News

GC Chandrasekhar ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಲಿಪಿ ಬಳಸಿ: ಜಿ.ಸಿ ಚಂದ್ರಶೇಖರ್‌

08 June, 2023 3:10 PM IST By: Hitesh
Use of Kannada script in Karnataka Government Emblem: GC Chandrasekhar

ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಲಿಪಿಯನ್ನು ಬಳಸುವ ಕುರಿತು ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್‌ ಅವರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ದೇಶದ ಬಹುತೇಕ ರಾಜ್ಯಗಳಂತೆಯೇ ಕರ್ನಾಟಕ ಸರ್ಕಾರವು ವಿಶಿಷ್ಟ ಹಾಗೂ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಲಾಂಛನವನ್ನು ಹೊಂದಿದ್ದು,

ಕರ್ನಾಟಕ ಸರ್ಕಾರದ ಲಾಂಛನವನ್ನು ಭಾರತದ ಲಾಂಛನದಲ್ಲಿರುವ ಅಶೋಕ ಸ್ಥಂಭದ ಭಾಗ ಮತ್ತು ಮೈಸೂರು ರಾಜ್ಯದ ಲಾಂಛನದ ಭಾಗವನ್ನು

ಒಗ್ಗೂಡಿಸಿ ರೂಪಿಸಲಾಗಿದೆ. ನಂತರ ಸತ್ಯಮೇವ ಜಯತೆ ವಾಕ್ಯ ದೇವನಾಗರಿ ಲಿಪಿಯಲ್ಲಿದೆ. ನಮ್ಮ ಕರ್ನಾಟಕ ಸರ್ಕಾರದ ಲಾಂಛನದಲ್ಲಿ

ಎಲ್ಲಿಯೂ ಕೂಡ ಕನ್ನಡದ ಲಿಪಿಯನ್ನು ಉಪಯೋಗಿಸಿಲ್ಲ. ಅದೇ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ

ಮತ್ತು ತೆಲಂಗಾಣ ಲಾಂಛನಗಳಲ್ಲಿ ಅವರ ರಾಜ್ಯ ಭಾಷೆಗಳ ಉಪಯೋಗ ಮಾಡಿದ್ದಾರೆ.

ಇದೇ ರೀತಿ ಕರ್ನಾಟಕ ಸರ್ಕಾರದ ಲಾಂಛನದಲ್ಲೂ ಕನ್ನಡ ಲಿಪಿ ಇರಬೇಕು ಎಂದು ವಿವಿಧ ಕನ್ನಡಪರ ಹೋರಾಟಗಾರರು

ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಕನ್ನಡ ಲಿಪಿಯಲ್ಲಿ

ಸಿರಿಗನ್ನಡಂ ಗೆಲ್ಗೆ ಎಂದು ಉಪಯೋಗಿಸುವುದು ಸೂಕ್ತ ಎಂದು ಹೇಳಿದ್ದಾರೆ.

ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ತಜ್ಞರ ಸಮಿತಿಯನ್ನು ರಚಿಸುವಂತೆಯೂ ಕೋರಿದ್ದಾರೆ.

ಕುರಿತು ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ದೇಶದ ಬಹುತೇಕ ರಾಜ್ಯಗಳಂತೆಯೇ ಕರ್ನಾಟಕ ಸರ್ಕಾರವು ವಿಶಿಷ್ಟ ಹಾಗೂ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಲಾಂಛನವನ್ನು ಹೊಂದಿದ್ದು,

ಕರ್ನಾಟಕ ಸರ್ಕಾರದ ಲಾಂಛನವನ್ನು ಭಾರತದ ಲಾಂಛನದಲ್ಲಿರುವ ಅಶೋಕ

ಸ್ಥಂಭದ ಭಾಗ ಮತ್ತು ಮೈಸೂರು ರಾಜ್ಯದ ಲಾಂಛನದ ಭಾಗವನ್ನು ಒಗ್ಗೂಡಿಸಿ ರೂಪಿಸಲಾಗಿದೆ.

ನಂತರ ಸತ್ಯಮೇವ ಜಯತೆ ವಾಕ್ಯ ದೇವನಾಗರಿ ಲಿಪಿಯಲ್ಲಿದೆ. ನಮ್ಮ ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಎಲ್ಲಿಯೂ ಕೂಡ ಕನ್ನಡದ

ಲಿಪಿಯನ್ನು ಉಪಯೋಗಿಸಿಲ್ಲ. ಅದೇ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಲಾಂಛನಗಳಲ್ಲಿ

ಅವರ ರಾಜ್ಯ ಭಾಷೆಗಳ ಉಪಯೋಗ ಮಾಡಿದ್ದಾರೆ. ಇದೇ ರೀತಿ ಕರ್ನಾಟಕ ಸರ್ಕಾರದ ಲಾಂಛನದಲ್ಲೂ ಕನ್ನಡ ಲಿಪಿ ಇರಬೇಕು

ಎಂದು ವಿವಿಧ ಕನ್ನಡಪರ ಹೋರಾಟಗಾರರು ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ ಕನ್ನಡ ಲಿಪಿಯಲ್ಲಿ ಸಿರಿಗನ್ನಡಂ ಗೆಲ್ಗೆ ಎಂದು ಉಪಯೋಗಿಸುವುದು ಸೂಕ್ತ ಎಂದು ಹೇಳಿದ್ದಾರೆ.

ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ತಜ್ಞರ ಸಮಿತಿಯನ್ನು ರಚಿಸುವಂತೆಯೂ ಕೋರಿದ್ದಾರೆ. 

Image courtesy: @ GCChandrashekharMP