಕ್ ಗೆ ಅರ್ಜಿಯನ್ನು ಸಲ್ಲಿಸಿ.