News

ಯುಪಿಎಸ್‌ಸಿ: 829 ಅಭ್ಯರ್ಥಿಗಳ ಆಯ್ಕೆ

05 August, 2020 12:13 PM IST By:

 

ಕೇಂದ್ರ ಲೋಕಸೇವಾ ಆಯೋಗವು (UPSC) 2019ನೇ ಸಾಲಿನ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟು 829 ಅಭ್ಯರ್ಥಿಗಳು ಕೇಂದ್ರ ಆಡಳಿತ ಸೇವೆಯ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹತೆ ಪಡೆದಿದ್ದಾರೆ.

ಕರ್ನಾಟಕದ ಒಬ್ಬ ದೃಷ್ಟಿದೋಷವುಳ್ಳ ಅಭ್ಯರ್ಥಿ ಸೇರಿದಂತೆ ರಾಜ್ಯದ 39 ಕ್ಕೂ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಕೇವಲ 23 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ವರ್ಷ 39 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಹರಿಯಾಣದ ಪ್ರದೀಪ್ ಸಿಂಗ್ (Pradeepsing), ದೆಹಲಿಯ ಜತಿನ್ ಕಿಶೋರ್ (Jatin kishore) ಮತ್ತು ಉತ್ತರ ಪ್ರದೇಶದ ಪ್ರತಿಭಾ ವರ್ಮಾ (Pratibha varma) ಕ್ರಮವಾಗಿ ಮೊದಲ ಮೂರು ಸ್ಥಾನಗ ಳನ್ನು ಪಡೆದುಕೊಂಡಿದ್ದಾರೆ. ಈ ಮೂವರೂ ಹಾಲಿ ಐಎಎಸ್‌ (IAS)ಯೇತರ ಸೇವೆಯಲ್ಲಿರುವ ಅಧಿಕಾರಿಗಳು.

ಒಟ್ಟು 927 ಹುದ್ದೆಗಳಿಗಾಗಿ 2019ನೇ ಸಾಲಿನಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. 11 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ಅಯೋಗ ತಿಳಿಸಿದೆ.  ಯುಪಿಎಸ್‌ಸಿ ವಾರ್ಷಿಕ ಮೂರು ಹಂತಗಳಲ್ಲಿ (ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ) ಪರೀಕ್ಷೆ ನಡೆಸುತ್ತದೆ. 

ಎಚ್.ಎಸ್. ಕೀರ್ತನಾ (Keertana) (167) ಅವರು 200ರೊಳಗಿನ ರ‍್ಯಾಂಕಿಂಗ್‌ನಲ್ಲಿದ್ದರೆ, ಹೇಮಂತ್‌ ನಾಯಕ್‌ (225), ಕೆ.ಎಂ.ಪ್ರಿಯಾಂಕಾ (257), ಎಂ.ಜೆ. ಅಭಿಷೇಕ್‌ ಗೌಡ (278), ಕೃತಿ ಭಟ್‌ (297) ಮುನ್ನೂರರ ಗಡಿಯೊಳಗಿದ್ದಾರೆ. ಎಚ್.ಎನ್. ಮಿಥುನ್ (359), ವೆಂಕಟರಮಣ ಕವಡಿಕೇರಿ (363), ಎಚ್.ಆರ್. ಕೌಶಿಕ್‌ (380), ಮಂಜುನಾಥ್‌ ಆರ್ (406), ಹರೀಶ್‌ ಬಿ.ಸಿ. (409), ಆರ್.ಯತೀಶ್‌ (419), ಎಚ್‌.ಬಿ. ವಿವೇಕ್‌ (444), ಆನಂದ್‌ ಕಲಾದಗಿ (446), ಕೆ.ಟಿ. ಮೇಘನಾ (465), ಡಾ. ವಿವೇಕ್‌ ರೆಡ್ಡಿ ಎನ್‌. (485), ಎನ್. ಹೇಮಂತ್‌ (498), ಕೆ. ವರುಣ್‌ಗೌಡ (528), ಪ್ರಫುಲ್‌ ದೇಸಾಯಿ (532), ಎನ್. ರಾಘವೇಂದ್ರ (536), ಕೆ.ಆರ್. ಭರತ್‌ (545), ಆರ್. ಸುಹಾಸ್‌ (583), ಪ್ರಜ್ವಲ್‌ (636), ಎ.ಎಂ. ಚೈತ್ರಾ (713) ಹಾಗೂ ಜಿ.ಎಸ್. ಚಂದನ್‌ (777) ಅವರು ರಾಜ್ಯದಲ್ಲಿ ಮೊದಲ ಮೂವತ್ತರೊಳಗೆ ಸ್ಥಾನ ಪಡೆದಿದ್ದಾರೆ.

ದೃಷ್ಟಿದೋಷ ಹಿಂದಿಕ್ಕಿ ಗೆದ್ದ ಮೇಘನಾ (Meghana):

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2019ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 465ನೇ ರ‍್ಯಾಂಕ್ ಪಡೆದ ವಿಜಯನಗರದ ಮೇಘನಾ ಕೆ.ಟಿ, ದೃಷ್ಟಿ ದೋಷದ ಮಧ್ಯೆಯೂ, ದೃಷ್ಟಿನೆಟ್ಟು ಪರೀಕ್ಷೆ ಬರೆದು ಗುರಿ ತಲುಪಿದ ಸಾಧಕಿ.167ನೇ ರ‍್ಯಾಂಕ್‌ ಪಡೆದ ನಂದಿನಿ ಲೇಔಟ್‌ ನಿವಾಸಿ ಕೀರ್ತನಾ ಎಚ್‌.ಎಸ್‌, ಬಾಲನಟಿಯಾಗಿ 32 ಸಿನಿಮಾ, 48 ಧಾರಾವಾಹಿಗಳಲ್ಲಿ ನಟಿಸಿ ಮಿಂಚಿದವರು! ಮೇಘನಾ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ, ಶೇ.70ರಷ್ಟು ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಕಳೆದುಕೊಂಡಿದ್ದರು. ಆದರೆ ತಮ್ಮಗಿರುವ ಈ ವೈಕಲ್ಯವನ್ನು ಮೆಟ್ಟಿನಿಂತು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.