ಪ್ರಜಾಪ್ರಭುತ್ವ ಹಬ್ಬದಲ್ಲಿ ಸಂಭ್ರಮಿಸಿದ ಮತದಾರರು!
ರಾಜ್ಯದ ವಿವಿಧ ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ
ಮೇ17ಕ್ಕೆ ಪಿಂಚಣಿ ಅದಾಲತ್ ಆಯೋಜನೆ
ಚಿನ್ನ ಪ್ರಿಯರಿಗೆ ಕಹಿಸುದ್ದಿ: ಚಿನ್ನದ ಬೆಲೆಯಲ್ಲಿ ಏರಿಕೆ
195 ಲಕ್ಷ ಮಿಲಿಯನ್ ಟನ್ ಗೋಧಿ ಸಂಗ್ರಹ
ಸುದ್ದಿಗಳ ವಿವರ ಈ ರೀತಿ ಇದೆ.
ಪ್ರಜಾಪ್ರಭುತ್ವ ಹಬ್ಬ ಎಂದೇ ಪರಿಗಣಿಸಿರುವ ಮತದಾನದಲ್ಲಿ ರಾಜ್ಯದ ಯುವ ಸಮೂಹ, ಹಿರಿಯರು ಸೇರಿದಂತೆ ಮತದಾನದ ಅರ್ಹತೆ ಹೊಂದಿರುವ
ಎಲ್ಲರೂ ಉತ್ಸಾಹದಿಂದ ಮತಚಲಾಯಿಸಿದ್ದು, ಬುಧವಾರ ಕಂಡುಬಂತು. ಕರ್ನಾಟಕ ವಿಧಾನಸಭೆ ಮತದಾನ ಪ್ರಕ್ರಿಯೆಯು
ಬುಧವಾರ ಬೆಳಿಗ್ಗೆ 7ಗಂಟೆಯಿಂದ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಯ ವರೆಗೆ ನಡೆಯಲಿದೆ.
ರಾಜ್ಯದ 224 ಕ್ಷೇತ್ರಗಳನ್ನು ಒಳಗೊಂಡಂತೆ 58,545 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ರಾಜ್ಯದ ಚುನಾವಣಾ ಫಲಿತಾಂಶ ಮೇ 13ಕ್ಕೆ ಪ್ರಕಟವಾಗಲಿದೆ.
----------------------
ರಾಜ್ಯದ ಹಲವು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ.
ಇನ್ನು ಮುಂದಿನ 24 ಗಂಟೆ ಕಾರವಳಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ
ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಅಲ್ಲದೇ ಮುಂದಿನ 24 ಗಂಟೆಯ ಅವಧಿಯಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಗರಿಷ್ಠ ಉಷ್ಣಾಂಶವು ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆ ಇದೆ.
ಇನ್ನು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ಸಮಯದಲ್ಲಿ
ಒಂದೆರಡು ಕಡೆಗಳಲ್ಲಿ ಬಾರಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
----------------------
ಪಿಂಚಣಿದಾರರು ಮತ್ತು ಅವರ ಕುಟುಂಬ ಪಿಂಚಣಿದಾರರ ಪಿಂಚಣಿಗೆ ಸಂಬಂಧಿಸಿದ ಕುಂದುಕೊರತೆಗಳ ಇತ್ಯರ್ಥಕ್ಕಾಗಿ
ಸಂಸದೀಯ ವ್ಯವಹಾರಗಳ ಸಚಿವಾಲಯವು ಮೇ 17 ರಂದು ನವದೆಹಲಿಯಲ್ಲಿ “ಪಿಂಚಣಿ ಅದಾಲತ್” ಆಯೋಜನೆ ಮಾಡಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ನಿರ್ದೇಶನದಂತೆ, ರಾಷ್ಟ್ರವ್ಯಾಪ್ತಿ ಪಿಂಚಣಿ ಅದಾಲತ್‌ನ್ನು ಎಲ್ಲಾ
ಸಚಿವಾಲಯಗಳು/ಇಲಾಖೆಗಳು ಮೇ 17ರಂದು ನಡೆಸಲಿದೆ. ಸಂಸದೀಯ ವ್ಯವಹಾರಗಳ ಸಚಿವಾಲಯವು ಸಂಸದೀಯ ವ್ಯವಹಾರಗಳ ಸಚಿವಾಲಯದ
ಪಿಂಚಣಿದಾರರು/ ಕುಟುಂಬ ಪಿಂಚಣಿದಾರರಿಗೆ ಮಾತ್ರ ಪಿಂಚಣಿ ಅದಾಲತ್ ಅನ್ನು ನಡೆಸುತ್ತದೆ.
ನವದೆಹಲಿಯಲ್ಲಿ ಮೇ 17ರಂದು ಬೆಳಿಗ್ಗೆ 11ರಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅದಾಲತ್ ನಡೆಯಲಿದೆ.
----------------------
ಚಿನ್ನದ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ಏರಿಕೆ ಕಂಡು ಬರುತ್ತಿದೆ. ಬುಧವಾರ ಪ್ರತಿ ಗ್ರಾಂ ಆಭರಣದ ಚಿನ್ನದ ಬೆಲೆಯು 5,670 ರೂಪಾಯಿ ಆಗಿದೆ.
ಇನ್ನು ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ಬೆಲೆಯು 56,700 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 56,750 ರೂಪಾಯಿ ಆಗಿದೆ.
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು 22 ಕ್ಯಾರಟ್ ಆಭರಣದ ಒಂದು ಗ್ರಾಂ 5,670 ರೂಪಾಯಿ ಆಗಿದೆ.
ಅಲ್ಲದೇ 24 ಕ್ಯಾರಟ್ ಬಂಗಾರದ ಬೆಲೆ 6,185 ರೂಪಾಯಿ ಆಗಿದೆ.
----------------------
2023-24ರ ಅವಧಿಯಲ್ಲಿ ಏಪ್ರಿಲ್‌ನ ವರೆಗೆ ದೇಶದಲ್ಲಿ ಬರೋಬ್ಬರಿ 195 ಲಕ್ಷ ಮಿಲಿಯನ್ ಟನ್ ಗೋಧಿ ಸಂಗ್ರಹಣೆ ಆಗಿದೆ.
RMS 2023-24ರ ಅವಧಿಯಲ್ಲಿ ಗೋಧಿಯ ಸಂಗ್ರಹಣೆಯು ಈಗಾಗಲೇ RMS 2022-23ರ ಒಟ್ಟು ಸಂಗ್ರಹಣೆಯನ್ನು ಮೀರಿದೆ.
RMS 2022-23ರಲ್ಲಿ ಗೋಧಿ ಸಂಗ್ರಹ ಪ್ರಮಾಣವು 188 LMT ಆಗಿತ್ತು.
ಈ ಪ್ರಮಾಣದ ಗೋಧಿ ಸಂಗ್ರಹದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. MSP ಹೊರಹರಿವು ಸುಮಾರು 41,148 ಕೋಟಿ ರೂ. ಆಗಿದ್ದು,
ಈಗಾಗಲೇ ಸುಮಾರು 14.96 ಲಕ್ಷ ರೈತರಿಗೆ ನೀಡಲಾಗಿದೆ.
ಗೋಧಿ ಸಂಗ್ರಹಣೆಯಲ್ಲಿ ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶದ ರಾಜ್ಯಗಳಿಂದ ಹೆಚ್ಚಾಗಿ ಸಂಗ್ರಹವಾಗಿದೆ.
ಇದು ಇಂದಿನ ಪ್ರಮುಖ ಸುದ್ದಿಗಳು ನಿರಂತರ ಸುದ್ದಿಗಾಗಿ ಕೃಷಿ ಜಾಗರಣ ನೋಡಿ ಧನ್ಯವಾದ!
ಚಿತ್ರಕೃಪೆ: karnataka state election commission