ರೈಲ್ವೆ ಹಳಿಯ ಮೇಲೆ ಎಮ್ಮೆ ಹಿಂಡು ಬಂದ ಹಿನ್ನೆಲೆ ಮುಂಬೈ ನಿಂದ ಗಾಂಧಿನಗರಕ್ಕೆ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಎಮ್ಮೆ ಹಿಂಡಿಗೆ ಗುದ್ದಿ ಅಪಘಾತಕ್ಕೀಡಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಪಶ್ಚಿಮ ರೈಲ್ವೇ ಪ್ರಕಾರ, ವತ್ವಾ ನಿಲ್ದಾಣ ಮತ್ತು ಮಣಿನಗರದ ನಡುವೆ ಮೊನ್ನೆ ಬೆಳಿಗ್ಗೆ 11.15 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಇಂಜಿನ್‌ನ ಮುಂಭಾಗದ ಭಾಗಕ್ಕೆ ಹಾನಿಯಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
"ಮುಂಬೈ ಸೆಂಟ್ರಲ್‌ನಿಂದ ಗುಜರಾತ್‌ನ ಗಾಂಧಿನಗರದ ನಡುವೆ ಓಡುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ವತ್ವಾ ನಿಲ್ದಾಣದಿಂದ ಮಣಿನಗರದ ನಡುವೆ ಬೆಳಿಗ್ಗೆ 11.15 ರ ಸುಮಾರಿಗೆ ಎಮ್ಮೆಗಳ ಹಿಂಡು ರೈಲು ಮಾರ್ಗಕ್ಕೆ ಬಂದ ನಂತರ ಅಪಘಾತಕ್ಕೀಡಾಯಿತು" ಎಂದು ಪಶ್ಚಿಮ ರೈಲ್ವೆಯ ಹಿರಿಯ ಪ್ರೊ, ಜೆಕೆ ಜಯಂತ್ ಹೇಳಿದ್ದಾರೆ.
ಇದನ್ನೂ ಓದಿರಿ: ರೈತರೇ ಗಮನಿಸಿ: ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಕೆಗೆ ಅ.20 ಕೊನೆ ದಿನ..
ಕಳೆದ ತಿಂಗಳು ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮಿ ಹೈಸ್ಪೀಡ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಈ ರೈಲು ಗಾಂಧಿನಗರದಿಂದ ಮುಂಬೈ ನಡುವೆ ಚಲಿಸುತ್ತದೆ ಮತ್ತು 'ಕವಚ' ತಂತ್ರಜ್ಞಾನವನ್ನು ಹೊಂದಿದ ಮೊದಲ ವಂದೇ ಭಾರತ್ ರೈಲು ಆಗಿದೆ. ಇದು ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಯಾಗಿದ್ದು, ಎರಡು ರೈಲುಗಳು ಡಿಕ್ಕಿಯಾಗುವುದನ್ನು ತಡೆಯುತ್ತದೆ.
IFFCO ನ್ಯಾನೋ ಯೂರಿಯಾ ಲಿಕ್ವಿಡ್‌ನ ಪ್ರಯೋಜನಗಳು ಮತ್ತು ಮುನ್ನೆಚ್ಚರಿಕೆಗಳು
ಈ ರೈಲಿನ ವಿಶೇಷತೆ ಏನು..?
ಚೆನ್ನೈನ ರೈಲ್ವೆ ಕೋಚಿಂಗ್ ಫ್ಯಾಕ್ಟರಿಯಲ್ಲಿ ಈ ರೈಲುಗಳು ತಯಾರಾಗುತ್ತಿದ್ದು, ಅಧಿಕ ವೇಗ, ಸೇಫ್ಟಿ, ಹಾಗೂ ಉತ್ತಮ ಸೇವೆಗಳೆ ಈ ರೈಲಿನ ಸ್ಪೇಷಾಲಿಟಿ ಆಗಿದೆ.. ಎಲ್ಲಾ ಕೋಚ್‌ಗಳಲ್ಲೂ ಆಟೋ ಮ್ಯಾಟಿಕ್ ಡೋರ್‌ಗಳು ಇರುತ್ತವೆ. ವೇಗದಲ್ಲಿ ಸಂಚರಿಸುತ್ತವೆ. ಶತಾಬ್ದಿಯಷ್ಟೇ ವೇಗವಾಗಿ ಸಂಚರಿಸುತ್ತವಾದರೂ ಪ್ರಯಾಣದ ಅನುಭವ ಆಹ್ವಾದಕರವಾಗಿರುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಅವಧಿ ಶೇ. 45ರಷ್ಟು ಕಡಿತ ಆಗುತ್ತದೆ. ಜಿಪಿಎಸ್ ಆಧಾರಿತ ಆಡಿಯೋ ವಿಶ್ಯುಯಲ್ಸ್ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಇರುತ್ತದೆ. ಸೀಟ್‌ಗಳು ಆರಾಮದಾಯವಾಗಿ ಇರುತ್ತವೆ. ಟಾಯ್ಲೆಟ್‌ಗಳು ಬಯೋ ವ್ಯಾಕ್ಯೂಮ್ ತಂತ್ರಜ್ಞಾನ ಆಧಾರಿತವಾಗಿರುತ್ತವೆ. ಪ್ರತಿ ಸೀಟ್‌ಗೂ ಪ್ರತ್ಯೇಕ ಲೈಟ್ ವ್ಯವಸ್ಥೆ ಇರುತ್ತದೆ. ವಂದೇ ಭಾರತ್ ರೈಲು ಗರಿಷ್ಠ 160 ಕಿ. ಮೀ.