News

ಮತದಾರರು ಪ್ರಜಾಪ್ರಭುತ್ವದ ನಿಜವಾದ ಪ್ರಭುಗಳು: ಮನೋಜ್ ಕುಮಾರ ಮೀನಾ

17 April, 2023 4:11 PM IST By: Hitesh
Voters are the real lords of democracy Manoj Kumar Meena

ಜನತೆಯಲ್ಲಿ ರಾಜಕೀಯ ಅರಿವಿನಿಂದ ಸರ್ಕಾರವನ್ನು ಬದಲಾಯಿಸಬಹುದಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದರು.

ಪ್ರಜಾಪ್ರಭುತ್ವದ ಮೂಲಕ ಸರ್ಕಾರವನ್ನು ಚುನಾಯಿಸುವುದೇ ಮತದಾನದ ಶಕ್ತಿಯಾಗಿದೆ. ಮತದಾರರು ಪ್ರಜಾಪ್ರಭುತ್ವದ ನಿಜವಾದ ಪ್ರಭುಗಳು ಎಂದಿದ್ದಾರೆ.  

ಭಾರತ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮತ್ತು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿದ್ದ

“ಎಲೆಕ್ಥಾನ್ 2023” ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ನಂತರ ಮಾತನಾಡಿದ ಅವರು ಮತದಾರರಲ್ಲಿ ಮತದಾನದ ಪ್ರಜ್ಞೆ

ಮತ್ತು ಅದರ ಶಕ್ತಿಯನ್ನು ಬಳಸಿಕೊಳ್ಳುವ ಕುರಿತು ಅರಿವನ್ನು ವಿಸ್ತಿರುವ ಕೆಲಸ ಚುನಾವಣಾ ಆಯೋಗ ಮಾಡುತ್ತಿದೆ ಎಂದರು.

ಪ್ರಸ್ತುತ ಪ್ರಜಾಪ್ರಭುತ್ವದ ಭಾರತದಲ್ಲಿ ಮತದಾನದ ಭವಿಷ್ಯವನ್ನು ಭದ್ರಪಡಿಸುವ ದೃಷ್ಠಿಯಿಂದ ಬದಲಾದ ಜಗತ್ತಿನ ಅನುಗುಣವಾಗಿ

ನೂತನ ಸಾಮಾಜಿಕ ಮತ್ತು ತಂತ್ರಜ್ಞಾನದ ಅವಿಷ್ಕಾರಗಳ ಮೊರೆ ಹೋಗಲಾಗುತ್ತಿದ್ದು, ಅದಕ್ಕಾಗಿ ಯುವಜನರಿಂದ

ಹೊಸ ಐಡಿಯಾಗಳನ್ನು ರಾಷ್ಟ್ರಮಟ್ಟದಲ್ಲಿ ಸಂಗ್ರಹಿಸಲು ಈ ಎಲೆಕ್ಥಾನ್ ಹಮ್ಮಿಕೊಳ್ಳಲಾಗಿದ್ದು,

ಕಳೆದ ತಿಂಗಳು 10 ರಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಇದಕ್ಕೆ ನಗರದ ಐಐಎಸ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದರು.

ಒಂದು ತಿಂಗಳುಗಳ ಕಾಲ ಆನ್ ಲೈನ್ ನಲ್ಲಿ ನಡೆದ ಈ ಹ್ಯಾಕಥಾನ್ ನಲ್ಲಿ ಆಯ್ದ 40 ಗುಂಪುಗಳಿಗಾಗಿ ಎರಡು ದಿನಗಳ ಕಾಲ

ನಿರಂತರವಾಗಿ 30 ಗಂಟೆಗಳ ಆಫ್ಲೈನ್ “ಎಲೆಕ್ಥಾನ್ 2023” ಕಾರ್ಯಕ್ರಮವನ್ನು ಬೆಂಗಳೂರಿನ

ಎಲೆಕ್ಟ್ರಾನಿಕ್ ಸಿಟಿಯ ಇಂಟರ್ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇನ್ಪರ್ಮೇಷನ್ ಟೆಕ್ನಾಲಜಿಯಲ್ಲಿ (ಐಐಐಟಿ) ನಡೆಸಲಾಯಿತು.

ಕಾರ್ಯಕ್ರಮದ ಆಯೋಜನೆ ಕುರಿತು ಐಐಐಟಿ ನಿರ್ದೇಶಕರಾದ ಪ್ರೊ. ದೇಬಬ್ರತ ದಾಸ್ ಅವರು ಮಾತನಾಡಿ 30 ಗಂಟೆಗಳ ಹ್ಯಾಕಥಾನ್ ಏಪ್ರಿಲ್

15 ರಂದು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ ಇಂದು ಸಂಜೆ 4 ಗಂಟೆಗೆ ಮುಕ್ತಾಯಗೊಂಡಿದ್ದು, ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಭಾವಂತ ಯುವ ಸ್ಪರ್ಧಿಗಳ ಪರಿಹಾರಗಳು ಅತ್ಯುತ್ತಮವಾಗಿದ್ದು, ಭಾರತದ ಮತದಾನ ಪ್ರಕ್ರಿಯೆಯಲ್ಲಿ ಸುಧಾರಣೆ

ಮತ್ತು ಕ್ರಾಂತಿಯನ್ನು ತರುವಂಥದ್ದಾಗಿದೆ. ತಂತ್ರಜ್ಞಾನದ ಶಕ್ತಿ ಹಾಗೂ ಸಹಕಾರದ ಪ್ರಯತ್ನದಿಂದ ದೇಶದ

ಅಭಿವೃದ್ಧಿಗಾಗಿ ಅರ್ಥಪೂರ್ಣ ಬದಲಾವಣೆಯನ್ನು ತರಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.

ನಿರ್ದಿಷ್ಟವಾಗಿ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ನೋಂದಣಿ ಮತ್ತು ಚುನಾವಣೆಯಲ್ಲಿ

ನಗರ ಮತ್ತು ಯುವ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದೂ ಸೇರಿದಂತೆ ಚುನಾವಣಾ

ಪ್ರಕ್ರಿಯೆಗಳ ನಿರ್ಣಾಯಕ ಸವಾಲುಗಳನ್ನು ಪರಿಹರಿಸುವ ಮೂಲ ಉದ್ದೇಶದಿಂದ “ಎಲೆಕ್ಥಾನ್ 2023” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Voters are the real lords of democracy Manoj Kumar Meena

‘ಎಲೆಕ್ಥಾನ್ 2023’  ರಲ್ಲಿ ಭಾಗಿಯಾಗಿರುವ ತಂಡಗಳು ಹಾಗೂ ವ್ಯಕ್ತಿಗಳ ಸಮರ್ಪಣೆ, ಬದ್ಧತೆ ಹಾಗೂ ಉತ್ಸಾಹದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ.

ದರ್ಭಂಗಾ, ನವದೆಹಲಿ, ನೊಯಿಡಾ, ಧಾರವಾಡ, ಭಿಲಾಯಿ, ಪಾಟ್ನ, ಇಂದೋರ್ ಸೇರಿದಂತೆ

ಭಾರತದ ಮೂಲೆಮೂಲೆಗಳಿಂದ ಆಗಮಿಸಿದ ಯುವಕರ ತಂಡಗಳು ಹಾಗೂ ವ್ಯಕ್ತಿಗಳ ಅಪ್ರತಿಮ ಬುದ್ಧಿಶಕ್ತಿ, ಸೃಜನಶೀಲತೆ ಹಾಗೂ ತಂಡಸ್ಪೂರ್ತಿಗೆ ಕಾರ್ಯಕ್ರಮ ಸಾಕ್ಷಿಯಾಯಿತು.

ಎಲೆಕ್ಥಾನ್ 2023 ರಲ್ಲಿ  ಭಾಗವಹಿಸಿದ ಯುವಕರ ತಂಡಗಳು ಹಾಗೂ ಐಐಎಸ್ಸಿ ಮತ್ತು ಪ್ರತಿಷ್ಠಿತ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳ ವಿಚಾರಗಳ ಮಿನಿಮಯ ಮಾಡಿಕೊಂಡರು.

ದೇಶದ ಚುನಾವಣಾ ಪ್ರಕ್ರಿಯೆಯನ್ನು ಉನ್ನತೀಕರಿಸಲು ಹಾಗೂ ತಂತ್ರಜ್ಞಾನ ಮತ್ತು ತಂಡಗಳ ಕೌಶಲ್ಯಗಳನ್ನು

ಬಳಸಿಕೊಂಡು ಸವಾಲುಗಳಿಗೆ ಹೊಸ ಮತ್ತು ಸೃಜನಶೀಲ ಪರಿಹಾರಗಳನ್ನು ಬಳಸಿಕೊಂಡು ಚುನಾವಣಾ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲು ಈ ವೇದಿಕೆ ಸಹಕಾರಿಯಾಗಿತ್ತು.

ಹ್ಯಾಕ್ಥಾನ್ ಅಭಿಯಾನಕ್ಕಾಗಿ 2,936 ತಂಡಗಳು ಮತ್ತು 4,399 ಜನತೆ ಭಾಗಿಯಾಗಿದ್ದು, ಒಟ್ಟು 493 ಆಲೋಚನೆಗಳು ಸಲ್ಲಿಕೆಯಾಗಿದ್ದವು.

ಇವುಗಳನ್ನು ಹಲವಾರು ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿ, ಸಂಭವನೀಯ 67 ತಂಡಗಳಲ್ಲಿ

ಏಪ್ರಿಲ್ 15 ಮತ್ತು 16 ರಂದು ಆಫ್ಲೈನ್ ಹ್ಯಾಕಥಾನ್ಗೆ ಬಲಿಷ್ಠ 40 ತಂಡಗಳು ಎಲೆಕ್ಥಾನ್ 2023 ರಲ್ಲಿ ಭಾಗವಹಿಸಿದ್ದವು.

Voters are the real lords of democracy Manoj Kumar Meena

ಉಜ್ವಲ್ ಘೋಷ್, (ಐಎಎಸ್) ಪಿ.ರಾಜೇಂದ್ರ ಚೋಳನ್, (ಐಎಎಸ್) ಮತ್ತು ಸೂರ್ಯ ಸೇನ್, (ಐಎಫ್ಎಸ್),

ನವರತನ ಕಠಾರಿಯಾ ಅವರ ಮಾರ್ಗದರ್ಶನದಲ್ಲಿ ಯುವಕರು ತಂಡಗಳಿಗೆ ಚುನಾವಣೆ ಕುರಿತು ತರಬೇತಿ ನೀಡಲಾಯಿತು.

ಹ್ಯಾಕಥ್ಯಾನ್ ತೀರ್ಪುಗಾರ ಸದಸ್ಯರಾದ ವಿ ಪೊನ್ನುರಾಜ್ ಐಎಎಸ್ ಸರ್ಕಾರದ ಕಾರ್ಯದರ್ಶಿಗಳು ಡಿಪಿಎಆರ್ (ಇ-ಆಡಳಿತ),

ಪ್ರೊ. ದೇಬಬ್ರತ ದಾಸ್ ನಿರ್ದೇಶಕರು, ಐಐಐಟಿ ಬೆಂಗಳೂರು ಮತ್ತು ಭಾರದ್ವಾಜ್ ಅಮೃತೂರ್, ಐಐಎಸ್ಸಿ ಬೆಂಗಳೂರು ಇವರು ತೀರ್ಪುಗಾರರಾಗಿದ್ದರು. 

ಎಲೆಕ್ಥಾನ್ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ ಇಂಟರ್ನ್ಯಾಷನಲ್

ಇನ್ಸಿಟ್ಯೂಟ್ ಆಫ್ ಇನ್ಪರ್ಮೇಷನ್ ಟೆಕ್ನಾಲಜಿಯ (ಐಐಐಟಿ) ಆಡಳಿತ ವರ್ಗವನ್ನು ಅಭಿನಂದಿಸಲಾಯಿತು.

ಕಡಿಮೆ ಅವಧಿಯಲ್ಲಿ ಕಾರ್ಯಕ್ರಮವನ್ನು ಆಗಮಾಡಿಸಿದ ಹ್ಯಾಕ್2ಸ್ಕಿಲ್ ತಂಡವನ್ನೂ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಪ್ರಶಸ್ತಿ ವಿಜೇತರ ವಿವರ

ಮೊದಲ ಪ್ರಶಸ್ತಿ :  1 ಲಕ್ಷ ರೂ

ದ್ವಿತೀಯ ಪ್ರಶಸ್ತಿ : 50,000 ರೂ.

ವಿಶೇಷ ಪ್ರಶಸ್ತಿ : 25,000 ರೂ.

ವಿಭಾಗ       ಮೊದಲ      ದ್ವಿತೀಯ     ವಿಶೇಷ

ಯುವಮತದಾರರ ನೋಂದಣಿ   ಫ್ಯೂಚರ್ ಫೋರ್ಸ್, ಬೆಂಗಳೂರುನಗರ ಮತ್ತು ಯುವಮತದಾರರ ಮತದಾನದ ಕಡೆ ಸೆಳೆಯುವಿಕೆ   ವಸೂಲಿ, ಚೆನ್ನ 1.ಹ್ಯಾಕ್ ಓವರ್ ಫ್ಲೋ, ಕೊಯಂಬತ್ತೂರು 2.ಬ್ರೈನ್ ವೋಲ್ಟ್ಸ್ , ನಾಸಿಕ್        ನೂಬ್ ಸ್ಮಾಷರ್ಸ್, ಬೆಂಗಳೂರು. ಮತದಾನದ ಪ್ರಮಾಣ ಹೆಚ್ಚಿಸುವಿಕೆಗೆ ಕ್ರಮ  ಟೆಕ್ ಮಿಲೆನಿಯಲ್ಸ್, ಚೆನ್ನೈ ವಿ ಹೈ ಟಿ , ಪುಣೆ   ದಿ ಸೆಫಾಲಜಿಸ್ಟ್ , ಬೆಂಗಳೂರು