ಗುರುತಿನ ಚೀಟಿಗಳಲ್ಲಿ ಪ್ಯಾನ್ ನಂಬರ್ ಪ್ರಮುಖವಾಗಿದೆ. ಇತ್ತೀಚಿನ ಕಾಲದಲ್ಲಿ ಪ್ರತಿಯೊಂದಕ್ಕೂ ಪ್ಯಾನ್ ಕಾರ್ಡ್ ಪ್ರಾಮುಖ್ಯತೆ ಪಡೆದಿದೆ. ಬ್ಯಾಂಕ್ ಅಕೌಂಟ್ಸ್ ತೆರೆಯಲು, ಆಧಾರ್ ಕಾರ್ಡ್ ಹೀಗೆ ಪ್ರತಿಯೊಂದು ದಾಖಲೆಗೂ ಒಂದಕ್ಕೊಂದು ಲಿಂಕ್ ಮಾಡುವುದು ಸಾಮಾನ್ಯವಾಗಿದೆ. ಅಲ್ಲದೆ ತೆರಿಗೆ ಪಾವತಿಯ ಎಲ್ಲ ಮಾಹಿತಿಗಳನ್ನು ಒಳಗೊಂಡ ಅತಿ ಮುಖ್ಯ ದಾಖಲೆ ಇದಾಗಿದೆ.
ನೀವು ಅಥವಾ ನಿಮ್ಮ ಕಂಪನಿ ಒಂದು ವಿಳಾಸದಿಂದ ಮತ್ತೊಂದು ವಿಳಾಸಕ್ಕೆ ಅನಿವಾರ್ಯ ಕಾರಣದಿಂದ ಸಂಚಾರ ಮಾಡಬೇಕಾಗಿ ಬರುತ್ತದೆ.ಆ ಸಮಯದಲ್ಲಿ ನೀವು ಪಾನ್ ಕಾರ್ಡ್ ನಲ್ಲಿ ಇರುವ ವಿಳಾಸವನ್ನು ಬದಲಾವಣೆ ಮಾಡಬೇಕಾಗುತ್ತದೆ.
ಒಂದೊಮ್ಮೆ ಪ್ಯಾನ್ ಕಾರ್ಡಿನಲ್ಲಿ ಏನಾದರೂ ತಪ್ಪು ಮಾಹಿತಿಗಳು ನುಸುಳಿದ್ದಲ್ಲಿ ಅದರಿಂದ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳು ಸಹ ಉದ್ಭವವಾಗಬಹುದು. ಆದ್ದರಿಂದ ಪ್ಯಾನ್ ಕಾರ್ಡಿನಲ್ಲಿ ಏನಾದರೂ ಮಾಹಿತಿ ತಪ್ಪಾಗಿದ್ದರೆ ಅವನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಹಾಗಾದರೆ ಪ್ಯಾನ್ ಕಾರ್ಡಿನಲ್ಲಿನ ವಿವರಗಳನ್ನು ಬದಲಾವಣೆ ಮಾಡುವುದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.
ಪ್ಯಾನ್ ಕಾರ್ಡ್ನಲ್ಲಿ ಮಾಹಿತಿಯನ್ನು ಬದಲಾವಣೆ ಮಾಡಲು ಈಗ ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಅಪ್ಡೇಡ್ ಮಾಡಬಹುದು. ಹೌದು, ಗೆ ನಿಮ್ಮ ವೆಬ್ ಬ್ರೌಸರಿನಲ್ಲಿ https://www.tin-nsdl.com/ ವಿಳಾಸ ನಮೂದಿಸಿ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ 2. Services ಮೆನುದಲ್ಲಿ ಕಾಣುವ “PAN” ಎಂಬುದನ್ನು ಕ್ಲಿಕ್ ಮಾಡಬೇಕು. . Change/ Correction in PAN data ಎಂಬುದನ್ನು ಆಯ್ಕೆ ಮಾಡಿಕೊಂಡು ಅದರೊಳಗೆ ಕಾಣುವ Apply ಬಟನ್ ಕ್ಲಿಕ್ ಮಾಡಬೇಕು. ಗ ಡ್ರಾಪ್ ಡೌನ್ ಮೆನುವಿನಿಂದ Changes or Correction in existing PAN data/Reprint of PAN Card (No changes in Existing PAN Data) ಎಂಬುದನ್ನು ಆಯ್ಕೆ ಮಾಡಿಕೊಳಬೇಕು.
ಪ್ಯಾನ್ ಕಾರ್ಡಿನ ಕೆಟೆಗರಿ ಆಯ್ಕೆ ಮಾಡಿಕೊಂಡು ನಿಮ್ಮ ಎಲ್ಲ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ ಕ್ಯಾಪ್ಚಾ ಕೋಡ್ ನಮೂದಿಸಿ submit ಮೇಲೆ ಕ್ಲಿಕ್ ಮಾಡಬೇಕು. ನೀವು ನೀಡಿದ ಈಮೇಲ್ ಗೆ ಒಂದು ಸಂದೇಶ ಬರುತ್ತದೆ. ಅಲ್ಲಿ ನೀಡಲಾದ ಬಟನ್ ಒಂದನ್ನು ಕ್ಲಿಕ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಮುಂದುವರಿಸಬೇಕಾಗುತ್ತದೆ. ಮೇಲ್ ಗೆ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ Submit scanned images through e-Sign on NSDL e-gov ಎಂಬುದನ್ನು ಕ್ಲಿಕ್ ಮಾಡಬೇಕು. ಅಗತ್ಯವಾದ ವಿವರಗಳನ್ನೆಲ್ಲ ತುಂಬಿ Next ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಬಹುದು.
ಈ ಪೇಜಿನಲ್ಲಿ ನಿಮ್ಮ ವಿಳಾಸದ ದಾಖಲೆ, ವಯಸ್ಸಿನ ದಾಖಲೆ, ಗುರುತಿನ ದಾಖಲೆ ಹಾಗೂ ಪ್ಯಾನ್ ಈ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಆಗ ತೆರೆದುಕೊಳ್ಳುವ ಡಿಕ್ಲೆರೇಶನ್ ಗೆ ಸಹಿ ಹಾಕಿ Submit ಮೇಲೆ ಕ್ಲಿಕ್ ಮಾಡಬೇಕು. ನಂತರ ಪೇಮೆಂಟ್ ಗೇಟ್ ವೇ ಗೆ ಪೇಜ್ ರಿಡೈರೆಕ್ಟ್ ಆಗುತ್ತದೆ ಹಾಗೂ ಇಲ್ಲಿ ಶುಲ್ಕ ಪಾವತಿಸಿದ ನಂತರ ಸ್ವೀಕೃತಿ ಪತ್ರ ಬರುತ್ತದೆ. ಸ್ವೀಕೃತಿ ಪತ್ರವನ್ನು ಭೌತಿಕವಾಗಿ ಪ್ರಿಂಟ್ ಹಾಕಿ ಇದರೊಂದಿಗೆ ಸಬ್ಮಿಟ್ ಮಾಡಲಾದ ಎಲ್ಲ ದಾಖಲೆಗಳನ್ನು ಲಗತ್ತಿಸಿ NSDL e-gov ಕಚೇರಿಗೆ ಕಳುಹಿಸಿ. ಇದರೊಂದಿಗೆ ಪಾಸ್ ಪೋರ್ಟ್ ಸೈಜಿನ ಭಾವಚಿತ್ರವೊಂದನ್ನು ಸ್ವೀಕೃತಿ ಪತ್ರದಲ್ಲಿ ತೋರಿಸಲಾದ ಜಾಗದಲ್ಲಿ ಅಂಟಿಸಿ, ಅದರ ಮೇಲೆ ಅಡ್ಡಲಾಗಿ ಸಹಿ ಮಾಡಿ ಕಳುಹಿಸಿಕೊಡಬೇಕು.
ಏನಿದು ಇ ಪ್ಯಾನ್: ಎಲೆಕ್ಟ್ರಾನಿಕ್-ಪ್ಯಾನ್ ಕಾರ್ಡ್ ಇದರ ವಿಸ್ತೃತ ರೂಪ. ಇ ಪ್ಯಾನ್ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್ ಕಾರ್ಡ್ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹಾಗೂ ಹೊಸ ಪ್ಯಾನ್ ಕಾರ್ಡ್ ದಾರರು ಇ ಪ್ಯಾನ್ ಪಡೆದುಕೊಳ್ಳಬಹುದು.