News

ಜುಲೈಯಲ್ಲೂ ಶಾಲೆ ಕಾಲೇಜು ಬಂದ್; ಅನ್‌ಲಾಕ್‌ 2.0: ಕೇಂದ್ರ ಮಾರ್ಗಸೂಚಿ ಪ್ರಕಟ

30 June, 2020 10:58 AM IST By:

ದೇಶಾದ್ಯಂತ ಮಾರಕ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿಯಂತ್ರಣಕ್ಕೆ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಹಾಗಾಗಿ ಈ 2ನೇ ಹಂತದ ನಿರ್ಬಂಧ ತೆರವು ಮೊದಲ ಹಂತದ ಮಾದರಿಯಲ್ಲೇ ಮುಂದುವರಿಯಲಿದೆ..

ಕೊರೋನಾ ಹಿನ್ನೆಲೆಯಲ್ಲಿ ಮಾರ್ಚ್‌ 25 ರಂದು ಘೋಷಿಸಿದ್ದ ಲಾಕ್‌ಡೌನ್‌ನ್ನು ಜುಲೈ 31ರವರೆಗೆ ವಿಸ್ತರಿಸಿ ಕೇಂದ್ರ ಸರಕಾರ ಆದೇಶಿಸಿದೆ  ಲಾಕ್​ಡೌನ್ ನಿಯಮಗಳನ್ನು ಮತ್ತಷ್ಟು ಸಡಿಲಿಸಲಾಗುತ್ತಿದ್ದು,  ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್‌ಲಾಕ್‌ 2.0 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದ್ದಾರೆ.

ಕಂಟೇನ್ಮೆಂಟ್ ವಲಯದ ಹೊರಗೆ ಧಾರ್ವಿುಕ ಸ್ಥಳಗಳು ಮತ್ತು ಇತರ ಸಾರ್ವಜನಿಕ ಪ್ರಾರ್ಥನಾ ಸ್ಥಳಗಳು, ಹೋಟೆಲ್ ಮತ್ತು ರೆಸ್ಟೋರೆಂಟ್​ಗಳು, ಶಾಪಿಂಗ್ ಮಾಲ್​ಗಳ ಚಟುವಟಿಕೆಗೆ ನೀಡಿದ ಅನುಮತಿಯನ್ನು ಜುಲೈ 1ರಿಂದ ಜಾರಿಗೆ ಬರುವ ಅನ್​ಲಾಕ್ 2.0 ದಲ್ಲಿ ವಿಸ್ತರಿಸಲಾಗಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿಯಮಾವಳಿಗಳನ್ನು ದುರ್ಬಲಗೊಳಿಸದಂತೆ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್ ಭಲ್ಲಾ ಎಚ್ಚರಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳನ್ನು ಜುಲೈ 31 ರವರೆಗೆ ತೆರೆಯಲು ಅವಕಾಶವಿಲ್ಲ. ಮೆಟ್ರೋ, ರೈಲು, ಸಿನೆಮಾ ಮಂದಿರಗಳು ಮತ್ತು ಜಿಮ್ ತೆರೆಯಲು ಅವಕಾಶವಿಲ್ಲ.  ಹೆಚ್ಚು ಜನರು ಸೇರುವ ರಾಜಕೀಯ, ಸಾಮಾಜಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳಿಗೂ ಅವಕಾಶವಿಲ್ಲ. ಈ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ಪರಿಸ್ಥಿತಿ ಅವಲೋಕಿಸಿ ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ

- ಜುಲೈ 31ರ ವರೆಗೆ ಕಂಟೇನ್ಮೆಂಟ್ ವಲಯಗಳಲ್ಲಿ ಲಾಕ್​ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತವೆ.

- ಶಾಲಾ-ಕಾಲೇಜ್​ಗಳು, ತರಬೇತಿ ಸಂಸ್ಥೆಗಳು, ಕೋಚಿಂಗ್ ಕೇಂದ್ರಗಳು ಜುಲೈ 31ರ ವರೆಗೆ ಮುಚ್ಚಿರುತ್ತವೆ. ಸರ್ಕಾರಿ ತರಬೇತಿ ಸಂಸ್ಥೆಗಳನ್ನು ಜುಲೈ 15ರಿಂದ ತೆರೆಯಬಹುದು.

- ರಾತ್ರಿ ಕರ್ಫ್ಯೂ ನಿರ್ಬಂಧಗಳೊಂದಿಗೆ ಮುಂದುವರಿಯುತ್ತದೆ.

- ಅಂಗಡಿಗಳಲ್ಲಿ ಗರಿಷ್ಠ ಐದು ಜನರೊಂದಿಗೆ ಚಟುವಟಿಕೆ ನಡೆಸಬಹುದಾಗಿದೆ. ಗ್ರಾಹಕರು ದೈಹಿಕ ಅಂತರ ಕಾಯ್ದುಕೊಳ್ಳಬೇಕು.

- ಈಗ ಮಿತ ಸಂಖ್ಯೆಯಲ್ಲಿ ಸಂಚರಿಸುತ್ತಿರುವ ದೇಶೀಯ ವಿಮಾನ ಹಾರಾಟ ಮತ್ತು ಪ್ರಯಾಣಿಕ ರೈಲುಗಳ ಸಂಚಾರ ಇನ್ನಷ್ಟು ವಿಸ್ತರಣೆ. ಅದರ ವಿವರಗಳನ್ನು ಮುಂದೆ ಪ್ರಕಟಿಸಲಾಗುವುದು.

- ಎಲ್ಲ ಪ್ಯಾಸೆಂಜರ್ ರೈಲು, ಅಂತಾರಾಷ್ಟ್ರೀಯ ವಿಮಾನ ಸೇವೆ, ಮೆಟ್ರೊ ರೈಲು, ಸಿನಿಮಾ ಮಂದಿರ, ಈಜುಕೊಳ, ಸಭಾಂಗಣ, ಜಿಮ್ ಅಮ್ಯೂಸ್​ವೆುಂಟ್ ಪಾರ್ಕ್​ಗಳಿಗೆ ಇರುವ ನಿರ್ಬಂಧ ಮುಂದಿನ ಸೂಚನೆವರೆಗೆ ಮುಂದುವರಿಯಲಿದೆ.

 ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಹೆಚ್ಚು ಜನ ಸೇರುವ ಕಾರ್ಯಕ್ರಮಗಳು ಮಾಡುವಂತಿಲ್ಲ.