News

2019-20 ನೇ ಸಾಲಿನಲ್ಲಿ ಯೂರಿಯಾ ಆಮದು 22% ರಷ್ಟು ಏರಿಕೆ

28 September, 2020 8:34 AM IST By:

ಕಳೆದ ಆರ್ಥಿಕ ವರ್ಷದಲ್ಲಿ ಯೂರಿಯಾ ಆಮದು 22%ರಷ್ಟು ಏರಿಕೆಯಾಗಿದ್ದು ಅದು 91.23 ಲಕ್ಷ ಟನ್‍ಗಳಷ್ಟಾಗಿತ್ತು ಎಂದು ಸರ್ಕಾರವು ಹೇಳಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರವನ್ನು ನೀಡುತ್ತಾ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾದ  ಡಿ.ವಿ.ಸದಾನಂದಗೌಡ ಅವರು ಕಳೆದ, ಆರ್ಥಿಕ ವರ್ಷದಲ್ಲಿ ಯೂರಿಯಾ ಆಮದು ಮೌಲ್ಯವು $2302.95ಮಿಲಿಯನ್ ಗಳಷ್ಟಾಗಿತು ಎಂದು ತಿಳಿಸಿದ್ದಾರೆ.

2018-19ನೇ ಸಾಲಿನನಲ್ಲಿ ಯೂರಿಯಾ ಆಮದು74.81ಲಕ್ಷ ಟನ್‍ಗಳಷ್ಟಾಗಿದ್ದು ಅದರ ಮೌಲ್ಯವು $240014ಮಿಲಿಯನ್ ಗಳಷ್ಟಾಗಿತ್ತು. ಆದರೆ 2019-20  ನೇ ಸಾಲಿನಲ್ಲಿ  ಡೈ ಅಮೋನಿಯಂ ಫಾಸ್‍ಫೆಟ್ (ಡಿಎಪಿ) ನ ಆಮದು ಹಿಂದಿನ ವರ್ಷದ 66.02ಲಕ್ಷ ಟನ್ ಗಳಿಂದ 48.7ಲಕ್ಷ ಟನ್ ಗಳಿಗೆ ಇಳಿಕೆಯಾಗಿತ್ತು.