News

ಕ್ಯಾನ್ಸಲ್‌ ಮಾಡಿದ ಟ್ರೈನ್‌ ಟಿಕೆಟ್‌ ಹಣ ಬೇಗನೆ ಮರುಪಾವತಿಯಾಗಲು ಈ ಟ್ರಿಕ್‌ ಬಳಸಿ

13 December, 2022 10:08 AM IST By: Maltesh

ಇಂದಿನ ಕಾಲದಲ್ಲಿ ಕಾರು, ಬೈಕು, ಬಸ್ಸು, ರೈಲು, ವಿಮಾನ ಹೀಗೆ ಹಲವಾರು ಪ್ರಯಾಣ ಸಾಧನಗಳು ಲಭ್ಯವಿವೆ. ಜನರು ತಮ್ಮ ಪ್ರಯಾಣವನ್ನು ಅಗ್ಗದ, ಆರಾಮದಾಯಕ ಮತ್ತು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಇದರಿಂದಲೇ ಜನರ ಮೊದಲ ಆಯ್ಕೆ ರೈಲಿನಲ್ಲಿ ಪ್ರಯಾಣ ಮಾಡುವುದು.

ಕಡಿಮೆ ಬೆಲೆಯ ಜೊತೆಗೆ ಆರಾಮದಾಯಕ ಪ್ರಯಾಣದಿಂದಾಗಿ ದೇಶದ ಲಕ್ಷಾಂತರ ಜನರು ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಸಲು, ಜನರು ತಮ್ಮ ರೈಲು ಟಿಕೆಟ್‌ಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಬುಕ್ ಮಾಡುತ್ತಾರೆ. ಮತ್ತು ನಂತರ ಮಾತ್ರ ಅವರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇನ್ನು ಕೋವಿಡ್‌ ನಂತರದ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡುವ ಪದ್ಧತಿಯಲ್ಲಿ ಏರಿಕೆ ಕಂಡಿದೆ.

ಕೆಲವೊಮ್ಮೆ ಟ್ರೈನ್‌ ಟಿಕೆಟ್‌ಗಳನ್ನು ಬುಕ್ ಮಾಡಿದ ನಂತರವೂ ಜನರು ಹಲವಾರು ಕಾರಣಗಳಿಂದ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಕನ್ಫರ್ಮ್ ಟಿಕೆಟ್ ಅನ್ನು ಸಹ ಕ್ಯಾನ್ಸಲ್‌ ಮಾಡ ಬೇಕಾಗುತ್ತದೆ. ಆದರೆ ಟಿಕೆಟ್ ರದ್ದತಿ ನಂತರ ಪ್ರಯಾಣಿಕರು ಮರುಪಾವತಿ ಸಮಸ್ಯೆ ಎದುರಿಸುತ್ತಾರೆ.

ಟಿಕೆಟ್ ಕ್ಯಾನ್ಸಲ್‌ ಮಾಡಿದ ನಂತರ ನೀವು ಬೇಗನೆ ರೀಫಂಡ್‌ ಪಡೆಯಲು ಬಯಸಿದರೆ, ಅದರಿಂದ ನೀವು ಕೆಲವು ವಿಷಯಗಳನ್ನು ತಲೆಯಲ್ಲಟ್ಟುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ರೈಲು ಟಿಕೆಟ್ ರದ್ದುಗೊಳಿಸಿದ ನಂತರ ತ್ವರಿತವಾಗಿ ಮರುಪಾವತಿ ಮಾಡುವುದು ಹೇಗೆ ಎಂದು ತಿಳಿಯೋಣ.

ನೀವು ಈಗಾಗಲೇ ರೈಲು ಟಿಕೆಟ್ ಅನ್ನು ಬುಕ್ ಮಾಡಿದ್ದರೆ  ಕೆಲ ಕಾರಣಗಳಿಗಾಗಿ ನೀವು ಅದನ್ನು ರದ್ದುಗೊಳಿಸಬೇಕಾದರೆ, IRCTC ಪ್ರಕಾರ i-pa ಮೂಲಕ ರದ್ದುಪಡಿಸಿದ ಟಿಕೆಟ್‌ನ ಹಣ ವಾಪಸ್ಸಾತಿಗಾಗಿ ನೀವು ಕಾಯುವ ಅಗತ್ಯ ಇರುವುದಿಲ್ಲ.

ನೀವು ಟಿಕೆಟ್‌ನ ಹಣವನ್ನು ಮರುಪಾವತಿಯನ್ನಾಗಿ ಪಡೆಯಲು ಬಯಸಿದರೆ, ನೀವು ನಿಮ್ಮ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಅಥವಾ UPI ವಿವರಗಳನ್ನು i-pay ಗೇಟ್‌ವೇನಲ್ಲಿ ನೋಂದಾಯಿಸಬೇಕು. ಆ ಸಂದರ್ಭದಲ್ಲಿ, ನೀವು ನಿಮ್ಮ ರೈಲು ಟಿಕೆಟ್ ಅನ್ನು ಬುಕ್ ಮಾಡುವಾಗ ನೀವು ಮತ್ತೆ ಯಾವುದೇ ಪಾವತಿ ವಿವರಗಳನ್ನು ಇಲ್ಲಿ ನಮೂದಿಸುವ ಅಗತ್ಯವಿಲ್ಲ.

ನಿಮ್ಮ ಅಕೌಂಟ್‌ಗೆ ಜಮಾ ಆಗುತ್ತದೆ ಹಣ

ಈಗ ನಿಮ್ಮ ಬ್ಯಾಂಕ್ ಖಾತೆ ವಿವರಗಳು i-pay ಗೇಟ್‌ವೇಯಲ್ಲಿ ಇರುತ್ತದೆ. ಇದೀಗ ನೀವು  ಟ್ರೈನ್‌ ಟಿಕೆಟ್ ಕ್ಯಾನ್ಸಲ್‌ ಮಾಡಿದರೆ, ನಿಮ್ಮ ಮರುಪಾವತಿಯನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕಳಿಸಲಾಗುತ್ತದೆ. ಬೇರೆವಿಧಾನಗಳಿಗೆ ಹೋಲಿಸಿದರೆ ಇಲ್ಲಿಂದ ಮರುಪಾವತಿ ಪಡೆಯಲು ಬಹಳ ಕಡಿಮೆ ಸಮಯ ಹಿಡಿಯುತ್ತದೆ.