News

45 ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಲಸಿಕೆ

01 April, 2021 1:01 PM IST By:
covid 19 vaccine

ದೇಶದ ಹಲವು ರಾಜ್ಯಗಳಲ್ಲಿ ಕೋರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಏರುತ್ತಿರುವುದರಿಂದ ಏಪ್ರೀಲ್ 1 ರಿಂದ 45 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೋರೋನಾ ಲಸಿಕೆ ನೀಡಿಕೆ ಆರಂಭವಾಗಿದೆ.

ದೇಶಾದ್ಯಂತ ಕೊರೊನಾ ಸೋಂಕು ಸಂಖ್ಯೆ ನಿತ್ಯ. ಏರಿಕೆಯಾಗುತ್ತಿದ್ದರಿಂದ ಇಂದಿನಿಂದ 45 ವರ್ಷ ದಾಟಿದ ಎಲ್ಲಾ ನಾಗರಿಕರಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದೆ.
ದೇಶದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ವಾರಗಳಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮಾರ್ಚ್ 31 ರವರೆಗೆ ಆರೋಗ್ಯ ಸಿಬ್ಬಂದಿಗಳು, ಕೊರೋನಾ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷ ಮೇಲ್ಪಟ್ಟ ಪೂರ್ವರೋಗಪೀಡಿತರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿತ್ತು. ಆದರೆ ಗುರುವಾರದಿಂದ 1, 1977 ಕ್ಕಿಂತ ಮುಂಚೆ ಜನಿಸಿದ ಪ್ರತಿಯೊಬ್ಬರೂ 45 ವರ್ಷ ಮೇಲ್ಪಟ್ಟ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳು ಅದರಲ್ಲೂ ಜಿಲ್ಲಾಡಳಿತಗಳು ಎರಡು ವಾರಗಳ ಒಳಗೆ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈಗಾಗಲೇ ದೇಶದಲ್ಲಿ ಎರಡೂ ಹಂತದ ಲಸಿಕೆ ನೀಡಿಕೆ ಅಭಿಯಾನ ಪ್ರಗತಿಯಲ್ಲಿದ್ದು ಅದರ ಜೊತೆಗೆ ಇಂದಿನಿಂದ ಮತ್ತೊಂದು ಸುತ್ತಿನ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದೆ.
ಜನವರಿ 16 ರಂದು ದೇಶಾದ್ಯಂತ ಲಸಿಕಾ ಅಭಿಯಾನ ಆರಂಭವಾಗಿತ್ತು. ನಂತರ ಫೆಬ್ರವರಿ 2 ರಿಂದ ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡಲಾಗಿತ್ತು. ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಹೆಚ್ಚಿದ್ದು ಆರೋಗ್ಯ ಸಮಸ್ಯೆ ಇದ್ದವರಿಗೆ ಲಸಿಕೆ ಹಾಕಲಾಗುತ್ತಿದೆ.
ಇಂದಿನಿಂದ 45 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ 45 ವರ್ಷಕ್ಕಿಂತ ಮೇಲ್ಪಟ್ಟವರು ಹೆಸರು ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ನೀತಿ ಆಯೋಗದ ಡಾ ವಿ.ಕೆ. ಪಾಲ್ ಪ್ರತಿಕ್ರಿಯಿಸಿ, ಪ್ 45 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಹೆಚ್ಚು ಮಾರಕವಾಗಿದೆ. ಹೀಗಾಗಿ ಈ ವಯೋಮಾನದವರಿಗೆ ಮೊದಲು ಹೆಚ್ಚಿನ ಪ್ರಮಾಣದ ಲಸಿಕೆ ನೀಡಬೇಕಾಗಿದೆ.ಈ ಹಿನ್ನೆಲೆಯಲ್ಲಿ ಕೊರೊನಾ ಎರಡನೇ ಅಲೆ ಶುರು ಆಗುತ್ತಿದ್ದಂತೆ ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ

50 ಲಕ್ಷ ಲಸಿಕೆ ನೀಡಿಕೆ ಗುರಿ:

ದೇಶದಲ್ಲಿ ದಿನಕ್ಕೆ 20 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಈ ಪ್ರಮಾಣವನ್ನು ದಿನಕ್ಕೆ ೫೦ ಲಕ್ಷ ಜನರಿಗೆ ಚುಚ್ಚುಮದ್ದು ನೀಡುವುದು ಹೊಸ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಲಸಿಕೆ ಪಡೆಯುವ ಫಲಾನುಭವಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಕೋವಿನ್ ವೇದಿಕೆ ಅನ್ನು ದಿನಕ್ಕೆ ಒಂದು ಕೋಟಿ ನೋಂದಣಿಗಳನ್ನು ಸ್ವೀಕರಿಸುವಂತೆ ನವೀಕರಿಸಲಾಗಿದೆ.ಸಾವಿನ ಅಪಾಯದಲ್ಲಿರುವ ಜನರನ್ನು ಗುರುತಿಸುವುದು. ಆದ್ದರಿಂದ, ಲಸಿಕೆ ಹಾಕಲು ಸರ್ಕಾರವು ಆದ್ಯತೆಯ ಮೇರೆಗೆ ಪ್ರಜ್ಞಾಪೂರ್ವಕ ಕ್ರಮವನ್ನು ತೆಗೆದುಕೊಂಡಿದೆ,”ಎಂದು ನೀತಿ ಆಯೋದ ಡಾ. ಪಾಲ್ ಹೇಳಿದ್ದಾರೆ.