News

ಒಂದು ದಿನದ ಮಟ್ಟಿಗೆ ಸಿಎಂ ಆಗಲಿದ್ದಾಳೆ ಉತ್ತರಾಖಂಡ ಯುವತಿ

23 January, 2021 6:30 AM IST By:

ಒಂದು ರಾಜ್ಯದ ಸಿಎಂ ಆಗಬೇಕು ಎಂದರೆ ಹಾಗೇನಾ?ಅದಕ್ಕಾಗಿ ವಿಧಾನಸಭೆ ಚುನಾವಣೆಗೆ ನಿಲ್ಲಬೇಕು, ಗೆಲ್ಲಬೇಕು,ಪಕ್ಷದಲ್ಲಿ ಒಳ್ಳೆ ಹೆಸರಿನೊಂದಿಗೆ ಜನ ಬಲ ಹೊಂದಿರಬೇಕು, ಆಗ ನಾವು ಸಿಎಂ ಆಗಬಹುದು ಆದರೆ ಇಲ್ಲಿ ಕಥೆಯೇ ಬೇರೆ,ಅದು ಏನೆಂದರೆ ಉತ್ತರಾಖಂಡ ಯುವತಿಯೊಬ್ಬಳು ಒಂದು ದಿನದ ಮಟ್ಟಿಗೆ ಸಿಎಂ ಆಗುವ ಅವಕಾಶವನ್ನು ಪಡೆದಿದ್ದಾಳೆ

ಜನವರಿ 24 ರಂದು ರಾಷ್ಟೀಯ ಬಾಲಕಿಯರ ದಿನಾಚರಣೆಯ ಅಂಗವಾಗಿ ಹರಿದ್ವಾರ ಮೂಲದ ಯುವತಿ ಸೃಷ್ಟಿ ಗೋಸ್ವಾಮಿ ಒಂದು ದಿನ ಮುಖ್ಯಮಂತ್ರಿಯಾಗಲಿದ್ದಾರೆ.ತ್ರಿವೇಂದರ್ ಸಿಂಗ್ ರಾವತ್ ಸರ್ಕಾರ ನಡೆಸುತ್ತಿರುವ ವಿವಿಧ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ ಹಾಗೂ ರಾಜಧಾನಿ - ಗೈರ್‌ಸೈನ್‌ನಿಂದ ಆಡಳಿತ ನಡೆಸಲಿದ್ದಾರೆ

ಸೃಷ್ಟಿ ಗೋಸ್ವಾಮಿ ಬಿಎಸ್ಸಿ. ಅಗ್ರಿಕಲ್ಚರ್ ವಿದ್ಯಾರ್ಥಿಯಾಗಿದ್ದು ಪ್ರಸ್ತುತ 7 ನೆ ಸೆಮಿಸ್ಟರ್ ವ್ಯಾಸಂಗ ಮಾಡುತಿದ್ದರೆ.ಅವರು ಹರಿದ್ವಾರ ಜಿಲ್ಲೆಯ ದೌಲತ್‌ಪುರ ಗ್ರಾಮದ ನಿವಾಸಿ. ಆಕೆಯ ತಂದೆ ಪ್ರವೀಣ್ ಅವರು ಉದ್ಯಮಿಯಾಗಿದ್ದಾರೆ ಹಾಗೂ ತಾಯಿ ಸುಧಾ ಗೋಸ್ವಾಮಿ ಗೃಹಿಣಿಯಾಗಿದ್ದಾರೆ

ಇವರ ಹಿನ್ನಲೆಯನ್ನು ನೋಡಿದಾಗ ಅವರು ಹಿಂದೆ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಹಾಗೂ ಮೇ 2018 ರಲ್ಲಿ ಅವರು ಉತ್ತರಾಖಂಡ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾದರೂ.