News

ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಸಿ ಬೆಳೆದ ಬೆಳೆ ದಾಖಲಿಸಿ

26 August, 2020 11:02 PM IST By:

ಪ್ರಸಕ್ತ 2020-21ನೇ ಸಾಲಿನ ಬೆಳೆ ಸಮೀಕ್ಷೆಯು ಪ್ರಾರಂಭಗೊಂಡಿದ್ದು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್’  (Crop survey mobile App) ಮೂಲಕ ದಾಖಲಿಸಬೇಕೆಂದು ಕಲಬುರಗಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

    ಇದಲ್ಲದೇ ರೈತರು (farmers) ತಮ್ಮ ಗ್ರಾಮಕ್ಕೆ ನಿಯೋಜಿಸಿದ ಖಾಸಗಿ ನಿವಾಸಿಗಳನ್ನು  ಪಿ.ಆರ್.( P.R)) ಇವರನ್ನು ಸಂಪರ್ಕಿಸಿ ಬೆಳೆ ದಾಖಲೀಕರಣ ಮಾಡಬೇಕು. ತಾವು ಬೆಳೆ ಸಮೀಕ್ಷೆಯಲ್ಲಿ ಅಪಲೋಡ್ ಮಾಡಿದ ಬೆಳೆ ಸಮೀಕ್ಷೆಯ (crop survey) ದತ್ತಾಂಶವು ಬೆಳೆಹಾನಿ ಪರಿಹಾರ, ಬೆಳೆ ವಿಮೆ, ಬೆಳೆ ಕಟಾವು ಪ್ರಯೋಗ, ಗರಿಷ್ಠ ಬೆಂಬಲ ಬೆಲೆ, ಆರ್.ಟಿ.ಸಿ. (RTC)) ಯಲ್ಲಿ ಬೆಳೆ ದಾಖಲು, ಬೆಳೆ ಖರೀದಿ ಹೀಗೆ ವಿವಿಧ ಯೋಜನೆಗಳಿಗೆ ಉಪಯುಕ್ತವಾಗಲಿದೆ.

     ಎಲ್ಲಾ ರೈತರು ಕಡ್ಡಾಯವಾಗಿ ಬೆಳೆ ಸಮೀಕ್ಷೆಯಲ್ಲಿ ಭಾಗವಹಿಸಿ ಬೆಳೆಗಳ ದಾಖಲೀಕರಣ ಮಾಡಬೇಕು. ರೈತರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.