News

ಹಸುವಿನ ಸಗಣಿಯಿಂದ ತಯಾರಾಗಿದೆ ಸ್ವದೇಸಿ ಖಾದಿ ಪ್ರಾಕೃತಿಕ್ (ವೇದಿಕ್) ಬಣ್ಣ

06 June, 2021 5:12 PM IST By: KJ Staff

ಬಣ್ಣ ಎಂದರೆ ಯಾರಿಗೆ  ತಾನೆ ಇಷ್ಟವಿಲ್ಲ. ಕೆಲವರಿಗೆ ಕೆಂಪು ಬಣ್ಣ ಕಂಡರೆ ಕಣ್ಣಿಗೆ ತಂಪೆನಿಸಿದರೆ, ಮತ್ತೆ ಕೆಲವರಿಗೆ  ಹಳದಿ ಕಂಡರೆ ಉಲ್ಲಾಸವಾಗುತ್ತದೆ. ಇನ್ನೂ ಕೆಲವರು ಹಸಿರು ಬಣ್ಣ ನೋಡಿ ಮೈಮರೆತುಬಿಡುತ್ತಾರೆ. ಹೀಗೆ ಒಬ್ಬೊಬ್ಬರಿಗೂ ಒಂದೊAದು ಒಲವಿನ ಬಣ್ಣಗಳಿರುತ್ತವೆ. ಇಂತಹ ಬಣ್ಣ ಇತ್ತೀಚೆಗೆ ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿರುವುದು ವಿಷಾದದ ಸಂಗತಿ. ಆದರೆ, ಈಗ ಒಂದು ಪರಿಸರ ಸ್ನೇಹಿ ಬಣ್ಣದ ಬಗ್ಗೆ ನಿಮಗೆ ಹೇಳುವುದಿದೆ. ಅದರ ಹೆಸರು ಖಾದಿ ಪ್ರಾಕೃತಿಕ್ (ವೇದಿಕ್).

ನಿಸರ್ಗದ ಮಡಿಲಲ್ಲಿ ಪ್ರಾಕೃತಿಕವಾಗಿ ಮೂಡಿರುವ ಬಣ್ಣಗಳಿಂದ ಯಾರಿಗೂ ಯಾವುದೇ ಹಾನಿಯಿಲ್ಲ. ಗಿಡಮರ ಬಳ್ಳಿಗಳ ಎಲೆಗಳ ಹಸಿರು, ಜಗವ ಬೆಳಗುವ ಭಾಸ್ಕರ ಬಾನಂಚಿನಿAದ ಉದಯಿಸುವಾಗ ಮತ್ತೆ ಅದೇ ಬಾನಂಚಿನ ಮೂಲಕ ನಿರ್ಗಮಿಸುವಾಗ ಮೈದುಂಬಿಕೊಳ್ಳುವ ಕೆಂಪು, ಸೂರ್ಯಕಾಂತಿ ದಳಗಳ ಹಳದಿ, ನದಿ ನೀರಿನ ನೀಲಿ... ಹೀಗೆ ಹೂವು, ಹಣ್ಣು, ಪ್ರಾಣಿ, ಕ್ರಿಮಿ, ಕೀಟಗಳೆಲ್ಲವೂ ಸೇರಿ ಪ್ರಕೃತಿಯ ಮಡಿಲಲ್ಲಿ ನೂರಾರು ಬಣ್ಣಗಳು. ಇವೆಲ್ಲವೂ ನೈಸರ್ಗಿಕ ಬಣ್ಣಗಳು. ಇವುಗಳಿಂದ ಯಾರೊಬ್ಬರಿಗೂ, ಏನೊಂದೂ ತೊಂದರೆಯಿಲ್ಲ. ಆದರೆ,

ಬಣ್ಣದಿಂದ ಕ್ಯಾನ್ಸರ್!

ನಾವೆಲ್ಲರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಗಳಿಗೆ ಲೇಪಿಸುವ ಬಣ್ಣ ನಮಗೆ ಕ್ಯಾನ್ಸರ್ ತಂದೊಡ್ಡುತ್ತದೆ. ಭಾರತ ಸೇರಿ ಜಗತ್ತಿನಾದ್ಯಂತ ಹಲವು ವಿಜ್ಞಾನಿಗಳು ನಡೆಸಿದ ಸಂಶೋಧನೆಗಳಿAದ ಈ ಅಂಶ ಸಾಬೀತಾಗಿದೆ. ನಾವೇನೋ ಮನೆಯ ಅಂದ ಹೆಚ್ಚುತ್ತದೆ ಎಂದು ಮಾರುಕಟ್ಟೆಯಲ್ಲಿ ಸಿಗುವ ಅತ್ಯಂತ ದುಬಾರಿ ಬಣ್ಣವನ್ನೇ ತಂದು ಗೋಡೆಗಳಿಗೆ ಹಚ್ಚಿಸುತ್ತೇವೆ. ಆದರೆ ಅದೇ ಬಣ್ಣದಲ್ಲಿರುವ ಹಾನಿಕಾರಕ ರಾಸಾಯಯನಿಕಗಳು ನಮ್ಮನ್ನು ಕ್ಯಾನ್ಸರ್ ರೀತಿಯ ಮಾರಕ ರೋಗದ ಸುಳಿಗೆ ನೂಕುತ್ತವೆ ಎಂಬುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಆದರೆ, ಇಷ್ಟು ದಿನ ಪರ್ಯಾಯ ಆಯ್ಕೆಗಳಿಲ್ಲದ ಕಾರಣ ಅನಿವಾರ್ಯವಾಗಿ ಅದೇ ಹಾನಿಕಾರಕ ಬಣ್ಣಗಳನ್ನು ಬಳಸಿದ್ದೇವೆ. ಇನ್ನುಮುಂದೆ ಹಾಗಾಗುವುದಿಲ್ಲ. ಏಕೆಂದರೆ;

ಹಸು ಸಗಣಿಯಲ್ಲಿ ತಯಾರಾಗಿದೆ ಬಣ್ಣ!

ಹಸುವಿನ ಸಗಣಿ ಬಳಸಿಕೊಂಡು ನಿಸರ್ಗ ಸ್ನೇಹಿ ಹಾಗೂ ಜನರ ಆರೋಗ್ಯ ಸ್ನೇಹಿ ಬಣ್ಣ ತಯಾರಿಸಲಾಗಿದೆ. ಈ ಬಣ್ಣವನ್ನು ಹೊರತಂದಿರುವುದು ಭಾರತ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ. ಹೌದು, ಇದೇ ವರ್ಷ, ಅಂದರೆ 2021ರ ಜನವರಿ ತಿಂಗಳಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಖಾದಿ ಇಂಡಿಯಾದ ‘ಪ್ರಾಕೃತಿಕ್’ (ವೇದಿಕ್) ಎಂಬ ಬಣ್ಣದ ಬ್ರಾಂಡ್ ಬಿಡುಗಡೆ ಮಾಡಿದ್ದರು. ಆದರೆ, ಕೊರೊನಾ 2ನೇ ಅಲೆಯ ಆರ್ಭಟದ ನಡುವೆ ಈ ಪರಿಸರ ಸ್ನೇಹಿ ಬಣ್ಣ ಬಿಡುಗಡೆಯಾದ ವಿಷಯ ಅಷ್ಟಾಗಿ ಯಾರನ್ನೂ ತಲುಪಲೇ ಇಲ್ಲ. ಹೀಗಾಗಿ ಇದರ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ.

ವಿಶೇಷತೆ ಏನು?

ಖಾದಿ ಪ್ರಾಕೃತಿಕ್ ಪೇಂಟ್ ಒಂದು ಪರಿಸರ ಸ್ನೇಹಿ ಉತ್ಪನ್ನವಾಗಿದ್ದು, ವಿಷ ರಹಿತ, ಬ್ಯಾಕ್ಟೀರಿಯಾ, ಫಂಗಸ್ ವಿರೋಧಿ ಗುಣಗಳನ್ನು ಹೊಂದಿದೆ. ಗೋಡೆಗಳಿಗೆ ಹಚ್ಚಿದ ಕೇವಲ 4 ಗಂಟೆಗಳಲ್ಲಿ ಬಣ್ಣ ಸಂಪೂರ್ಣವಾಗಿ ಒಣಗುವ ಇದು, ವಾಸನೆ ಹೊಂದಿಲ್ಲ. ಪಾದರಸ, ಕ್ರೋಮಿಯಂ, ಆರ್ಸೆನಿಕ್, ಕ್ಯಾಡ್ಮಿಯಂ ಸೇರಿ ಯಾವುದೇ ರೀತಿಯ ಲೋಹಗಳು, ಹಾನಿಕಾರಕ ರಾಸಾಯನಿಕಗಳನ್ನು ಇದರಲ್ಲಿ ಬಳಸಲಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಗೋಡೆ ಮೇಲೆ ಕಲೆ ಆಯಿತೆಂದರೆ ಅದದನ್ನು ತೊಳೆಯಬಹುದು. ಹೀಗೆ ತೊಳೆದಾಗ ಬಣ್ಣ ಮಾಸುವುದಿಲ್ಲ. ಸಗಣಿಯಿಂದ ತಯಾರಿಸಿರುವ ಪೇಂಟ್, ಸಾಮಾನ್ಯ ಪೇಂಟ್ ರೀತಿಯೇ ಕಾಣಿಸಲಿದೆ. ವೆಚ್ಚದ ವಿಚಾರಕ್ಕೆ ಬಂದರೆ ಸಾಮಾನ್ಯ ಪೇಂಟಿನ ಅರ್ಧದಷ್ಟು ಬೆಲೆಗೆ ಇದು ಸಿಗಲಿದ್ದು, ರಾಷ್ಟಿçÃಯ ಹಾಗೂ ಅಂತಾರಾಷ್ಟಿçÃಯ ದರ್ಜೆಗೆ ಅನುಗುಣವಾಗಿ ತಯಾತಾಗಿದೆ. 100 ಕೆ.ಜಿ ಸಗಣಿಯಿಂದ 40 ಕೆ.ಜಿ ಬಣ್ಣ ಉತ್ಪಾದನೆಯಾಗುತ್ತದೆ. ಖಾದಿ ಪ್ರಾಕೃತಿಕ್ ಬಣ್ಣವು ಡಿಸ್ಟೆಂಪರ್ ಮತ್ತು ಎಮಲ್ಷನ್ ಎಂಬ ಎರಡು ವಿಧಗಳಲ್ಲಿ ಲಭ್ಯವಿದ್ದು, ಎರಡೂ ವಿಧಗಳನ್ನು ಮುಂಬೈನ ನ್ಯಾಷನಲ್ ಟೆಸ್ಟ್ ಹೌಸ್, ನವದೆಹಲಿಯ ಶ್ರೀ ರಾಮ್ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟಿçಯಲ್ ರೀಸರ್ಚ್ ಹಾಗೂ ಘಾಜಿಯಾಬಾದ್‌ನ ನ್ಯಾಷನಲ್ ಟೆಸ್ಟ್ ಹೌಸ್‌ನಲ್ಲಿ ಪರೀಕ್ಷೆ ಮಾಡಲಾಗಿದೆ.

2016ರಿಂದಲೇ ಸಂಶೋಧನೆ

ಸಗಣಿಯಿAದ ಬಣ್ಣ ತಯಾರಿಸಬಹುದು ಎಂಬ ಸಂಶೋಧನೆಯನ್ನು ಮೊದಲು ಆರಂಭಿಸಿದ್ದು ತಮಿಳುನಾಡಿನ ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಜ್ಞರು. ಆದರೆ ಸಗಣಿಯಿಂದ ನೈಸರ್ಗಿಕ ಬಣ್ಣ ತಯಾರಿಸಸಿದ ಕೀರ್ತಿ ಸಲ್ಲುವುದು ರಾಜಸ್ಥಾನದ ಜೈಪುರದಲ್ಲಿರುವ ಕುಮಾರಪ್ಪ ನ್ಯಾಷನಲ್ ಹ್ಯಾಂಡ್‌ಮೇಡ್ ಪೇಪರ್ ಇನ್ಸ್ಟಿಟ್ಯೂಟ್‌ಗೆ (ಕೆಎನ್‌ಎಚ್‌ಪಿಐ). ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಡಿಯಲ್ಲಿ ಬರುವ ಕೆಎನ್‌ಎಚ್‌ಪಿಐ ವತಿಯಿಂದ ಹಸುವಿನ ಸಗಣಿಯಲ್ಲಿ ಎಮಲ್ಷನ್ ಪೇಂಟ್ ತಯಾರಿಸಲಾಗುತ್ತಿದೆ ಎಂದು 2019ರ ಆಗಸ್ಟ್ನಲ್ಲಿ ಪಶುಸಂಗೋಪನಾ ಸಚಿವ ಗಿರಿರಾಜ್ ಸಿಂಗ್ ಫೇಸ್‌ಬುಕ್ ಮೂಲಕ ಮಾಹಿತಿ ನೀಡಿದ್ದರು.

ಸಚಿವ ಗಡ್ಕರಿ ಘೋಷಣೆ

ಖಾದಿ ಗ್ರಾಮೋದ್ಯೋಗ ಮಂಡಳಿಯ ಪರಿಸರ ಸ್ನೇಹಿ ಬಣ್ಣದ ಕುರಿತು ಮೊದಲ ಬಾರಿ ಮಾಹಿತಿ ಬಹಿರಂಗಪಡಿಸಿದ್ದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ. ಈ ಬಗ್ಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಟ್ವೀಟ್ ಮಾಡಿದ್ದ ಸಚಿವ ಗಡ್ಕರಿ, ‘ಖಾದಿ ಗ್ರಾಮೋದ್ಯೋಗ ಮಂಡಳಿಯು ಗೋವಿನ ಸಗಣಿಯನ್ನು ಬಳಸಿ ತಯಾರಿಸಿರುವ ವೇದಿಕ್ ಪೇಂಟ್ ಅನ್ನು ನಾವು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ’ ಎಂದು ಹೇಳಿದ್ದರು.

ರೈತರಿಂದ ಸಗಣಿ ಖರೀದಿ

ಗೋವಿನ ಸಗಣಿಯಿಂದ ಗೋಡೆಗಳಿಗೆ ಹಚ್ಚುವ ಬಣ್ಣ ತಯಾರಿಸಲು ಸಂಶೋಧನೆ ನಡೆಸುತ್ತಿರುವ ಬಗ್ಗೆ ಮೊದಲ ಬಾರಿ ಮಾಹಿತಿ ನೀಡಿದ್ದ ಸಚಿವ ಗಿರಿರಾಜ್ ಸಿಂಗ್, ಇದಕ್ಕಾಗಿ ರಾಜಸ್ಥಾನದ ಪ್ರತಿ ಒಂದು ಕೆ.ಜಿ. ಸಗಣಿಗೆ 5 ರೂ. ನೀಡಿ ರೈತರಿಂದ ಹಸುವಿನ ಸಗಣಿ ಖರೀದಿಸುತ್ತಿದ್ದೇವೆ ಎಂದು ತಿಳಿಸಿದ್ದರು. ಈ ಸಂಶೋಧನೆಯ ಆರಂಭಿಕ ಹಂತದಲ್ಲೇ, ಮನೆಯಲ್ಲಿ ಕೇವಲ 2 ಹಸು ಕಟ್ಟಿರುವ ರೈತ ದಿನವೊಂದಕ್ಕೆ 100ರಿಂದ 150 ರೂ. ಆದಾಯ ಗಳಿಸುತ್ತಿದ್ದ. ರೈತರ ಆದಾಯ ವೃದ್ಧಿಯಾಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಗಮನದಲ್ಲಿ ಇರಿಸಿಕೊಂಡು ಈ ಯೋಜನೆ ರೂಪಿಸಲಾಗಿದ್ದು, ಒಂದು ಹಸು ಹೊಂದಿರುವ ರೈತ ವರ್ಷವೊಂದಕ್ಕೆ 30 ಸಾವಿರ ರೂ. ಹೆಚ್ಚುವರಿ ಆದಾಯ ಗಳಿಸಬಹುದಂತೆ.