News

ನಿಮ್ಮೂರಲ್ಲಿ ಮಳೆ ಯಾವಾಗ ಬರುತ್ತೆ? ಫೋನ್‌ನಲ್ಲಿ ತಿಳಿಯಲು ಹೀಗೆ ಮಾಡಿ

26 March, 2022 9:28 AM IST By: KJ Staff
Varuna Mitra Helpline

ಬೇಸಿಗೆಯಲ್ಲಿ ಜನರು ಈಗಲೇ ಸಂಜೆ ಆದಂತೆ ಅನಿಸುತ್ತಿದೆ ಎನ್ನುತ್ತಾ ಮನೆಯಿಂದ ಹೊರಬಂದು ಆಕಾಶ ನೋಡುತ್ತಾರೆ. ಆಕಾಶದಲ್ಲಿ ಕಪ್ಪು ಮೋಡ. ಆಗಲೋ ಈಗಲೋ ಎಂಬಂತೆ ಮಳೆ ಹನಿಯುವ ಸೂಚನೆ. ಇನ್ನು ಸೆಕೆ ಸೆಕೆ ಎನ್ನುತ್ತಾ ಫ್ಯಾನಿನ ಅಡಿಗೆ ಕುಳಿತುಕೊಂಡವರು ಅರೇ! ಏನಿದು? ಮಧ್ಯಾಹ್ನ ಬಿರು ಬೇಸಿಗೆಯಲ್ಲೂ ವಾತಾವರಣ ಇಷ್ಟು ಕಪ್ಪಾಗಿದೆ ಏಕೆ? ..

ಇದನ್ನೂ ಓದಿ:ಒಂದೇ ವಾರ 3 ಬಾರಿ Petrol ದರ ಏರಿಕೆ! ಎಲ್ಲೆಲ್ಲಿ, ಎಷ್ಟೆಷ್ಟು?

ಹೌದು ಇಂದು ಇಲ್ಲಿ ಮಳೆ ಆಗಬಹುದು ಹಾಗಾಗಿ ಒಣ ಹಾಕಿರುವ ಬಟ್ಟೆಗಳನ್ನ ಆದಷ್ಟು ಬೇಗ ಎತ್ತಿಡಬೇಕು ಎಂಬ ಚಿಂತೆ ಒಂದುಕಡೆಯಾದರೆ, ಇನ್ನೊಂದೆಡೆ ಸಾಕಷ್ಟು ತಿಂಗಳು ಕಾಲ ಹೊತ್ತ, ಬಿತ್ತಿದ ಕೃಷಿಕನಿಗೆ ಅಕಾಲಿಕ ಮಳೆ ತನ್ನ ಬೆಳೆಯನ್ನು ಕಸಿದುಕೊಳ್ಳುವ ಆತಂಕ.. ಇದೆಲ್ಲದರ ನಡುವೆ ಮಳೆ ಬರುತ್ತದೆಯೋ ಇಲ್ಲೊವೋ ಎಂಬ ಗೊಂದಲಗಳು ರೈತನನ್ನು ಹಿಂಡಿ ಹಿಪ್ಪೆಯಾಗಿಸಿರುತ್ತೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಆತನಿಗೆ ಏನು ತೋಚುವುದಿಲ್ಲ. ಕೈಕಟ್ಟಿ ಸುಮ್ಮನೆ ಕುಳಿತು ಬಿಡುತ್ತಾನೆ. ಇದಕ್ಕಾಗಿಯೇ ರೈತರ ಬೆಳವಣಿಗೆಗಾಗಿ ಒಂದು ವಿಶೇಷ ಆಪ್‌ ಅನ್ನು ರೂಪಿಸಿಲಾಗಿದೆ.


ಏನಿದು ವರುಣ ಮಿತ್ರ..,?
2010 ರಲ್ಲಿ ಪ್ರಾರಂಭವಾದ ವರುಣ ಮಿತ್ರ ಆಪ್‌ ರೈತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹವಾಮಾನ ಮುನ್ಸೂಚನೆಯನ್ನು ಒದಗಿಸುತ್ತದೆ . ಇದು ಮಳೆ, ತಾಪಮಾನ, ಆರ್ದ್ರತೆ, ಗಾಳಿಯ ವೇಗ ಮತ್ತು ಅದರ ದಿಕ್ಕನ್ನು ಮೂರು ದಿನಗಳ ಮುಂಚಿತವಾಗಿ ಮುನ್ಸೂಚನೆ ನೀಡುತ್ತದೆ. ಅದು ಮೊಬೈಲ್‌ನ ಮೂಲಕ. ಇದರಿಂದ ನಿಮ್ಮ ಊರಿನಲ್ಲಿ ಮಳೆ ಬರುತ್ತದೆಯೋ ಇಲ್ಲವೋ ಎಂದು ನೀವು ಯಾವುದೇ ಸಂದರ್ಭದಲ್ಲೂ ತಿಳಿದುಕೊಳ್ಳಬಹುದು. ಅದೂ ಉಚಿತವಾಗಿ.

ಇದನ್ನೂ ಓದಿ:Breaking News ಮತ್ತೊಂದು Bank ಮುಚ್ಚಲು RBI ನಿರ್ಧಾರ!

ಉದ್ದೇಶವೇನು?

ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಬಲಪಡಿಸಿಕೊಂಡು, ಕಾಲಕ್ಕೆ ತಕ್ಕಂತೆ ಸರಿಯಾದ ಕೃಷಿಯನ್ನು ರೂಪಿಸಿಕೊಳ್ಳಬೇಕು.ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳನ್ನು ಅರಿತುಕೊಂಡು ಕೃಷಿಗೆ ಹಾನಿ ಉಂಟುಮಾಡಬಾರದು ಎಂಬ ಉದ್ದೇಶದಿಂದ ವರುಣ ಮಿತ್ರ ಸಹಾಯವಾಣಿಯನ್ನು ರೂಪಿಸಲಾಗಿದೆ. ಇನ್ನು ರೈತರು ಯಾವುದೇ ಸಮಯದಲ್ಲಿ ಬೇಕಾದರೂ ವರುಣ ಮಿತ್ರ ಸಹಾಯವಾಣಿ ಸಂಪರ್ಕಸಿ ಮಳೆ ಮಾಹಿತಿ ಪಡೆದುಕೊಳ್ಳಬಹುದು.

ಉಚಿತ ಸಹಾಯವಾಣಿ
ಕರ್ನಾಟಕದ ಯಾವುದೇ ಜಿಲ್ಲೆಯ ಯಾವುದೇ ಊರಿನ ಜನರು ಸಹ ಒಂದೇ ಒಂದು ಫೋನ್ ಕರೆ ಮಾಡಿ ತಮ್ಮ ಊರಿನಲ್ಲಿ ಮಳೆ ಆಗಲಿದೆಯೇ? ಭರ್ಜರಿ ಮಳೆ ಆಗುವ ಸಾಧ್ಯತೆ ಇದೆಯೇ ಅಥವಾ ಸಾಧಾರಣ ಮಳೆಯೇ? ಮುಂದಿನ ಕೆಲವು ದಿನಗಳಲ್ಲಿ ವಾತಾವರಣ ಹೇಗಿರಲಿದೆ ಎಂದು ಉಚಿತವಾಗಿ ಕರ್ನಾಟಕ ಸರ್ಕಾರ ರೂಪಿಸಿರುವ ಉಚಿತ ಸಹಾಯವಾಣಿ ಸಂಖ್ಯೆ 9243345433 ಕ್ಕೆ ಫೋನ್ ಮಾಡಿ ಮಳೆಯ ಕುರಿತ ಮಾಹಿತಿ ಪಡೆಯಬಹುದಾಗಿದೆ.

ಇದನ್ನೂ ಓದಿ:ರೈತರಿಗೆ Good news BASF ತಂದಿದೆ “Vesnit Complete” ಸಸ್ಯನಾಶಕ !

ಇಂಟರ್ನೆಟ್ ಬೇಕಿಲ್ಲ
ಆ್ಯಂಡ್ರಾಯ್ಡ್ ಮೊಬೈಲ್ ಸ್ಮಾರ್ಟ್ಫೋನ್ಗಳಲ್ಲಿ ಮಳೆ ಮಾಹಿತಿ ಕೊಡುವ ಆ್ಯಪ್ಗಳಿವೆ. ಒಮ್ಮೊಮ್ಮೆ ಇಂಟರ್ನೆಟ್ ಕೈ ಕೊಟ್ಟಿರುತ್ತದೆ. ಇಂತಹ ಯಾವುದೇ ಪರಿಸ್ಥಿತಿಯಲ್ಲಿ ವರುಣ ಮಿತ್ರ ಸಹಾಯವಾಣಿ ನಮ್ಮ ಕೈಹಿಡಿಯಲಿದೆ.

ಯಾರ ಪರಿಶ್ರಮ ಈ ಸಹಾಯವಾಣಿ?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಲ್ (KSNDMC) ನ ಹವಾಮಾನ ಮೇಲ್ವಿಚಾರಣಾ ಕೇಂದ್ರಗಳ ವಿಸ್ತಾರವಾದ ಜಾಲ, ರೈತರು ಹೋಬಳಿ ಮಟ್ಟದಲ್ಲಿ ದತ್ತಾಂಶವನ್ನು ಸಂಗ್ರಹಿಸಿ ಈ ಮಾಹಿತಿಯನ್ನು ಉಚಿತವಾಗಿ ನೀಡುತ್ತದೆ.

ಇದನ್ನೂ ಓದಿ:Kisan Credit Card Big News! 3.20 ಲಕ್ಷ ಕೋಟಿ ಸಾಲ ಪಡೆಯಬಹುದು!

ಅಂದಹಾಗೆ 24*7 ಅಥವಾ ದಿನದ ಇಪ್ಪತ್ನಾಲ್ಕೂ ಗಂಟೆಯೂ ಈ ಸಹಾಯವಾಣಿಯು ಲಭ್ಯವಿದೆ. ಮಳೆ. ಹವಾಮಾನ, ಗಾಳಿಯ ವೇಗ ಎಷ್ಟಿದೆ? ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ? ಆಯಾ ಪ್ರದೇಶದ ಉಷ್ಣಾಂಶ ಎಷ್ಟಿದೆ? ಎಂಬ ಮಾಹಿತಿಗಳನ್ನು ಸಹ ರೈತರು ವರುಣ ಮಿತ್ರ ಸಹಾಯವಾಣಿಯ ಮೂಲಕ ಪಡೆದುಕೊಳ್ಳಬಹುದಾಗಿದೆ.