News

ಸಂಕಷ್ಟದಲ್ಲಿರುವ ರೈತರ ಬೆಳೆ ಖರೀದಿ ಮಾಡಲು ನಟ ಉಪೇಂದ್ರ ನಿರ್ಧಾರ

16 May, 2021 10:47 AM IST By:
Upendra

ಕೊರೊನಾ ಸೋಂಕಿನ ಎರಡನೇ ಅಲೆ ಮತ್ತು ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿರುವ ರೈತರ ಬೆಳೆಯನ್ನು ಖರೀದಿ ಮಾಡಲು ಮುಂದಾಗಿದ್ದಾರೆ ನಟ ಉಪೇಂದ್ರ. ಹೌದು, ಇದಕ್ಕಾಗಿ ಒಂದು ವ್ಯಾಟ್ಸ್ ಅಪ್ ನಂಬರ್ ನೀಡಿ ಅದಕ್ಕೆ ಮಾಹಿತಿ ನೀಡಿದರೆ ಖರೀದಿ ಮಾಡಲು ಮನಸ್ಸು ಮಾಡಿದ್ದಾರೆ.

ಕೊರೋನಾ  ಸೋಂಕು ತಡೆಯುವುದಕ್ಕಾಗಿ ಸರ್ಕಾರ ಹೇರಿದ್ದ ಲಾಕ್ಡೌನ್ ನಿಂದಾಗಿ ರೈತರು ತೀರ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೆ, ಹಾಕಿದ ಖರ್ಚು ಬರದೆ ಇರುವುದರಿಂದ ಕೆಲ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆ ಮೇಲೆ ಎಸೆಯುತ್ತಿದ್ದರಿಂದ  ನಟ ಉಪೇಂದ್ರ ರೈತರ ನೆರವಿಗೆ  ಧಾವಿಸಿದ್ದಾರೆ. ಈ ಕುರಿತು ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.

ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇಲ್ಲದಾಗಿದೆ, ಹಣ್ಣು-ತರಕಾರಿಗಳನ್ನು ಹೇಗೆ ನಗರಗಳಿಗೆ ಸಾಗಣೆ ಮಾಡುವುದು, ಮಾರುಕಟ್ಟೆ ಎಲ್ಲಿದೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಕೆಲವು ಕಡೆಗಳಲ್ಲಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಯಿಲ್ಲದೆ ನೆಲದಲ್ಲಿ ಚೆಲ್ಲಿದ, ನಾಶಮಾಡಿದ ಉದಾಹರಣೆಗಳು ಸಾಕಷ್ಟಿವೆ. ಇದನ್ನೆಲ್ಲಾ ಕಂಡು ಉಪೇಂದ್ರರವರು ಟ್ವೀಟರ್ ನಲ್ಲಿ ಹೇಳಿಕೊಂಡಿರುವ ಮಾಹಿತಿ... ನೀವು ಬೆಳೆದ ಬೆಳೆಗಳ ಮಾಹಿತಿ ಒದಗಿಸಿ ಅದನ್ನು ನಾವು ಖರೀದಿಸುತ್ತೇವೆ ಎಂದು ಕರೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಉಪೇಂದ್ರ ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ...... ನಮಗೆ ಅವಶ್ಯಕತೆಯಿರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಎಖರೀದಿಸಿ ಅವಶ್ಯಕತೆಯಿರುವವರಿಗೆ ಹಂಚುತ್ತೇನೆ. ಈ ಕೆಳಗಿನ ಮೊಬಲ್ ಸಂಖ್ಯೆಗೆ (ಮೇ 24 ರೊಳಗೆ) 9845763396 ಕರೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ರೈತರು ಹಂಚಿಕೊಳ್ಳಬೇಕಾದ ಮಾಹಿತಿ..

ನೀವು ಬೆಳೆದ ಬೆಳೆ ಯಾವುದು?

ಆ ಬೆಳೆ ಎಷ್ಟು ಕೆಜಿ/ಕ್ವಿಂಟಾಲ್ ಇದೆ?

ಅದರ ಅಂತಿಮ ಬೆಲೆ ಎಷ್ಟು?

ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವೆಚ್ಚ ಎಷ್ಟು?

ಈ ವಿವರಗಳನ್ನು ವ್ಯಾಟ್ಸ್ ಅಪರ್ ನಂಬರ್ 9845763396 ಗೆ ಕಳುಹಿಸಿಕೊಡಿ ಎಂದು ಉಪ್ಪೀ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಉಪೇಂದ್ರ ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ಪಾತ್ರವಾಗಿದೆ. ಸಂಕಷ್ಟದ ಸಮಯದಲ್ಲಿ ರೈತರ ಕೈಹಿಡಿಯಲು ಮುಂದೆ ಬಂದಿರುವ ಉಪೇಂದ್ರಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.